د قرآن کریم د معناګانو ژباړه - کنادي ژباړه - حمزه بتور

external-link copy
71 : 2

قَالَ اِنَّهٗ یَقُوْلُ اِنَّهَا بَقَرَةٌ لَّا ذَلُوْلٌ تُثِیْرُ الْاَرْضَ وَلَا تَسْقِی الْحَرْثَ ۚ— مُسَلَّمَةٌ لَّا شِیَةَ فِیْهَا ؕ— قَالُوا الْـٰٔنَ جِئْتَ بِالْحَقِّ ؕ— فَذَبَحُوْهَا وَمَا كَادُوْا یَفْعَلُوْنَ ۟۠

ಮೂಸಾ ಹೇಳಿದರು: “ಅದು ಎಂತಹ ಹಸುವೆಂದರೆ, ಭೂಮಿಯನ್ನು ಉಳಲು ಅಥವಾ ನೀರನ್ನು ಹಾಯಿಸಲು ಅದನ್ನು ಪಳಗಿಸಲಾಗಿಲ್ಲ; ಅದಕ್ಕೆ ಯಾವುದೇ ನ್ಯೂನತೆಗಳಿಲ್ಲ; ಅದರಲ್ಲಿ ಯಾವುದೇ ಕಲೆಗಳೂ ಇಲ್ಲ ಎಂದು ಅಲ್ಲಾಹು ಹೇಳುತ್ತಿದ್ದಾನೆ.” ಅವರು ಹೇಳಿದರು: “ಈಗ ನೀವು ಸತ್ಯವನ್ನು ತಂದಿದ್ದೀರಿ.” ಹೀಗೆ ಅವರು ಅದನ್ನು ಕೊಯ್ದರು. ಆದರೆ ಅದನ್ನು ಮಾಡುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ.[1] info

[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಒಂದು ಹಸುವನ್ನು ಕೊಯ್ಯಲು ಹೇಳಿದ್ದರು. ನಿರ್ದಿಷ್ಟವಾಗಿ ಯಾವುದು ಎಂದು ಹೇಳಿರಲಿಲ್ಲ. ಆದ್ದರಿಂದ ಯಾವುದೇ ಒಂದು ಹಸುವನ್ನು ಕೊಯ್ದರೆ ಸಾಕಾಗುತ್ತಿತ್ತು. ಆದರೆ ಅವರು ವಿನಾಕಾರಣ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿ ವಿಷಯವನ್ನು ಜಟಿಲಗೊಳಿಸಿದರು. ಕೊನೆಗೆ ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೇಳಿದಂತಹ ಒಂದು ಹಸುವನ್ನು ಹುಡುಕಿ ತರುವುದು ಅವರಿಗೆ ಬಹಳ ಕಷ್ಟವಾಯಿತು.

التفاسير: