د قرآن کریم د معناګانو ژباړه - کنادي ژباړه - حمزه بتور

د مخ نمبر:close

external-link copy
246 : 2

اَلَمْ تَرَ اِلَی الْمَلَاِ مِنْ بَنِیْۤ اِسْرَآءِیْلَ مِنْ بَعْدِ مُوْسٰی ۘ— اِذْ قَالُوْا لِنَبِیٍّ لَّهُمُ ابْعَثْ لَنَا مَلِكًا نُّقَاتِلْ فِیْ سَبِیْلِ اللّٰهِ ؕ— قَالَ هَلْ عَسَیْتُمْ اِنْ كُتِبَ عَلَیْكُمُ الْقِتَالُ اَلَّا تُقَاتِلُوْا ؕ— قَالُوْا وَمَا لَنَاۤ اَلَّا نُقَاتِلَ فِیْ سَبِیْلِ اللّٰهِ وَقَدْ اُخْرِجْنَا مِنْ دِیَارِنَا وَاَبْنَآىِٕنَا ؕ— فَلَمَّا كُتِبَ عَلَیْهِمُ الْقِتَالُ تَوَلَّوْا اِلَّا قَلِیْلًا مِّنْهُمْ ؕ— وَاللّٰهُ عَلِیْمٌۢ بِالظّٰلِمِیْنَ ۟

ಮೂಸಾರ ಕಾಲಾನಂತರ ಇಸ್ರಾಯೇಲ್ ಮಕ್ಕಳಲ್ಲಿ ಸೇರಿದ ಕೆಲವು ಮುಖಂಡರನ್ನು ನೀವು ನೋಡಿಲ್ಲವೇ? ಅವರು ತಮ್ಮ ಪ್ರವಾದಿಯೊಂದಿಗೆ, "ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲು ನಮಗೆ ಒಬ್ಬ ರಾಜನನ್ನು ನೇಮಿಸಿಕೊಡಿ" ಎಂದು ಹೇಳಿದ ಸಂದರ್ಭ. ಅವರು (ಪ್ರವಾದಿ) ಹೇಳಿದರು: "ನಿಮ್ಮ ಮೇಲೆ ಯುದ್ಧವು ಕಡ್ಡಾಯವಾದ ನಂತರ ನೀವೇನಾದರೂ ಯುದ್ಧ ಮಾಡದವರಾಗಿ ಬಿಟ್ಟರೆ?" ಅವರು ಹೇಳಿದರು: "ನಮ್ಮನ್ನು ನಮ್ಮ ಮನೆಗಳಿಂದ ಓಡಿಸಲಾಗಿರುವ ಮತ್ತು ನಮ್ಮಿಂದ ನಮ್ಮ ಮಕ್ಕಳನ್ನು ಬೇರ್ಪಡಿಸಲಾಗಿರುವ ಈ ಸ್ಥಿತಿಯಲ್ಲಿ ನಾವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಸಾಧ್ಯವೇ?" ಆದರೆ ಅವರ ಮೇಲೆ ಯುದ್ಧವು ಕಡ್ಡಾಯವಾದಾಗ ಅವರಲ್ಲಿ ಕೆಲವರ ಹೊರತು ಉಳಿದವರೆಲ್ಲರೂ ಮುಖ ತಿರುಗಿಸಿ ನಡೆದರು. ಅಲ್ಲಾಹನಿಗೆ ಅಕ್ರಮಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. info
التفاسير:

external-link copy
247 : 2

وَقَالَ لَهُمْ نَبِیُّهُمْ اِنَّ اللّٰهَ قَدْ بَعَثَ لَكُمْ طَالُوْتَ مَلِكًا ؕ— قَالُوْۤا اَنّٰی یَكُوْنُ لَهُ الْمُلْكُ عَلَیْنَا وَنَحْنُ اَحَقُّ بِالْمُلْكِ مِنْهُ وَلَمْ یُؤْتَ سَعَةً مِّنَ الْمَالِ ؕ— قَالَ اِنَّ اللّٰهَ اصْطَفٰىهُ عَلَیْكُمْ وَزَادَهٗ بَسْطَةً فِی الْعِلْمِ وَالْجِسْمِ ؕ— وَاللّٰهُ یُؤْتِیْ مُلْكَهٗ مَنْ یَّشَآءُ ؕ— وَاللّٰهُ وَاسِعٌ عَلِیْمٌ ۟

ಅವರೊಡನೆ ಅವರ ಪ್ರವಾದಿ ಹೇಳಿದರು: "ಅಲ್ಲಾಹು ನಿಮಗೆ ತಾಲೂತ‌ರನ್ನು (ಸೌಲ್) ರಾಜನಾಗಿ ನೇಮಿಸಿದ್ದಾನೆ." ಅವರು ಹೇಳಿದರು: "ಅವರು ನಮಗೆ ರಾಜನಾಗಲು ಹೇಗೆ ಸಾಧ್ಯ? ರಾಜ ಪದವಿಗೆ ಅವರಿಗಿಂತಲೂ ಹೆಚ್ಚು ಅರ್ಹತೆ ನಮಗಿದೆ. ಅವರಿಗೆ ಹೇರಳ ಆಸ್ತಿಪಾಸ್ತಿಯನ್ನೂ ನೀಡಲಾಗಿಲ್ಲ." ಅವರು (ಪ್ರವಾದಿ) ಹೇಳಿದರು: "ಅಲ್ಲಾಹು ನಿಮಗಿಂತ ಅವರನ್ನೇ ಆಯ್ಕೆ ಮಾಡಿದ್ದಾನೆ ಮತ್ತು ಅವರಿಗೆ ಬೌದ್ಧಿಕ ಹಾಗೂ ದೈಹಿಕ ಶ್ರೇಷ್ಠತೆಯನ್ನು ನೀಡಿದ್ದಾನೆ. ಅಲ್ಲಾಹು ಅವನು ಇಚ್ಛಿಸುವವರಿಗೆ ಅವನ ರಾಜ ಪದವಿ ನೀಡುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.” info
التفاسير:

external-link copy
248 : 2

وَقَالَ لَهُمْ نَبِیُّهُمْ اِنَّ اٰیَةَ مُلْكِهٖۤ اَنْ یَّاْتِیَكُمُ التَّابُوْتُ فِیْهِ سَكِیْنَةٌ مِّنْ رَّبِّكُمْ وَبَقِیَّةٌ مِّمَّا تَرَكَ اٰلُ مُوْسٰی وَاٰلُ هٰرُوْنَ تَحْمِلُهُ الْمَلٰٓىِٕكَةُ ؕ— اِنَّ فِیْ ذٰلِكَ لَاٰیَةً لَّكُمْ اِنْ كُنْتُمْ مُّؤْمِنِیْنَ ۟۠

ಅವರೊಡನೆ ಅವರ ಪ್ರವಾದಿ ಹೇಳಿದರು: "ಆ ಪೆಟ್ಟಿಗೆ ನಿಮ್ಮ ಬಳಿಗೆ ಬರುವುದು ಅವರ ರಾಜ ಪದವಿಯ ಸಂಕೇತವಾಗಿದೆ. ಅದರಲ್ಲಿ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮನಃಶಾಂತಿ ಮತ್ತು ಮೂಸಾ ಹಾಗೂ ಹಾರೂನರ ಕುಟುಂಬಗಳು ಬಿಟ್ಟು ಹೋದ ಅವಶೇಷಗಳಿವೆ. ಅದನ್ನು ದೇವದೂತರು ವಹಿಸಿಕೊಂಡು ಬರುತ್ತಾರೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ನಿಮಗೆ ಅದರಲ್ಲಿ ಸ್ಪಷ್ಟ ದೃಷ್ಟಾಂತವಿದೆ." info
التفاسير: