د قرآن کریم د معناګانو ژباړه - کنادي ژباړه - حمزه بتور

د مخ نمبر:close

external-link copy
35 : 16

وَقَالَ الَّذِیْنَ اَشْرَكُوْا لَوْ شَآءَ اللّٰهُ مَا عَبَدْنَا مِنْ دُوْنِهٖ مِنْ شَیْءٍ نَّحْنُ وَلَاۤ اٰبَآؤُنَا وَلَا حَرَّمْنَا مِنْ دُوْنِهٖ مِنْ شَیْءٍ ؕ— كَذٰلِكَ فَعَلَ الَّذِیْنَ مِنْ قَبْلِهِمْ ۚ— فَهَلْ عَلَی الرُّسُلِ اِلَّا الْبَلٰغُ الْمُبِیْنُ ۟

ಅಲ್ಲಾಹನೊಂದಿಗೆ (ಬೇರೆ ದೇವರುಗಳನ್ನು) ಸಹಭಾಗಿಗಳನ್ನಾಗಿ ಮಾಡಿದವರು ಹೇಳಿದರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸುತ್ತಿರಲಿಲ್ಲ. ಅವನು ಆಜ್ಞಾಪಿಸಿದ್ದಲ್ಲದೆ ಬೇರೇನನ್ನೂ ನಾವು ನಿಷಿದ್ಧವೆನ್ನುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ಮಾಡಿದ್ದರು. ಸಂದೇಶವಾಹಕರಿಗೆ ಸಂದೇಶವನ್ನು ತಲುಪಿಸುವುದಲ್ಲದೆ ಬೇರೇನಾದರೂ ಹೊಣೆಗಾರಿಕೆಯಿದೆಯೇ? info
التفاسير:

external-link copy
36 : 16

وَلَقَدْ بَعَثْنَا فِیْ كُلِّ اُمَّةٍ رَّسُوْلًا اَنِ اعْبُدُوا اللّٰهَ وَاجْتَنِبُوا الطَّاغُوْتَ ۚ— فَمِنْهُمْ مَّنْ هَدَی اللّٰهُ وَمِنْهُمْ مَّنْ حَقَّتْ عَلَیْهِ الضَّلٰلَةُ ؕ— فَسِیْرُوْا فِی الْاَرْضِ فَانْظُرُوْا كَیْفَ كَانَ عَاقِبَةُ الْمُكَذِّبِیْنَ ۟

“ಅಲ್ಲಾಹನನ್ನು ಆರಾಧಿಸಿರಿ ಮತ್ತು ಮಿಥ್ಯ ದೇವರುಗಳನ್ನು ತೊರೆಯಿರಿ” ಎಂಬ ಸಂದೇಶದೊಂದಿಗೆ ನಾವು ಎಲ್ಲಾ ಸಮುದಾಯಗಳಿಗೂ ಸಂದೇಶವಾಹಕರನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸಿದನು. ಕೆಲವರಿಗೆ ದುರ್ಮಾರ್ಗವು ಖಾತ್ರಿಯಾಗಿದೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿ. info
التفاسير:

external-link copy
37 : 16

اِنْ تَحْرِصْ عَلٰی هُدٰىهُمْ فَاِنَّ اللّٰهَ لَا یَهْدِیْ مَنْ یُّضِلُّ وَمَا لَهُمْ مِّنْ نّٰصِرِیْنَ ۟

(ಪ್ರವಾದಿಯವರೇ) ಅವರು ಸನ್ಮಾರ್ಗಿಗಳಾಗಬೇಕೆಂಬ ಹಂಬಲ ನಿಮಗಿದ್ದರೆ (ಅದು ವ್ಯರ್ಥ). ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ. ಅವರಿಗೆ ಸಹಾಯ ಮಾಡುವವರು ಯಾರೂ ಇಲ್ಲ. info
التفاسير:

external-link copy
38 : 16

وَاَقْسَمُوْا بِاللّٰهِ جَهْدَ اَیْمَانِهِمْ ۙ— لَا یَبْعَثُ اللّٰهُ مَنْ یَّمُوْتُ ؕ— بَلٰی وَعْدًا عَلَیْهِ حَقًّا وَّلٰكِنَّ اَكْثَرَ النَّاسِ لَا یَعْلَمُوْنَ ۟ۙ

“ಅಲ್ಲಾಹು ಸತ್ತವರಿಗೆ ಜೀವ ನೀಡಿ ಎಬ್ಬಿಸುವುದಿಲ್ಲ” ಎಂದು ಅವರು ಬಲವಾಗಿ ಆಣೆ ಹಾಕುತ್ತಾ ಹೇಳಿದರು. ಹೌದು! (ಅವನು ಖಂಡಿತ ಜೀವ ನೀಡಿ ಎಬ್ಬಿಸುತ್ತಾನೆ). ಅದು ಅವನ ಸತ್ಯ ವಾಗ್ದಾನವಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. info
التفاسير:

external-link copy
39 : 16

لِیُبَیِّنَ لَهُمُ الَّذِیْ یَخْتَلِفُوْنَ فِیْهِ وَلِیَعْلَمَ الَّذِیْنَ كَفَرُوْۤا اَنَّهُمْ كَانُوْا كٰذِبِیْنَ ۟

ಅದೇಕೆಂದರೆ, ಯಾವ ವಿಷಯದಲ್ಲಿ ಅವರು ಭಿನ್ನಮತ ತಳೆದರೋ ಅದನ್ನು ಅವರಿಗೆ ವಿವರಿಸಿಕೊಡುವುದಕ್ಕಾಗಿ ಮತ್ತು ಸತ್ಯನಿಷೇಧಿಗಳು ಸುಳ್ಳು ಹೇಳುವವರೆಂದು ಅವರು ಮನವರಿಕೆಯಾಗುವುದಕ್ಕಾಗಿ. info
التفاسير:

external-link copy
40 : 16

اِنَّمَا قَوْلُنَا لِشَیْءٍ اِذَاۤ اَرَدْنٰهُ اَنْ نَّقُوْلَ لَهٗ كُنْ فَیَكُوْنُ ۟۠

ನಾವು ಒಂದು ವಸ್ತುವನ್ನು ಬಯಸಿದರೆ ಅದರೊಡನೆ ನಮ್ಮ ಮಾತು “ಉಂಟಾಗು” ಎಂದು ಹೇಳುವುದು ಮಾತ್ರವಾಗಿದೆ. ಆಗ ಅದು ಉಂಟಾಗುತ್ತದೆ. info
التفاسير:

external-link copy
41 : 16

وَالَّذِیْنَ هَاجَرُوْا فِی اللّٰهِ مِنْ بَعْدِ مَا ظُلِمُوْا لَنُبَوِّئَنَّهُمْ فِی الدُّنْیَا حَسَنَةً ؕ— وَلَاَجْرُ الْاٰخِرَةِ اَكْبَرُ ۘ— لَوْ كَانُوْا یَعْلَمُوْنَ ۟ۙ

ಹಿಂಸೆಗೆ ಗುರಿಯಾದ ಬಳಿಕವೂ ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರು ಯಾರೋ—ಅವರಿಗೆ ನಾವು ಇಹಲೋಕದಲ್ಲಿ ಉತ್ತಮ ವಾಸ್ತವ್ಯವನ್ನು ಮಾಡಿಕೊಡುವೆವು. ಪರಲೋಕದ ಪ್ರತಿಫಲವಂತೂ ಅತಿಶ್ರೇಷ್ಠವಾದುದು. ಅವರು ಅದನ್ನು ತಿಳಿದಿರುತ್ತಿದ್ದರೆ! info
التفاسير:

external-link copy
42 : 16

الَّذِیْنَ صَبَرُوْا وَعَلٰی رَبِّهِمْ یَتَوَكَّلُوْنَ ۟

ಅವರು ಯಾರೆಂದರೆ, ಸಹಿಷ್ಣುತೆಯುಳ್ಳವರು ಮತ್ತು ತಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಭರವಸೆಯಿಡುವವರು. info
التفاسير: