د قرآن کریم د معناګانو ژباړه - کنادي ژباړه - حمزه بتور

د مخ نمبر:close

external-link copy
118 : 11

وَلَوْ شَآءَ رَبُّكَ لَجَعَلَ النَّاسَ اُمَّةً وَّاحِدَةً وَّلَا یَزَالُوْنَ مُخْتَلِفِیْنَ ۟ۙ

ನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸುತ್ತಿದ್ದರೆ ಮನುಕುಲವನ್ನು ಒಂದೇ ಸಮುದಾಯವನ್ನಾಗಿ ಮಾಡುತ್ತಿದ್ದನು. ಆದರೆ ಅವರು ಭಿನ್ನಮತ ತಳೆಯುತ್ತಲೇ ಇರುತ್ತಾರೆ. info
التفاسير:

external-link copy
119 : 11

اِلَّا مَنْ رَّحِمَ رَبُّكَ ؕ— وَلِذٰلِكَ خَلَقَهُمْ ؕ— وَتَمَّتْ كَلِمَةُ رَبِّكَ لَاَمْلَـَٔنَّ جَهَنَّمَ مِنَ الْجِنَّةِ وَالنَّاسِ اَجْمَعِیْنَ ۟

ನಿಮ್ಮ ಪರಿಪಾಲಕನ (ಅಲ್ಲಾಹನ) ದಯೆಗೆ ಪಾತ್ರರಾದವರ ಹೊರತು. ಅವನು ಅವರನ್ನು ಅದಕ್ಕಾಗಿಯೇ ಸೃಷ್ಟಿಸಿದ್ದಾನೆ. “ಜಿನ್ನ್ ಮತ್ತು ಮನುಷ್ಯರಿಂದ ನಾನು ನರಕವನ್ನು ತುಂಬಿಸುವೆನು” ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ಮಾತು ನೆರವೇರಿದೆ. info
التفاسير:

external-link copy
120 : 11

وَكُلًّا نَّقُصُّ عَلَیْكَ مِنْ اَنْۢبَآءِ الرُّسُلِ مَا نُثَبِّتُ بِهٖ فُؤَادَكَ ۚ— وَجَآءَكَ فِیْ هٰذِهِ الْحَقُّ وَمَوْعِظَةٌ وَّذِكْرٰی لِلْمُؤْمِنِیْنَ ۟

ಸಂದೇಶವಾಹಕರುಗಳ ಎಲ್ಲಾ ಸಮಾಚಾರಗಳನ್ನು ನಾವು ನಿಮಗೆ ತಿಳಿಸಿಕೊಡುವೆವು—ಅದರ ಮೂಲಕ ತಮ್ಮ ಹೃದಯವನ್ನು ದೃಢಗೊಳಿಸುವುದಕ್ಕಾಗಿ. ಇದರಲ್ಲಿಯೂ (ಈ ಅಧ್ಯಾಯದಲ್ಲಿಯೂ) ನಿಮಗೆ ಸತ್ಯವು ತಲುಪಿದೆ. ಅದು ಸತ್ಯವಿಶ್ವಾಸಿಗಳಿಗೆ ಉಪದೇಶ ಮತ್ತು ಬೋಧನೆಯಾಗಿದೆ. info
التفاسير:

external-link copy
121 : 11

وَقُلْ لِّلَّذِیْنَ لَا یُؤْمِنُوْنَ اعْمَلُوْا عَلٰی مَكَانَتِكُمْ ؕ— اِنَّا عٰمِلُوْنَ ۟ۙ

ವಿಶ್ವಾಸವಿಡದವರೊಡನೆ ಹೇಳಿರಿ: “ನೀವು ನಿಮ್ಮ ಸ್ಥಾನದಲ್ಲಿ ಕರ್ಮವೆಸಗಿರಿ. ನಿಶ್ಚಯವಾಗಿಯೂ ನಾವು ಕೂಡ ಕರ್ಮವೆಸಗುತ್ತೇವೆ. info
التفاسير:

external-link copy
122 : 11

وَانْتَظِرُوْا ۚ— اِنَّا مُنْتَظِرُوْنَ ۟

ನೀವು ಕಾಯಿರಿ. ನಾವು ಕೂಡ ಕಾಯುತ್ತೇವೆ.” info
التفاسير:

external-link copy
123 : 11

وَلِلّٰهِ غَیْبُ السَّمٰوٰتِ وَالْاَرْضِ وَاِلَیْهِ یُرْجَعُ الْاَمْرُ كُلُّهٗ فَاعْبُدْهُ وَتَوَكَّلْ عَلَیْهِ ؕ— وَمَا رَبُّكَ بِغَافِلٍ عَمَّا تَعْمَلُوْنَ ۟۠

ಭೂಮ್ಯಾಕಾಶಗಳಲ್ಲಿರುವ ಅದೃಶ್ಯ ಜ್ಞಾನಗಳು ಅಲ್ಲಾಹನಿಗೆ ಸೇರಿದ್ದು. ವಿಷಯಗಳೆಲ್ಲವನ್ನು ಅವನ ಬಳಿಗೇ ಮರಳಿಸಲಾಗುತ್ತದೆ. ಆದ್ದರಿಂದ ಅವನನ್ನು ಆರಾಧಿಸಿ ಮತ್ತು ಅವನಲ್ಲಿ ಭರವಸೆಯಿಡಿ. ನೀವು ಮಾಡುವ ಕರ್ಮಗಳ ಬಗ್ಗೆ ನಿಮ್ಮ ಪರಿಪಾಲಕನು (ಅಲ್ಲಾಹು) ನಿರ್ಲಕ್ಷ್ಯನಲ್ಲ. info
التفاسير: