د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
70 : 8

یٰۤاَیُّهَا النَّبِیُّ قُلْ لِّمَنْ فِیْۤ اَیْدِیْكُمْ مِّنَ الْاَسْرٰۤی ۙ— اِنْ یَّعْلَمِ اللّٰهُ فِیْ قُلُوْبِكُمْ خَیْرًا یُّؤْتِكُمْ خَیْرًا مِّمَّاۤ اُخِذَ مِنْكُمْ وَیَغْفِرْ لَكُمْ ؕ— وَاللّٰهُ غَفُوْرٌ رَّحِیْمٌ ۟

ಓ ಪೈಗಂಬರರೇ ನಿಮ್ಮ ವಶದಲ್ಲಿರುವ ಕೈದಿಗಳೊಂದಿಗೆ ಹೇಳಿರಿ: ಅಲ್ಲಾಹನು ನಿಮ್ಮ ಹೃದಯಗಳಲ್ಲಿ ಒಳಿತೇನಾದರು ಕಂಡರೆ ನಿಮ್ಮಿಂದ ಪಡೆಯಲಾದ ಧನಕ್ಕಿಂತಲೂ ಉತ್ತಮವಾದುದನ್ನು ನಿಮಗೆ ಕರುಣಿಸುವನು ಅನಂತರ ಅವನು ನಿಮ್ಮ ಪಾಪವನ್ನು ಕ್ಷಮಿಸಿಬಿಡುವನು ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
71 : 8

وَاِنْ یُّرِیْدُوْا خِیَانَتَكَ فَقَدْ خَانُوا اللّٰهَ مِنْ قَبْلُ فَاَمْكَنَ مِنْهُمْ ؕ— وَاللّٰهُ عَلِیْمٌ حَكِیْمٌ ۟

ಇನ್ನು ಅವರು ನಿಮ್ಮನ್ನು ವಂಚಿಸಲು ಬಯಸಿದ್ದರೆ ಇದಕ್ಕೆ ಮೊದಲು ಅವರು ಅಲ್ಲಾಹನನ್ನು ವಂಚಿಸಿದ್ದಾರೆ. ಅದ್ದರಿಂದ ಅವನು ಅವರನ್ನು ಬಂಧನಕ್ಕೊಳಗಾಗಿಸಿದನು ಮತ್ತು ಅಲ್ಲಾಹನು ಸರ್ವಜ್ಞಾನಿಯೂ, ಯುಕ್ತಿವಂತನೂ ಆಗಿದ್ದಾನೆ. info
التفاسير:

external-link copy
72 : 8

اِنَّ الَّذِیْنَ اٰمَنُوْا وَهَاجَرُوْا وَجٰهَدُوْا بِاَمْوَالِهِمْ وَاَنْفُسِهِمْ فِیْ سَبِیْلِ اللّٰهِ وَالَّذِیْنَ اٰوَوْا وَّنَصَرُوْۤا اُولٰٓىِٕكَ بَعْضُهُمْ اَوْلِیَآءُ بَعْضٍ ؕ— وَالَّذِیْنَ اٰمَنُوْا وَلَمْ یُهَاجِرُوْا مَا لَكُمْ مِّنْ وَّلَایَتِهِمْ مِّنْ شَیْءٍ حَتّٰی یُهَاجِرُوْا ۚ— وَاِنِ اسْتَنْصَرُوْكُمْ فِی الدِّیْنِ فَعَلَیْكُمُ النَّصْرُ اِلَّا عَلٰی قَوْمٍ بَیْنَكُمْ وَبَیْنَهُمْ مِّیْثَاقٌ ؕ— وَاللّٰهُ بِمَا تَعْمَلُوْنَ بَصِیْرٌ ۟

ಯಾರು ವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ತಮ್ಮ ಸಂಪತ್ತುಗಳಿAದ ಹಾಗೂ ತಮ್ಮ ಶರೀರಗಳಿಂದ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿದರೋ ಮತ್ತು ಯಾರು ಅವರಿಗೆ ಆಶ್ರಯವನ್ನೂ, ಸಹಾಯವನ್ನೂ ನೀಡಿದರೋ ಅವರೇ ಪರಸ್ಪರ ಆಪ್ತಮಿತ್ರರಾಗಿದ್ದಾರೆ. ಮತ್ತು ಯಾರು ವಿಶ್ವಾಸವಿಟ್ಟರೋ ಆದರೆ ವಲಸೆ ಹೋಗಲಿಲ್ಲವೋ ಅವರು ವಲಸೆ ಹೋಗುವವರೆಗೆ ನಿಮ್ಮ ಮೇಲೆ ಅವರ ಯಾವುದೇ ಹೊಣೆ ಇರುವುದಿಲ್ಲ. ಆದರೆ ಧರ್ಮದ ವಿಷಯದಲ್ಲಿ ಅವರು ನಿಮ್ಮೊಂದಿಗೆ ಸಹಾಯ ಬೇಡಿದರೆ ಅವರಿಗೆ ಸಹಾಯ ನೀಡಬೇಕಾದುದು ನಿಮ್ಮ ಮೇಲೆ ಹೊಣೆಯಾಗಿದೆ. ಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು. ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ. info
التفاسير:

external-link copy
73 : 8

وَالَّذِیْنَ كَفَرُوْا بَعْضُهُمْ اَوْلِیَآءُ بَعْضٍ ؕ— اِلَّا تَفْعَلُوْهُ تَكُنْ فِتْنَةٌ فِی الْاَرْضِ وَفَسَادٌ كَبِیْرٌ ۟ؕ

ಸತ್ಯನಿಷೇಧಿಗಳು ಪರಸ್ಪರ ಆಪ್ತಮಿತ್ರರಾಗಿದ್ದಾರೆ. ನೀವೂ ಹಾಗೆಯೇ ಮಾಡದಿದ್ದರೆ (ಪರಸ್ಪರ ಒಂದಾಗದಿದ್ದರೆ) ನಾಡಿನಲ್ಲಿ ಕ್ಷೆÆÃಭೆ ಹಾಗೂ ಭೀಕರ ನಷ್ಟ ಉಂಟಾಗುವುದು. info
التفاسير:

external-link copy
74 : 8

وَالَّذِیْنَ اٰمَنُوْا وَهَاجَرُوْا وَجٰهَدُوْا فِیْ سَبِیْلِ اللّٰهِ وَالَّذِیْنَ اٰوَوْا وَّنَصَرُوْۤا اُولٰٓىِٕكَ هُمُ الْمُؤْمِنُوْنَ حَقًّا ؕ— لَهُمْ مَّغْفِرَةٌ وَّرِزْقٌ كَرِیْمٌ ۟

ಯಾರು ಸತ್ಯವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ಅಲ್ಲಾಹನ ಮಾರ್ಗದಲ್ಲಿ ಯುದ್ಧಮಾಡಿರುವರೋ ಮತ್ತು ಯಾರು ವಲಸೆ ಬಂದವರಿಗೆ ಆಶ್ರಯ ಹಾಗೂ ಸಹಾಯ ನೀಡಿರುವರೋ ಅವರೇ ನಿಜವಾದ ಸತ್ಯವಿಶ್ವಾಸಿಗಳಾಗಿದ್ದಾರೆ. ಅವರಿಗೆ ಪಾಪವಿಮೋಚನೆ ಮತ್ತು ಗೌರವಯುತವಾದ ಜೀವನಾಧರ ಇರುವುದು. info
التفاسير:

external-link copy
75 : 8

وَالَّذِیْنَ اٰمَنُوْا مِنْ بَعْدُ وَهَاجَرُوْا وَجٰهَدُوْا مَعَكُمْ فَاُولٰٓىِٕكَ مِنْكُمْ ؕ— وَاُولُوا الْاَرْحَامِ بَعْضُهُمْ اَوْلٰی بِبَعْضٍ فِیْ كِتٰبِ اللّٰهِ ؕ— اِنَّ اللّٰهَ بِكُلِّ شَیْءٍ عَلِیْمٌ ۟۠

ತರುವಾಯ ಯಾರು ವಿಶ್ವಾಸವಿಟ್ಟು ವಲಸೆ ಹೋದರೋ ಮತ್ತು ನಿಮ್ಮ ಜೊತೆಗೆ ಸೇರಿ ಯುದ್ಧ ಮಾಡಿದರೋ ಇವರು ಸಹ ನಿಮ್ಮವರೇ ಆಗಿದ್ದಾರೆ. ಮತ್ತು ಅಲ್ಲಾಹನ ಆದೇಶದಲ್ಲಿ ರಕ್ತ ಸಂಬAಧವಿರುವವರು ಹೆಚ್ಚು ಹಕ್ಕುದಾರರಾಗಿದ್ದಾರೆ. ನಿಸ್ಸಂದೇಹವಾಗಿಯು ಅಲ್ಲಾಹನು ಪ್ರತಿಯೊಂದು ವಿಷಯವನ್ನು ಅರಿಯುವವನಾಗಿದ್ದಾನೆ. info
التفاسير: