د قرآن کریم د معناګانو ژباړه - کنادي ژباړه - بشیر ميسوري

external-link copy
187 : 7

یَسْـَٔلُوْنَكَ عَنِ السَّاعَةِ اَیَّانَ مُرْسٰىهَا ؕ— قُلْ اِنَّمَا عِلْمُهَا عِنْدَ رَبِّیْ ۚ— لَا یُجَلِّیْهَا لِوَقْتِهَاۤ اِلَّا هُوَ ؔؕۘ— ثَقُلَتْ فِی السَّمٰوٰتِ وَالْاَرْضِ ؕ— لَا تَاْتِیْكُمْ اِلَّا بَغْتَةً ؕ— یَسْـَٔلُوْنَكَ كَاَنَّكَ حَفِیٌّ عَنْهَا ؕ— قُلْ اِنَّمَا عِلْمُهَا عِنْدَ اللّٰهِ وَلٰكِنَّ اَكْثَرَ النَّاسِ لَا یَعْلَمُوْنَ ۟

ಅವರು ಅಂತ್ಯಘಳಿಗೆಯ ಕುರಿತು ಅದು ಯಾವಾಗ ಸಂಭವಿಸುತ್ತದೆಯೆAದು ನಿಮ್ಮೊಂದಿಗೆ ಕೇಳುತ್ತಾರೆ ಹೇಳಿರಿ: ಅದರ ಜ್ಞಾನವು ನನ್ನ ಪ್ರಭುವಿನ ಬಳಿ ಮಾತ್ರವಿದೆ. ಅದರ ಸಮಯವನ್ನು ಅಲ್ಲಾಹನ ಹೊರತು ಇನ್ನಾರೂ ಪ್ರಕಟಗೊಳಿಸಲಾರರು. ಅದು ಆಕಾಶಗಳಲ್ಲೂ, ಭೂಮಿಯಲ್ಲೂ ಭಯಂಕರ ಸಂಭವವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬಂದೆರಗುವುದು ಅದರ ಬಗ್ಗೆ ನಿಮಗೆ ಸದೃಢ ಜ್ಞಾನವಿದೆ ಎಂಬ ಮಟ್ಟಿನಲ್ಲಿ ನಿಮ್ಮೊಂದಿಗೆ ಅವರು ಕೇಳುತ್ತಿದ್ದಾರೆ. ಹೇಳಿರಿ: ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರವಿದೆ. ಆದರೆ ಹೆಚ್ಚಿನ ಜನರು ಅರಿತುಕೊಳ್ಳುವುದಿಲ್ಲ. info
التفاسير: