د قرآن کریم د معناګانو ژباړه - کنادي ژباړه - بشیر ميسوري

external-link copy
160 : 7

وَقَطَّعْنٰهُمُ اثْنَتَیْ عَشْرَةَ اَسْبَاطًا اُمَمًا ؕ— وَاَوْحَیْنَاۤ اِلٰی مُوْسٰۤی اِذِ اسْتَسْقٰىهُ قَوْمُهٗۤ اَنِ اضْرِبْ بِّعَصَاكَ الْحَجَرَ ۚ— فَانْۢبَجَسَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— وَظَلَّلْنَا عَلَیْهِمُ الْغَمَامَ وَاَنْزَلْنَا عَلَیْهِمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟

ಮತ್ತು ನಾವು ಅವರನ್ನು ಹನ್ನೆರಡು ಗೋತ್ರಗಳಲ್ಲಿ ವಿಂಗಡಿಸಿ ಪ್ರತ್ಯೇಕ ಪಂಗಡಗಳನ್ನಾಗಿ ಮಾಡಿದೆವು. ಮೂಸಾರವರೊಂದಿಗೆ ಅವನ ಜನತೆಯು ನೀರನ್ನು ಕೇಳಿದಾಗ ನಾವು ಅವರಿಗೆ ಆದೇಶ ನೀಡಿದೆವು ತನ್ನ ಬೆತ್ತದಿಂದ ಆ ಬಂಡೆಯ ಮೇಲೆ ಹೊಡಯಿರೆಂದು, ಆಗ ಅದರಿಂದ ಹನ್ನೆರಡು ಚಿಲುಮೆಗಳು ಹೊರಬಂದವು. ಪ್ರತಿಯೊಂದು ಪಂಗಡವು ತಮ್ಮ ಕುಡಿಯುವ ಘಟಕವನ್ನು ಅರಿತುಕೊಂಡಿತು ಮತ್ತು ನಾವು ಅವರ ಮೇಲೆ ಮೋಡದ ನೆರಳನ್ನು ನೀಡಿದೆವು ಮತ್ತು ಅವರಿಗೆ ಮನ್ನಃ(ಸಿಹಿಪದಾರ್ಥ) ಹಾಗೂ ಲಾವಕ್ಕಿಗಳನ್ನು ಇಳಿಸಿಕೊಟ್ಟೆವು ಮತ್ತು ನಾವು ನಿಮಗೆ ನೀಡಿರುವ ಶುದ್ಧ ವಸ್ತುಗಳನ್ನು ತಿನ್ನಿರಿ ಎಂದೆವು ಮತ್ತು ಅವರು ನಮ್ಮ ಮೇಲೆ ಅಕ್ರಮವೇನೂ ಎಸಗಲಿಲ್ಲ. ಅವರು ಸ್ವತಃ ತಮ್ಮ ಮೇಲೆಯೇ ಅಕ್ರ‍್ರಮವೆಸಗುತ್ತಿದ್ದರು. info
التفاسير: