د قرآن کریم د معناګانو ژباړه - کنادي ژباړه - بشیر ميسوري

external-link copy
71 : 6

قُلْ اَنَدْعُوْا مِنْ دُوْنِ اللّٰهِ مَا لَا یَنْفَعُنَا وَلَا یَضُرُّنَا وَنُرَدُّ عَلٰۤی اَعْقَابِنَا بَعْدَ اِذْ هَدٰىنَا اللّٰهُ كَالَّذِی اسْتَهْوَتْهُ الشَّیٰطِیْنُ فِی الْاَرْضِ حَیْرَانَ ۪— لَهٗۤ اَصْحٰبٌ یَّدْعُوْنَهٗۤ اِلَی الْهُدَی ائْتِنَا ؕ— قُلْ اِنَّ هُدَی اللّٰهِ هُوَ الْهُدٰی ؕ— وَاُمِرْنَا لِنُسْلِمَ لِرَبِّ الْعٰلَمِیْنَ ۟ۙ

ಹೇಳಿರಿ: ಅಲ್ಲಾಹನ ಹೊರತು ನಮಗೆ ಲಾಭವನ್ನಾಗಲಿ, ಹಾನಿಯನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನಾವು ಆರಾಧಿಸಬೇಕೇ? ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ನಂತರ ನಾವು ಹಿಂದಕ್ಕೆ ಮರಳಬೇಕೇ? ಒಬ್ಬ ವ್ಯಕ್ತಿಯು ಮರುಭೂಮಿಯಲ್ಲಿ ಶೈತಾನನಿಂದ ದಾರಿ ತಪ್ಪಿಸಲ್ಪಟ್ಟು ಅವನನ್ನು 'ನಮ್ಮ ಬಳಿಗೆ ಬಾ' ಎಂದು ಅವನ ಗೆಳೆಯರು ಕರೆಯುತ್ತಿದ್ದರೂ ನೇರದಾರಿಗೆ ಬರದೆ ದಿಗ್ಭಾçಂತನಾಗಿ ಅಲೆದಾಡುವಂತೆ ನಾವಾಗಬೇಕೇ?. ಹೇಳಿರಿ: ಅಲ್ಲಾಹನ ಮಾರ್ಗದರ್ಶನವೇ ನೈಜ ಮಾರ್ಗದರ್ಶನವಾಗಿದೆ. ಮತ್ತು ನಾವು ಜಗದೊಡೆಯನಿಗೆ ಸಂಪೂರ್ಣ ವಿಧೇಯರಾಗಬೇಕೆಂದು ನಮ್ಮೊಂದಿಗೆ ಆಜ್ಞಾಪಿಸಲಾಗಿದೆ. info
التفاسير: