د قرآن کریم د معناګانو ژباړه - کنادي ژباړه - بشیر ميسوري

external-link copy
89 : 5

لَا یُؤَاخِذُكُمُ اللّٰهُ بِاللَّغْوِ فِیْۤ اَیْمَانِكُمْ وَلٰكِنْ یُّؤَاخِذُكُمْ بِمَا عَقَّدْتُّمُ الْاَیْمَانَ ۚ— فَكَفَّارَتُهٗۤ اِطْعَامُ عَشَرَةِ مَسٰكِیْنَ مِنْ اَوْسَطِ مَا تُطْعِمُوْنَ اَهْلِیْكُمْ اَوْ كِسْوَتُهُمْ اَوْ تَحْرِیْرُ رَقَبَةٍ ؕ— فَمَنْ لَّمْ یَجِدْ فَصِیَامُ ثَلٰثَةِ اَیَّامٍ ؕ— ذٰلِكَ كَفَّارَةُ اَیْمَانِكُمْ اِذَا حَلَفْتُمْ ؕ— وَاحْفَظُوْۤا اَیْمَانَكُمْ ؕ— كَذٰلِكَ یُبَیِّنُ اللّٰهُ لَكُمْ اٰیٰتِهٖ لَعَلَّكُمْ تَشْكُرُوْنَ ۟

ಉದ್ದೇಶಪೂರ್ವಕವಲ್ಲದ ನಿಮ್ಮ ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ಹಿಡಿಯವುದಿಲ್ಲ. ಆದರೆ ನೀವು ಉದ್ದೇಶಪೂರ್ವಕವಾಗಿ ಮಾಡುವ ಶಪಥಗಳ ಕುರಿತು ಅವನು ಅಗತ್ಯವಾಗಿ ವಿಚಾರಣೆ ನಡೆಸುವನು. ಈ ಶಪಥಗಳನ್ನು ಮುರಿಯುವವರಿಗೆ ಪ್ರಾಯಶ್ಚಿತ್ತವೇನೆಂದರೆ ನೀವು ನಿಮ್ಮ ಮನೆಯವರಿಗೆ ನೀಡುವ ಮಧ್ಯಮ ದರ್ಜೆಯ ಆಹಾರದಿಂದ ಹತ್ತು ಮಂದಿ ಬಡವರಿಗೆ ಉಣಿಸುವುದು. ಅಥವಾ ಅವರಿಗೆ ಉಡುಪನ್ನು ನೀಡುವುದು. ಅಥವಾ ಓರ್ವ ಗುಲಾಮನನ್ನು ವಿಮೋಸಚನೆಗೊಳಿಸುವುದಾಗಿದೆ. ಮತ್ತು ಸಾಮರ್ಥ್ಯವಿಲ್ಲದವನು ಮೂರು ದಿನ ಉಪವಾಸ ಆಚರಿಸಬೇಕಾಗಿದೆ. ಇದು ನೀವು ಶಪಥಗಳ ಉಲ್ಲಂಘನೆ ಮಾಡಿರುವುದರ ಪ್ರಾಯಶ್ಚಿತ್ತವಾಗಿದೆ ಆದ್ದರಿಂದ ನೀವು ನಿಮ್ಮ ಶಪಥಗಳ ಬಗ್ಗೆ ಎಚ್ಚರವಹಿಸಿರಿ. ಇದೇ ಪ್ರಕಾರ ಅಲ್ಲಾಹನು ತನ್ನ ನಿಯಮಗಳನ್ನು ನಿಮಗೋಸ್ಕರ ವಿವರಿಸಿಕೊಡುತ್ತಿದ್ದಾನೆ. ಇದು ನೀವು ಕೃತಜ್ಞತೆ ತೋರಿಸಲೆಂದಾಗಿದೆ. info
التفاسير: