د قرآن کریم د معناګانو ژباړه - کنادي ژباړه - بشیر ميسوري

external-link copy
6 : 5

یٰۤاَیُّهَا الَّذِیْنَ اٰمَنُوْۤا اِذَا قُمْتُمْ اِلَی الصَّلٰوةِ فَاغْسِلُوْا وُجُوْهَكُمْ وَاَیْدِیَكُمْ اِلَی الْمَرَافِقِ وَامْسَحُوْا بِرُءُوْسِكُمْ وَاَرْجُلَكُمْ اِلَی الْكَعْبَیْنِ ؕ— وَاِنْ كُنْتُمْ جُنُبًا فَاطَّهَّرُوْا ؕ— وَاِنْ كُنْتُمْ مَّرْضٰۤی اَوْ عَلٰی سَفَرٍ اَوْ جَآءَ اَحَدٌ مِّنْكُمْ مِّنَ الْغَآىِٕطِ اَوْ لٰمَسْتُمُ النِّسَآءَ فَلَمْ تَجِدُوْا مَآءً فَتَیَمَّمُوْا صَعِیْدًا طَیِّبًا فَامْسَحُوْا بِوُجُوْهِكُمْ وَاَیْدِیْكُمْ مِّنْهُ ؕ— مَا یُرِیْدُ اللّٰهُ لِیَجْعَلَ عَلَیْكُمْ مِّنْ حَرَجٍ وَّلٰكِنْ یُّرِیْدُ لِیُطَهِّرَكُمْ وَلِیُتِمَّ نِعْمَتَهٗ عَلَیْكُمْ لَعَلَّكُمْ تَشْكُرُوْنَ ۟

ಓ ಸತ್ಯವಿಶ್ವಾಸಿಗಳೇ, ನೀವು ನಮಾಝ್‌ಗಾಗಿ ಸಿದ್ಧರಾದರೆ ನಿಮ್ಮ ಮುಖಗಳನ್ನು ಮತ್ತು ಮೊಣಕೈಗಳವರೆಗೆ ಕೈಗಳನ್ನು ತೊಳೆಯಿರಿ. ನಿಮ್ಮ ತಲೆಗಳನ್ನು (ಕೈಗಳನ್ನು ವದ್ದೆ ಮಾಡಿ) ಸವರಿರಿ ಮತ್ತು ಕಾಲುಗಳನ್ನು ಮಣಿಗಂಟುಗಳವರೆಗೆ ತೊಳೆಯಿರಿ. ನೀವು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿರಿ. ಮತ್ತು ನೀವು ರೋಗಿಗಳೋ, ಪ್ರಯಾಣಿಕರೋ ಆಗಿದ್ದು, ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಭೋಗ ಮಾಡಿದರೆ ಮತ್ತು ನಿಮಗೆ ನೀರು ದೊರಕದಿದ್ದರೆ ಶುದ್ಧವಾದ ಮಣ್ಣಿನಿಂದ ತಯಮ್ಮುಮ್ ಮಾಡಿರಿ. (ಅಂದರೆ ನಿಮ್ಮ ಹಸ್ತಗಳನ್ನು ಮಣ್ಣಿನ ಮೇಲೆ ಬಡಿದು) ಅದನ್ನು ನಿಮ್ಮ ಮುಖ ಮತ್ತು ಕೈಗಳ ಮೇಲೆ ಸವರಿರಿ. ನಿಮ್ಮ ಮೇಲೆ ಯಾವುದೇ ರೀತಿಯ ಸಂಕಷ್ಟವನ್ನುAಟು ಮಾಡಲು ಅಲ್ಲಾಹನು ಇಚ್ಛಿಸುವುದಿಲ್ಲ. ಆದರೆ ಅವನು ನಿಮ್ಮನ್ನು ಶುದ್ಧೀಕರಿಸಲು ಮತ್ತು ತನ್ನ ಅನುಗ್ರಹವನ್ನು ನಿಮಗೆ ದಯಪಾಲಿಸಲು ಇಚ್ಛಿಸುತ್ತಾನೆ. ಇದು ನೀವು ಕೃತಜ್ಞತೆ ಸಲ್ಲಿಸಲೆಂದಾಗಿದೆ. info
التفاسير: