د قرآن کریم د معناګانو ژباړه - کنادي ژباړه - بشیر ميسوري

external-link copy
3 : 5

حُرِّمَتْ عَلَیْكُمُ الْمَیْتَةُ وَالدَّمُ وَلَحْمُ الْخِنْزِیْرِ وَمَاۤ اُهِلَّ لِغَیْرِ اللّٰهِ بِهٖ وَالْمُنْخَنِقَةُ وَالْمَوْقُوْذَةُ وَالْمُتَرَدِّیَةُ وَالنَّطِیْحَةُ وَمَاۤ اَكَلَ السَّبُعُ اِلَّا مَا ذَكَّیْتُمْ ۫— وَمَا ذُبِحَ عَلَی النُّصُبِ وَاَنْ تَسْتَقْسِمُوْا بِالْاَزْلَامِ ؕ— ذٰلِكُمْ فِسْقٌ ؕ— اَلْیَوْمَ یَىِٕسَ الَّذِیْنَ كَفَرُوْا مِنْ دِیْنِكُمْ فَلَا تَخْشَوْهُمْ وَاخْشَوْنِ ؕ— اَلْیَوْمَ اَكْمَلْتُ لَكُمْ دِیْنَكُمْ وَاَتْمَمْتُ عَلَیْكُمْ نِعْمَتِیْ وَرَضِیْتُ لَكُمُ الْاِسْلَامَ دِیْنًا ؕ— فَمَنِ اضْطُرَّ فِیْ مَخْمَصَةٍ غَیْرَ مُتَجَانِفٍ لِّاِثْمٍ ۙ— فَاِنَّ اللّٰهَ غَفُوْرٌ رَّحِیْمٌ ۟

ಶವ, ರಕ್ತ, ಹಂದಿ ಮಾಂಸ, ಅಲ್ಲಾಹೇತರರ ಹೆಸರಲ್ಲಿ ಕೊಯ್ಯಲ್ಪಟ್ಟದ್ದು, ಕೊರಳು ಬಿಗಿದು ಸತ್ತದ್ದು, ಏಟು ಬಿದ್ದು ಸತ್ತದ್ದು, ಎತ್ತರದಿಂದ ಬಿದ್ದು ಸತ್ತದ್ದು, ಯಾವುದಾದರೂ ಪ್ರಾಣಿಯ ಕೊಂಬು ಇರಿಯಲ್ಪಟ್ಟು ಸತ್ತದ್ದು, ವನ್ಯಮೃಗಗಳು ಹರಿದು ತಿಂದದ್ದು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಆದರೆ ನೀವು ಅದು ಸಾಯುವುದಕ್ಕೆ ಮುಂಚೆ ಕೊಯ್ದು ಬಿಟ್ಟಿದ್ದರೆ ಬೇರೆ ವಿಚಾರ. ಮತ್ತು ಬಲಿಪೀಠಗಳಲ್ಲಿ ಕೊಯ್ಯಲಾದದ್ದು ಮತ್ತು ಬಾಣಗಳನ್ನು ಬಳಸಿ ಅದೃಷ್ಟ ಪರೀಕ್ಷಿಸುವುದನ್ನು ಸಹ ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇವೆಲ್ಲವೂ ಅತಿ ನಿಕೃಷ್ಟ ಪಾಪಗಳಾಗಿವೆ. ಇಂದು ಸತ್ಯನಿಷೇಧಿಗಳು ನಿಮ್ಮ ಧÀರ್ಮದಿಂದ ನಿರಾಶರಾಗಿಬಿಟ್ಟಿದ್ದಾರೆ. ನೀವು ಅವರನ್ನು ಭಯಪಡಬೇಡಿರಿ. ನೀವು ನನ್ನನ್ನು ಭಯಪಡಿರಿ. ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪರಿಪೂರ್ಣಗೊಳಿಸಿದ್ದೇನೆ. ಮತ್ತು ನನ್ನ ಅನುಗ್ರಹವನ್ನು ನಿಮಗೆ ಸಂಪೂರ್ಣಗೊಳಿಸಿದ್ದೇನೆ. ಮತ್ತು ಇಸ್ಲಾಮ್ ಅನ್ನು ನಿಮ್ಮ ಧರ್ಮವನ್ನಾಗಿ ನಾನು ಅಂಗೀಕರಿಸಿದ್ದೇನೆ. ಇನ್ನು ಯಾವೊಬ್ಬ ವ್ಯಕ್ತಿಯು ಮನಃ ಪೂರ್ವಕವಾಗಿ ಪಾಪದೆಡೆಗೆ ವಾಲದೆ ಕಠಿಣ ಹಸಿವಿನ ನಿಮಿತ್ತ ನಿರ್ಭಂಧಿತನಾಗಿ ಅದನ್ನು ತಿಂದರೆ ಬೇರೆ ವಿಚಾರ. ಖಂಡಿತವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ ಕರುಣೆ ತೋರುವವನೂ ಆಗಿದ್ದಾನೆ. info
التفاسير: