د قرآن کریم د معناګانو ژباړه - کنادي ژباړه - بشیر ميسوري

د مخ نمبر:close

external-link copy
25 : 14

تُؤْتِیْۤ اُكُلَهَا كُلَّ حِیْنٍ بِاِذْنِ رَبِّهَا ؕ— وَیَضْرِبُ اللّٰهُ الْاَمْثَالَ لِلنَّاسِ لَعَلَّهُمْ یَتَذَكَّرُوْنَ ۟

ಅದು ತನ್ನ ಪ್ರಭುವಿನ ಅಪ್ಪಣೆಯಿಂದ, ಸದಾಕಾಲ ತನ್ನ ಫಲವನ್ನು ನೀಡುತ್ತಿರುತ್ತದೆ. ಮತ್ತು ಜನರು ಉಪದೇಶ ಸ್ವೀಕರಿಸಲೆಂದು ಅಲ್ಲಾಹನು ಅವರಿಗಾಗಿ ಉಪಮೆಗಳನ್ನು ವಿವರಿಸುತ್ತಾನೆ. info
التفاسير:

external-link copy
26 : 14

وَمَثَلُ كَلِمَةٍ خَبِیْثَةٍ كَشَجَرَةٍ خَبِیْثَةِ ١جْتُثَّتْ مِنْ فَوْقِ الْاَرْضِ مَا لَهَا مِنْ قَرَارٍ ۟

ಅಶುದ್ಧ ವಚನದ ಉಪಮೆಯು ಒಂದು ಕೆಟ್ಟ ಮರದಂತಿದೆ. ಅದು ಭೂಮಿಯ ಮೇಲ್ಭಾಗದಿಂದಲೇ ಕಿತ್ತೆಸೆಯಲ್ಪಡುತ್ತದೆ. ಅದಕ್ಕೆ ಸ್ಥಿರತೆಯೆಂಬುದೇ ಇರುವುದಿಲ್ಲ. info
التفاسير:

external-link copy
27 : 14

یُثَبِّتُ اللّٰهُ الَّذِیْنَ اٰمَنُوْا بِالْقَوْلِ الثَّابِتِ فِی الْحَیٰوةِ الدُّنْیَا وَفِی الْاٰخِرَةِ ۚ— وَیُضِلُّ اللّٰهُ الظّٰلِمِیْنَ ۙ۫— وَیَفْعَلُ اللّٰهُ مَا یَشَآءُ ۟۠

ಅಲ್ಲಾಹನು ಸತ್ಯ ವಿಶ್ವಾಸವಿರಿಸಿದವರನ್ನು ಸ್ಥಿರವಾದ ವಚನದ ಮೂಲಕ ಈ ಇಹಲೋಕ ಜೀವನದಲ್ಲೂ ಮತ್ತು ಪರಲೋಕದಲ್ಲೂ ಸದೃಢಗೊಳಿಸುತ್ತಾನೆ ಮತ್ತು ಅಲ್ಲಾಹನು ಅಕ್ರಮಿಗಳನ್ನು ದಾರಿಗೆಡಿಸುತ್ತಾನೆ ಹಾಗೂ ಅಲ್ಲಾಹನು ತಾನಿಚ್ಛಿಸುವುದನ್ನು ಮಾಡುತ್ತಾನೆ.. info
التفاسير:

external-link copy
28 : 14

اَلَمْ تَرَ اِلَی الَّذِیْنَ بَدَّلُوْا نِعْمَتَ اللّٰهِ كُفْرًا وَّاَحَلُّوْا قَوْمَهُمْ دَارَ الْبَوَارِ ۟ۙ

ಅಲ್ಲಾಹನ ಅನುಗ್ರಹದ ಬದಲಿಗೆ ಕೃತಘ್ನತೆಯನ್ನು ತೋರಿದವರೂ ಮತ್ತು ತಮ್ಮ ಜನಾಂಗವನ್ನು ವಿನಾಶದ ಭವನಕ್ಕೆ ತಲುಪಿಸಿದವರನ್ನು ನೀವು ನೋಡಿಲ್ಲವೆ ? info
التفاسير:

external-link copy
29 : 14

جَهَنَّمَ ۚ— یَصْلَوْنَهَا ؕ— وَبِئْسَ الْقَرَارُ ۟

ಅರ್ಥಾತ್ ನರಕಕ್ಕೆ ಅದರಲ್ಲಿ ಅವರು ಪ್ರವೇಶಿಸುವರು, ಅದು ಅತೀ ನಿಕೃಷÀ್ಟ ತಾಣ. info
التفاسير:

external-link copy
30 : 14

وَجَعَلُوْا لِلّٰهِ اَنْدَادًا لِّیُضِلُّوْا عَنْ سَبِیْلِهٖ ؕ— قُلْ تَمَتَّعُوْا فَاِنَّ مَصِیْرَكُمْ اِلَی النَّارِ ۟

ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಲಿಕ್ಕಾಗಿ ಅವರು ಅಲ್ಲಾಹನಿಗೆ ಸಹಭಾಗಿಗಳನ್ನು ಮಾಡಿಕೊಂಡರು. ಹೇಳಿರಿ; ನೀವು ಸುಖಭೋಗಗಳನ್ನು ಸವಿಯಿರಿ ನಿಮ್ಮ ತಲುಪುದಾಣವಂತೂ ನರಕವೇ ಆಗಿದೆ. info
التفاسير:

external-link copy
31 : 14

قُلْ لِّعِبَادِیَ الَّذِیْنَ اٰمَنُوْا یُقِیْمُوا الصَّلٰوةَ وَیُنْفِقُوْا مِمَّا رَزَقْنٰهُمْ سِرًّا وَّعَلَانِیَةً مِّنْ قَبْلِ اَنْ یَّاْتِیَ یَوْمٌ لَّا بَیْعٌ فِیْهِ وَلَا خِلٰلٌ ۟

ಓ ಪೈಗಂಬರರೇ ನನ್ನ ಸತ್ಯವಿಶ್ವಾಸಿ ದಾಸರಿಗೆ ಹೇಳಿರಿ; ಅವರು ನಮಾಜ್ ಸಂಸ್ಥಾಪಿಸಲಿ ಮತ್ತು ಯಾವುದೇ ವ್ಯವಹಾರವಾಗಲೀ ಮಿತ್ರತ್ವವಾಗಲಿ ಪ್ರಯೋಜನಕ್ಕೆ ಬಾರದ ದಿನವೂ ಬರುವುದಕ್ಕೆ ಮುಂಚೆಯೇ ನಾವು ಅವರಿಗೆ ದಯಪಾಲಿಸಿರುವವುಗಳಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡಲಿ. info
التفاسير:

external-link copy
32 : 14

اَللّٰهُ الَّذِیْ خَلَقَ السَّمٰوٰتِ وَالْاَرْضَ وَاَنْزَلَ مِنَ السَّمَآءِ مَآءً فَاَخْرَجَ بِهٖ مِنَ الثَّمَرٰتِ رِزْقًا لَّكُمْ ۚ— وَسَخَّرَ لَكُمُ الْفُلْكَ لِتَجْرِیَ فِی الْبَحْرِ بِاَمْرِهٖ ۚ— وَسَخَّرَ لَكُمُ الْاَنْهٰرَ ۟ۚ

ಅಲ್ಲಾಹನೆಂದರೆ ಆಕಾಶ-ಭೂಮಿಗಳನ್ನು ಸೃಷ್ಟಿಸಿದವನು ಮತ್ತು ಆಕಾಶದಿಂದ ಮಳೆಯನ್ನು ಸುರಿಸಿ ಅದರ ಮೂಲಕ ನಿಮ್ಮ ಜೀವನಾಧಾರಕ್ಕಾಗಿ ಫಲ ಬೆಳೆಗಳನ್ನು ಹೊರತಂದವನು ಮತ್ತು ಅವನು ತನ್ನ ಆದೇಶದಿಂದ ನಿಮಗಾಗಿ ಹಡಗನ್ನು ಸಮುದ್ರದಲ್ಲಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಮತ್ತು ಅವನೇ ನಿಮಗಾಗಿ ನದಿಗಳನ್ನು ಅಧೀನಗೊಳಿಸಿದನು info
التفاسير:

external-link copy
33 : 14

وَسَخَّرَ لَكُمُ الشَّمْسَ وَالْقَمَرَ دَآىِٕبَیْنِ ۚ— وَسَخَّرَ لَكُمُ الَّیْلَ وَالنَّهَارَ ۟ۚ

ಅವನೇ ನಿಮಗೆ ಸೂರ್ಯನನ್ನೂ, ಚಂದ್ರನನ್ನೂ ನಿರಂತರವಾಗಿ ಚಲಿಸುತ್ತಿರುವಂತೆ ಅಧೀನಗೊಳಿಸಿದನು ಹಾಗೂ ರಾತ್ರಿ ಹಗಲನ್ನೂ ನಿಮಗಾಗಿ ಅಧೀನಗೊಳಿಸಿದನು. info
التفاسير: