ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
44 : 7

وَنَادٰۤی اَصْحٰبُ الْجَنَّةِ اَصْحٰبَ النَّارِ اَنْ قَدْ وَجَدْنَا مَا وَعَدَنَا رَبُّنَا حَقًّا فَهَلْ وَجَدْتُّمْ مَّا وَعَدَ رَبُّكُمْ حَقًّا ؕ— قَالُوْا نَعَمْ ۚ— فَاَذَّنَ مُؤَذِّنٌ بَیْنَهُمْ اَنْ لَّعْنَةُ اللّٰهِ عَلَی الظّٰلِمِیْنَ ۟ۙ

ಸ್ವರ್ಗವಾಸಿಗಳು ನರಕವಾಸಿಗಳನ್ನು ಕರೆದು ಹೇಳುವರು: “ನಮ್ಮ ಪರಿಪಾಲಕನು (ಅಲ್ಲಾಹು) ನಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನಾವು ಕಂಡಿದ್ದೇವೆ. ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ವಾಗ್ದಾನ ಮಾಡಿದ್ದು ಸತ್ಯವಾಗಿ ನೆರವೇರಿದ್ದನ್ನು ನೀವು ಕಂಡಿದ್ದೀರಾ?” ಅವರು ಉತ್ತರಿಸುವರು: “ಹೌದು.” ಆಗ ಅವರ ನಡುವಿನಿಂದ ಒಬ್ಬನು ಘೋಷಿಸುವನು: “ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ.” info
التفاسير:

external-link copy
45 : 7

الَّذِیْنَ یَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ۚ— وَهُمْ بِالْاٰخِرَةِ كٰفِرُوْنَ ۟ۘ

ಅವರು (ಅಕ್ರಮಿಗಳು) ಯಾರೆಂದರೆ, ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ಅದರಲ್ಲಿ ವಕ್ರತೆಯನ್ನು ಹುಡುಕುವವರು. ಅವರು ಪರಲೋಕವನ್ನು ನಿಷೇಧಿಸುವವರಾಗಿದ್ದಾರೆ. info
التفاسير:

external-link copy
46 : 7

وَبَیْنَهُمَا حِجَابٌ ۚ— وَعَلَی الْاَعْرَافِ رِجَالٌ یَّعْرِفُوْنَ كُلًّا بِسِیْمٰىهُمْ ۚ— وَنَادَوْا اَصْحٰبَ الْجَنَّةِ اَنْ سَلٰمٌ عَلَیْكُمْ ۫— لَمْ یَدْخُلُوْهَا وَهُمْ یَطْمَعُوْنَ ۟

ಅವರ ನಡುವೆ ಒಂದು ತಡೆಗೋಡೆಯಿದೆ[1] ಮತ್ತು ಅದರ ಎತ್ತರದ ಸ್ಥಳಗಳಲ್ಲಿ ಕೆಲವು ಜನರಿದ್ದಾರೆ.[2] ಅವರು ಎಲ್ಲರನ್ನೂ (ಸ್ವರ್ಗವಾಸಿ ಮತ್ತು ನರಕವಾಸಿಗಳೆಲ್ಲರನ್ನೂ) ಅವರ ಚಿಹ್ನೆಗಳಿಂದ ಗುರುತಿಸುವರು. ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಿಮ್ಮ ಮೇಲೆ ಶಾಂತಿಯಿರಲಿ.” ಅವರಿಗೆ ಸ್ವರ್ಗ ಪ್ರವೇಶ ಮಾಡುವ ಆಸೆಯಿದ್ದರೂ ಸಹ ಅವರು ಇನ್ನೂ ಅದನ್ನು ಪ್ರವೇಶಿಸಿಲ್ಲ. info

[1] ಸ್ವರ್ಗ ಮತ್ತು ನರಕಗಳ ನಡುವೆ ಅಥವಾ ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ ನಡುವೆ ಒಂದು ಅಡ್ಢಗೋಡೆಯನ್ನು ಸ್ಥಾಪಿಸಲಾಗುವುದು.
[2] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇವರು ಸ್ವರ್ಗ ಅಥವಾ ನರಕಕ್ಕೆ ಹೋಗದೆ ಅತಂತ್ರ ಸ್ಥಿತಿಯಲ್ಲಿರುವವರು. ಇವರ ದುಷ್ಕರ್ಮಗಳು ಇವರನ್ನು ಸ್ವರ್ಗ ಪ್ರವೇಶದಿಂದ ಮತ್ತು ಇವರ ಸತ್ಕರ್ಮಗಳು ಇವರನ್ನು ನರಕ ಪ್ರವೇಶದಿಂದ ತಡೆಯುತ್ತಿವೆ. ಇವರ ಬಗ್ಗೆ ಅಲ್ಲಾಹು ಅಂತಿಮ ತೀರ್ಪು ನೀಡುವ ತನಕ ಇವರು ಇವೆರಡರ ನಡುವಿನಲ್ಲಿರುವರು.

التفاسير:

external-link copy
47 : 7

وَاِذَا صُرِفَتْ اَبْصَارُهُمْ تِلْقَآءَ اَصْحٰبِ النَّارِ ۙ— قَالُوْا رَبَّنَا لَا تَجْعَلْنَا مَعَ الْقَوْمِ الظّٰلِمِیْنَ ۟۠

ಅವರ ದೃಷ್ಟಿಗಳನ್ನು ನರಕವಾಸಿಗಳ ಕಡೆಗೆ ತಿರುಗಿಸಲಾದಾಗ ಅವರು ಹೇಳುವರು: “ಓ ನಮ್ಮ ಪರಿಪಾಲಕನೇ! ನಮ್ಮನ್ನು ಅಕ್ರಮಿಗಳೊಡನೆ ಸೇರಿಸಬೇಡ.” info
التفاسير:

external-link copy
48 : 7

وَنَادٰۤی اَصْحٰبُ الْاَعْرَافِ رِجَالًا یَّعْرِفُوْنَهُمْ بِسِیْمٰىهُمْ قَالُوْا مَاۤ اَغْنٰی عَنْكُمْ جَمْعُكُمْ وَمَا كُنْتُمْ تَسْتَكْبِرُوْنَ ۟

ಎತ್ತರದ ಸ್ಥಳಗಳಲ್ಲಿರುವವರು ಚಿಹ್ನೆಗಳ ಮೂಲಕ ಗುರುತಿಸಿದ ಆ ಜನರನ್ನು (ನರಕವಾಸಿಗಳನ್ನು) ಕರೆದು ಹೇಳುವರು: “ನೀವು ಒಟ್ಟುಗೂಡಿಸಿದ (ಜನ ಮತ್ತು ಧನ) ಮತ್ತು ನೀವು ತೋರುತ್ತಿದ್ದ ಅಹಂಕಾರ ನಿಮಗೇನಾದರೂ ಉಪಕಾರ ಮಾಡಿದೆಯೇ? info
التفاسير:

external-link copy
49 : 7

اَهٰۤؤُلَآءِ الَّذِیْنَ اَقْسَمْتُمْ لَا یَنَالُهُمُ اللّٰهُ بِرَحْمَةٍ ؕ— اُدْخُلُوا الْجَنَّةَ لَا خَوْفٌ عَلَیْكُمْ وَلَاۤ اَنْتُمْ تَحْزَنُوْنَ ۟

ಅಲ್ಲಾಹು ದಯೆ ತೋರಲಾರ ಎಂದು ನೀವು ಆಣೆ ಮಾಡಿ ಹೇಳುತ್ತಿದ್ದದ್ದು ಈ ಜನರ ಬಗ್ಗೆಯಲ್ಲವೇ? ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮಗೆ ಯಾವುದೇ ಭಯವಿಲ್ಲ; ನೀವು ದುಃಖಿಸುವುದೂ ಇಲ್ಲ (ಎಂದು ಅವರೊಡನೆ ಈಗ ಹೇಳಲಾಗಿದೆ).” info
التفاسير:

external-link copy
50 : 7

وَنَادٰۤی اَصْحٰبُ النَّارِ اَصْحٰبَ الْجَنَّةِ اَنْ اَفِیْضُوْا عَلَیْنَا مِنَ الْمَآءِ اَوْ مِمَّا رَزَقَكُمُ اللّٰهُ ؕ— قَالُوْۤا اِنَّ اللّٰهَ حَرَّمَهُمَا عَلَی الْكٰفِرِیْنَ ۟ۙ

ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: “ನಮಗೆ ಸ್ವಲ್ಪ ನೀರು ಕೊಡಿ; ಅಥವಾ ಅಲ್ಲಾಹು ನಿಮಗೆ ನೀಡಿರುವ ಆಹಾರಗಳಲ್ಲಿ ಏನಾದರೂ ಕೊಡಿ.” ಅವರು (ಸ್ವರ್ಗವಾಸಿಗಳು) ಹೇಳುವರು: “ನಿಶ್ಚಯವಾಗಿಯೂ ಅಲ್ಲಾಹು ಅವೆರಡನ್ನೂ ಸತ್ಯನಿಷೇಧಿಗಳಿಗೆ ನಿಷೇಧಿಸಿದ್ದಾನೆ. info
التفاسير:

external-link copy
51 : 7

الَّذِیْنَ اتَّخَذُوْا دِیْنَهُمْ لَهْوًا وَّلَعِبًا وَّغَرَّتْهُمُ الْحَیٰوةُ الدُّنْیَا ۚ— فَالْیَوْمَ نَنْسٰىهُمْ كَمَا نَسُوْا لِقَآءَ یَوْمِهِمْ هٰذَا ۙ— وَمَا كَانُوْا بِاٰیٰتِنَا یَجْحَدُوْنَ ۟

ಅವರು (ಸತ್ಯನಿಷೇಧಿಗಳು) ಯಾರೆಂದರೆ, ತಮ್ಮ ಧರ್ಮವನ್ನು ಆಟ ಮತ್ತು ಮನೋರಂಜನೆಯಾಗಿ ಸ್ವೀಕರಿಸಿದವರು ಹಾಗೂ ಇಹಲೋಕ ಜೀವನಕ್ಕೆ ಮರುಳಾದವರು.” ಅವರ ಈ ದಿನದ ಭೇಟಿಯನ್ನು ಅವರು ಮರೆತುಬಿಟ್ಟಂತೆ, ಮತ್ತು ಅವರು ನಮ್ಮ ವಚನಗಳನ್ನು ನಿಷೇಧಿಸಿದಂತೆ, ಇಂದು ನಾವು ಕೂಡ ಅವರನ್ನು ಮರೆತುಬಿಡುವೆವು. info
التفاسير: