ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

external-link copy
8 : 58

اَلَمْ تَرَ اِلَی الَّذِیْنَ نُهُوْا عَنِ النَّجْوٰی ثُمَّ یَعُوْدُوْنَ لِمَا نُهُوْا عَنْهُ وَیَتَنٰجَوْنَ بِالْاِثْمِ وَالْعُدْوَانِ وَمَعْصِیَتِ الرَّسُوْلِ ؗ— وَاِذَا جَآءُوْكَ حَیَّوْكَ بِمَا لَمْ یُحَیِّكَ بِهِ اللّٰهُ ۙ— وَیَقُوْلُوْنَ فِیْۤ اَنْفُسِهِمْ لَوْلَا یُعَذِّبُنَا اللّٰهُ بِمَا نَقُوْلُ ؕ— حَسْبُهُمْ جَهَنَّمُ ۚ— یَصْلَوْنَهَا ۚ— فَبِئْسَ الْمَصِیْرُ ۟

ರಹಸ್ಯ ಮಾತುಕತೆ ನಡೆಸುವುದನ್ನು ವಿರೋಧಿಸಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರಿಗೆ ವಿರೋಧಿಸಲಾದ ಕೆಲಸವನ್ನೇ ಅವರು ಮಾಡುತ್ತಾರೆ. ಅವರು ಪರಸ್ಪರ ಪಾಪ, ಅತಿರೇಕ ಮತ್ತು ಪ್ರವಾದಿಯನ್ನು ಧಿಕ್ಕರಿಸುವ ಕೆಲಸಗಳಿಗಾಗಿ ರಹಸ್ಯ ಮಾತುಕತೆ ಮಾಡುತ್ತಾರೆ. ಅವರು ನಿಮ್ಮ ಬಳಿಗೆ ಬಂದರೆ ಅಲ್ಲಾಹು ನಿಮಗೆ ಸಲಾಂ ಹೇಳಲು ಬಳಸದ ಪದಗಳೊಂದಿಗೆ ಅವರು ನಿಮಗೆ ಸಲಾಂ ಹೇಳುತ್ತಾರೆ.[1] “ನಾವು ಹೇಳುವ ಈ ಮಾತುಗಳಿಗಾಗಿ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ?” ಎಂದು ಅವರು ಮನಸ್ಸಿನಲ್ಲೇ ಕೇಳುತ್ತಾರೆ.[2] ಅವರಿಗೆ ನರಕಾಗ್ನಿಯೇ ಸಾಕು. ಅವರು ಅದರಲ್ಲಿ ಉರಿಯುವರು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ. info

[1] ಅಂದರೆ ಅವರು "ಅಸ್ಸಲಾಮು ಅಲೈಕುಂ" (ನಿಮ್ಮ ಮೇಲೆ ಶಾಂತಿಯಿರಲಿ) ಎಂದು ಹೇಳುವ ಬದಲು "ಅಸ್ಸಾಮು ಅಲೈಕುಂ" (ನಿಮಗೆ ಸಾವು ಬರಲಿ) ಎಂದು ಹೇಳುತ್ತಿದ್ದರು.
[2] ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಿಜವಾಗಿಯೂ ಒಬ್ಬ ಪ್ರವಾದಿಯಾಗಿದ್ದರೆ ನಾವು ಅವರಿಗೆ ಇಂತಹ ಮಾತನ್ನು ಹೇಳಿಯೂ ಸಹ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ? ಎಂದು ಅವರು ಪರಸ್ಪರ ಕೇಳುತ್ತಾರೆ.

التفاسير: