ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
51 : 56

ثُمَّ اِنَّكُمْ اَیُّهَا الضَّآلُّوْنَ الْمُكَذِّبُوْنَ ۟ۙ

ನಂತರ, ಓ ಸತ್ಯನಿಷೇಧಿಗಳಾದ ದುರ್ಮಾರ್ಗಿಗಳೇ! info
التفاسير:

external-link copy
52 : 56

لَاٰكِلُوْنَ مِنْ شَجَرٍ مِّنْ زَقُّوْمٍ ۟ۙ

ನೀವು ಖಂಡಿತ ಝಕ್ಕೂಮ್ ಮರದಿಂದ ತಿನ್ನುವಿರಿ. info
التفاسير:

external-link copy
53 : 56

فَمَالِـُٔوْنَ مِنْهَا الْبُطُوْنَ ۟ۚ

ಅದರಿಂದ ನಿಮ್ಮ ಹೊಟ್ಟೆಗಳನ್ನು ತುಂಬಿಸುವಿರಿ. info
التفاسير:

external-link copy
54 : 56

فَشٰرِبُوْنَ عَلَیْهِ مِنَ الْحَمِیْمِ ۟ۚ

ಅದರ ಮೇಲೆ ನೀವು ಕುದಿಯುವ ನೀರನ್ನು ಕುಡಿಯುವಿರಿ. info
التفاسير:

external-link copy
55 : 56

فَشٰرِبُوْنَ شُرْبَ الْهِیْمِ ۟ؕ

ಬಾಯಾರಿದ ಒಂಟೆಗಳು ಕುಡಿಯುವಂತೆ ಕುಡಿಯುವಿರಿ. info
التفاسير:

external-link copy
56 : 56

هٰذَا نُزُلُهُمْ یَوْمَ الدِّیْنِ ۟ؕ

ಇದು ಪ್ರತಿಫಲ ದಿನದಂದು ಅವರಿಗೆ ನೀಡಲಾಗುವ ಸತ್ಕಾರವಾಗಿದೆ.” info
التفاسير:

external-link copy
57 : 56

نَحْنُ خَلَقْنٰكُمْ فَلَوْلَا تُصَدِّقُوْنَ ۟

ನಾವೇ ನಿಮ್ಮನ್ನು ಸೃಷ್ಟಿಸಿದವರು. ಆದರೂ ನೀವು ನಂಬುವುದಿಲ್ಲವೇಕೆ? info
التفاسير:

external-link copy
58 : 56

اَفَرَءَیْتُمْ مَّا تُمْنُوْنَ ۟ؕ

ನೀವು ಸ್ರವಿಸುವ ವೀರ್ಯವನ್ನು ನೋಡಿದ್ದೀರಾ? info
التفاسير:

external-link copy
59 : 56

ءَاَنْتُمْ تَخْلُقُوْنَهٗۤ اَمْ نَحْنُ الْخٰلِقُوْنَ ۟

ಅದರಿಂದ ಮನುಷ್ಯನನ್ನು ಸೃಷ್ಟಿಸುವವರು ನೀವೋ? ಅಥವಾ ಸೃಷ್ಟಿಕರ್ತರು ನಾವೋ? info
التفاسير:

external-link copy
60 : 56

نَحْنُ قَدَّرْنَا بَیْنَكُمُ الْمَوْتَ وَمَا نَحْنُ بِمَسْبُوْقِیْنَ ۟ۙ

ನಾವೇ ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿದವರು. ನಾವು ಸೋಲುವುದಿಲ್ಲ, info
التفاسير:

external-link copy
61 : 56

عَلٰۤی اَنْ نُّبَدِّلَ اَمْثَالَكُمْ وَنُنْشِئَكُمْ فِیْ مَا لَا تَعْلَمُوْنَ ۟

ನಿಮ್ಮ ಸ್ಥಾನದಲ್ಲಿ ನಿಮ್ಮಂತಹವರನ್ನು ಸೃಷ್ಟಿಸುವ ಮತ್ತು ನಿಮ್ಮನ್ನು ನಿಮಗೆ (ಸ್ವಲ್ಪವೂ) ತಿಳಿದಿಲ್ಲದ ಹೊಸ ರೂಪದಲ್ಲಿ ಸೃಷ್ಟಿಸುವ ವಿಷಯದಲ್ಲಿ. info
التفاسير:

external-link copy
62 : 56

وَلَقَدْ عَلِمْتُمُ النَّشْاَةَ الْاُوْلٰی فَلَوْلَا تَذَكَّرُوْنَ ۟

ಪ್ರಥಮ ಬಾರಿ ಸೃಷ್ಟಿಸಿದ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಆದರೂ ನೀವೇಕೆ ಪಾಠ ಕಲಿಯುವುದಿಲ್ಲ? info
التفاسير:

external-link copy
63 : 56

اَفَرَءَیْتُمْ مَّا تَحْرُثُوْنَ ۟ؕ

ನೀವು ಬಿತ್ತುವ (ಬೀಜವನ್ನು) ನೀವು ನೋಡಿದ್ದೀರಾ? info
التفاسير:

external-link copy
64 : 56

ءَاَنْتُمْ تَزْرَعُوْنَهٗۤ اَمْ نَحْنُ الزّٰرِعُوْنَ ۟

ಅದನ್ನು ನೀವು (ಸಸ್ಯವಾಗಿ) ಬೆಳೆಸುತ್ತೀರೋ? ಅಥವಾ ಬೆಳೆಸುವವರು ನಾವೋ? info
التفاسير:

external-link copy
65 : 56

لَوْ نَشَآءُ لَجَعَلْنٰهُ حُطَامًا فَظَلْتُمْ تَفَكَّهُوْنَ ۟

ನಾವು ಇಚ್ಛಿಸಿದರೆ ಅದನ್ನು (ಸಸ್ಯವನ್ನು) ಕಸಕಡ್ಡಿಯಾಗಿ ಮಾಡುತ್ತಿದ್ದೆವು. ಆಗ ನೀವು ಅಚ್ಚರಿಯಿಂದ ಹೇಳುವಿರಿ: info
التفاسير:

external-link copy
66 : 56

اِنَّا لَمُغْرَمُوْنَ ۟ۙ

“ನಾವು ನಷ್ಟದ ಹೊರೆಯನ್ನು ಹೊರಬೇಕಾಗಿ ಬಂದಿದೆ. info
التفاسير:

external-link copy
67 : 56

بَلْ نَحْنُ مَحْرُوْمُوْنَ ۟

ಅಲ್ಲ, ವಾಸ್ತವವಾಗಿ ನಮಗೆ ತಡೆಯಲಾಗಿದೆ.” info
التفاسير:

external-link copy
68 : 56

اَفَرَءَیْتُمُ الْمَآءَ الَّذِیْ تَشْرَبُوْنَ ۟ؕ

ನೀವು ಕುಡಿಯುವ ನೀರನ್ನು ನೀವು ನೋಡಿದ್ದೀರಾ? info
التفاسير:

external-link copy
69 : 56

ءَاَنْتُمْ اَنْزَلْتُمُوْهُ مِنَ الْمُزْنِ اَمْ نَحْنُ الْمُنْزِلُوْنَ ۟

ಅದನ್ನು ಮೋಡದಿಂದ ಸುರಿಸಿದವರು ನೀವೋ? ಅಥವಾ ಸುರಿಸುವವರು ನಾವೋ? info
التفاسير:

external-link copy
70 : 56

لَوْ نَشَآءُ جَعَلْنٰهُ اُجَاجًا فَلَوْلَا تَشْكُرُوْنَ ۟

ನಾವು ಇಚ್ಛಿಸಿದರೆ ಅದನ್ನು ಕಹಿಯಾಗಿ ಮಾಡುತ್ತಿದ್ದೆವು. ಆದರೂ ನೀವು ಕೃತಜ್ಞರಾಗುವುದಿಲ್ಲವೇ? info
التفاسير:

external-link copy
71 : 56

اَفَرَءَیْتُمُ النَّارَ الَّتِیْ تُوْرُوْنَ ۟ؕ

ನೀವು ಉರಿಸುವ ಬೆಂಕಿಯನ್ನು ನೀವು ನೋಡಿದ್ದೀರಾ? info
التفاسير:

external-link copy
72 : 56

ءَاَنْتُمْ اَنْشَاْتُمْ شَجَرَتَهَاۤ اَمْ نَحْنُ الْمُنْشِـُٔوْنَ ۟

ಅದರ ಮರವನ್ನು ಸೃಷ್ಟಿಸಿದ್ದು ನೀವೋ? ಅಥವಾ ಸೃಷ್ಟಿಸುವವರು ನಾವೋ? info
التفاسير:

external-link copy
73 : 56

نَحْنُ جَعَلْنٰهَا تَذْكِرَةً وَّمَتَاعًا لِّلْمُقْوِیْنَ ۟ۚ

ನಾವು ಅದನ್ನೊಂದು ಉಪದೇಶವಾಗಿ ಮತ್ತು ಪ್ರಯಾಣಿಕರಿಗೆ ಸವಲತ್ತಾಗಿ ಮಾಡಿದ್ದೇವೆ.[1] info

[1] ಹಿಂದಿನ ಕಾಲದಲ್ಲಿ ಜನರು ಮರುಭೂಮಿ ಮತ್ತು ಅಡವಿಗಳ ಮೂಲಕ ಪ್ರಯಾಣ ಮಾಡುತ್ತಿದ್ದರು. ರಾತ್ರಿ ವೇಳೆಯಲ್ಲಿ ಅವರು ಮರಗಳನ್ನು ಕಡಿದು ಬೆಂಕಿಯುರಿಸುತ್ತಿದ್ದರು. ಅವರು ಅದರಿಂದ ದೊಂದಿಗಳನ್ನು ತಯಾರಿಸುತ್ತಿದ್ದರು ಮತ್ತು ಚಳಿ ಕಾಯಿಸುತ್ತಿದ್ದರು. ವನ್ಯಮೃಗಗಳನ್ನು ದೂರವಿಡಲು ಕೂಡ ಅದು ಬಳಕೆಯಾಗುತ್ತಿತ್ತು.

التفاسير:

external-link copy
74 : 56

فَسَبِّحْ بِاسْمِ رَبِّكَ الْعَظِیْمِ ۟

ಆದ್ದರಿಂದ ನೀವು ಮಹತ್ವಪೂರ್ಣನಾದ ನಿಮ್ಮ ಪರಿಪಾಲಕನ (ಅಲ್ಲಾಹನ) ಹೆಸರನ್ನು (ಅವನ ಪರಿಶುದ್ಧತೆಯನ್ನು) ಕೊಂಡಾಡಿರಿ. info
التفاسير:

external-link copy
75 : 56

فَلَاۤ اُقْسِمُ بِمَوٰقِعِ النُّجُوْمِ ۟ۙ

ನಾನು ನಕ್ಷತ್ರಗಳ ಅಸ್ತಮ ಸ್ಥಾನದ ಮೇಲೆ ಆಣೆ ಮಾಡಿ ಹೇಳುತ್ತೇನೆ. info
التفاسير:

external-link copy
76 : 56

وَاِنَّهٗ لَقَسَمٌ لَّوْ تَعْلَمُوْنَ عَظِیْمٌ ۟ۙ

ನೀವು ತಿಳಿದಿದ್ದರೆ ಅದು ಬಹಳ ದೊಡ್ಡ ಆಣೆಯಾಗಿದೆ. info
التفاسير: