ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
47 : 41

اِلَیْهِ یُرَدُّ عِلْمُ السَّاعَةِ ؕ— وَمَا تَخْرُجُ مِنْ ثَمَرٰتٍ مِّنْ اَكْمَامِهَا وَمَا تَحْمِلُ مِنْ اُ وَلَا تَضَعُ اِلَّا بِعِلْمِهٖ ؕ— وَیَوْمَ یُنَادِیْهِمْ اَیْنَ شُرَكَآءِیْ ۙ— قَالُوْۤا اٰذَنّٰكَ ۙ— مَا مِنَّا مِنْ شَهِیْدٍ ۟ۚ

ಅಂತ್ಯಸಮಯದ ಕುರಿತಾದ ಜ್ಞಾನವನ್ನು ಅಲ್ಲಾಹನಿಗೆ ಮರಳಿಸಲಾಗುತ್ತದೆ. ಅವನ ತಿಳುವಳಿಕೆಯಿಲ್ಲದೆ ಯಾವುದೇ ಹಣ್ಣು ಅದರ ತೊಗಲಿನಿಂದ ಹೊರಹೊಮ್ಮುವುದಿಲ್ಲ. (ಅವನ ತಿಳುವಳಿಕೆಯಿಲ್ಲದೆ) ಯಾವುದೇ ಸ್ತ್ರೀ ಗರ್ಭ ಧರಿಸುವುದೋ ಹಡೆಯುವುದೋ ಇಲ್ಲ. “ನನ್ನ ಸಹಭಾಗಿಗಳು ಎಲ್ಲಿ?” ಎಂದು ಅವನು ಅವರನ್ನು ಕರೆದು ಕೇಳುವ ದಿನ! ಅವರು ಉತ್ತರಿಸುವರು: “ನಮ್ಮಲ್ಲಿ ಯಾರೂ ಅದಕ್ಕೆ ಸಾಕ್ಷಿಗಳಲ್ಲ ಎಂದು ನಾವು ನಿನಗೆ ತಿಳಿಸುತ್ತಿದ್ದೇವೆ.” info
التفاسير:

external-link copy
48 : 41

وَضَلَّ عَنْهُمْ مَّا كَانُوْا یَدْعُوْنَ مِنْ قَبْلُ وَظَنُّوْا مَا لَهُمْ مِّنْ مَّحِیْصٍ ۟

ಇದಕ್ಕೆ ಮೊದಲು ಅವರು ಕರೆದು ಪ್ರಾರ್ಥಿಸುತ್ತಿದ್ದವರೆಲ್ಲರೂ (ದೇವರುಗಳೆಲ್ಲರೂ) ಅವರನ್ನು ಬಿಟ್ಟು ಹೋಗುವರು. ಈಗ ಅವರನ್ನು ಪಾರು ಮಾಡುವವರು ಯಾರೂ ಇಲ್ಲವೆಂದು ಅವರಿಗೆ ಮನವರಿಕೆಯಾಗುವುದು. info
التفاسير:

external-link copy
49 : 41

لَا یَسْـَٔمُ الْاِنْسَانُ مِنْ دُعَآءِ الْخَیْرِ ؗ— وَاِنْ مَّسَّهُ الشَّرُّ فَیَـُٔوْسٌ قَنُوْطٌ ۟

ಒಳಿತನ್ನು ಬೇಡಲು ಮನುಷ್ಯನಿಗೆ ಆಯಾಸವಾಗುವುದಿಲ್ಲ. ಆದರೆ ಅವನಿಗೆ ತೊಂದರೆಯುಂಟಾದರೆ ಅವನು ಹತಾಶ ಮತ್ತು ನಿರಾಶನಾಗುತ್ತಾನೆ. info
التفاسير:

external-link copy
50 : 41

وَلَىِٕنْ اَذَقْنٰهُ رَحْمَةً مِّنَّا مِنْ بَعْدِ ضَرَّآءَ مَسَّتْهُ لَیَقُوْلَنَّ هٰذَا لِیْ ۙ— وَمَاۤ اَظُنُّ السَّاعَةَ قَآىِٕمَةً ۙ— وَّلَىِٕنْ رُّجِعْتُ اِلٰی رَبِّیْۤ اِنَّ لِیْ عِنْدَهٗ لَلْحُسْنٰی ۚ— فَلَنُنَبِّئَنَّ الَّذِیْنَ كَفَرُوْا بِمَا عَمِلُوْا ؗ— وَلَنُذِیْقَنَّهُمْ مِّنْ عَذَابٍ غَلِیْظٍ ۟

ಮನುಷ್ಯನಿಗೆ ವಿಪತ್ತು ಬಾಧಿಸಿದ ಬಳಿಕ ನಾವು ಅವನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ, ನಿಶ್ಚಯವಾಗಿಯೂ ಅವನು ಹೇಳುವನು: “ಇದಕ್ಕೆ ನಾನು ಹಕ್ಕುಳ್ಳವನಾಗಿದ್ದೇನೆ. ಅಂತ್ಯಸಮಯವು ಸಂಭವಿಸುವುದೆಂದು ನಾನು ಭಾವಿಸುವುದಿಲ್ಲ. ಇನ್ನು ನನ್ನನ್ನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಗೆ ಮರಳಿಸಲಾದರೂ ಸಹ ಅವನ ಬಳಿ ನನಗೆ ಒಳಿತು ಮಾತ್ರವೇ ಇರುತ್ತದೆ.” ಆ ಸತ್ಯನಿಷೇಧಿಗಳಿಗೆ ಅವರು ಮಾಡಿದ ಕರ್ಮಗಳ ಬಗ್ಗೆ ನಾವು ಖಂಡಿತ ತಿಳಿಸಿಕೊಡುವೆವು ಮತ್ತು ಅವರಿಗೆ ಕಠೋರ ಶಿಕ್ಷೆಯ ರುಚಿಯನ್ನು ಖಂಡಿತ ತೋರಿಸುವೆವು. info
التفاسير:

external-link copy
51 : 41

وَاِذَاۤ اَنْعَمْنَا عَلَی الْاِنْسَانِ اَعْرَضَ وَنَاٰ بِجَانِبِهٖ ۚ— وَاِذَا مَسَّهُ الشَّرُّ فَذُوْ دُعَآءٍ عَرِیْضٍ ۟

ನಾವು ಮನುಷ್ಯನಿಗೆ ಅನುಗ್ರಹವನ್ನು ದಯಪಾಲಿಸಿದರೆ ಅವನು ಮುಖ ತಿರುಗಿಸಿ ನಡೆಯುತ್ತಾನೆ ಮತ್ತು ತನ್ನಷ್ಟಕ್ಕೆ ದೂರ ಸರಿಯುತ್ತಾನೆ. ಆದರೆ ಅವನಿಗೆ ಆಪತ್ತು ಸಂಭವಿಸಿದರೆ ಅವನು ದೀರ್ಘ ಪ್ರಾರ್ಥನೆಗಳಲ್ಲಿ ತೊಡಗುತ್ತಾನೆ. info
التفاسير:

external-link copy
52 : 41

قُلْ اَرَءَیْتُمْ اِنْ كَانَ مِنْ عِنْدِ اللّٰهِ ثُمَّ كَفَرْتُمْ بِهٖ مَنْ اَضَلُّ مِمَّنْ هُوَ فِیْ شِقَاقٍ بَعِیْدٍ ۟

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ? ಇದು (ಕುರ್‌ಆನ್) ಅಲ್ಲಾಹನ ಕಡೆಯಿಂದಾಗಿದ್ದು, ನಂತರ ನೀವು ಅದನ್ನು ನಿಷೇಧಿಸುವುದಾದರೆ, (ಸತ್ಯದಿಂದ) ವಿದೂರವಾದ ಕಡು ವಿರೋಧದಲ್ಲಿರುವವನಿಗಿಂತಲೂ ಹೆಚ್ಚು ದಾರಿತಪ್ಪಿದವನು ಯಾರು?” info
التفاسير:

external-link copy
53 : 41

سَنُرِیْهِمْ اٰیٰتِنَا فِی الْاٰفَاقِ وَفِیْۤ اَنْفُسِهِمْ حَتّٰی یَتَبَیَّنَ لَهُمْ اَنَّهُ الْحَقُّ ؕ— اَوَلَمْ یَكْفِ بِرَبِّكَ اَنَّهٗ عَلٰی كُلِّ شَیْءٍ شَهِیْدٌ ۟

ನಾವು ಸದ್ಯವೇ ಅವರಿಗೆ ದಿಗಂತಗಳಲ್ಲಿ ಮತ್ತು ಸ್ವತಃ ಅವರಲ್ಲೇ ನಮ್ಮ ದೃಷ್ಟಾಂತಗಳನ್ನು ತೋರಿಸಿಕೊಡುವೆವು. ಇದು (ಕುರ್‌ಆನ್) ಸತ್ಯವೆಂದು ಅವರಿಗೆ ಸ್ಪಷ್ಟವಾಗುವ ತನಕ. ನಿಮ್ಮ ಪರಿಪಾಲಕನು (ಅಲ್ಲಾಹು) ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿರುವುದು ನಿಮಗೆ ಸಾಕಾಗುವುದಿಲ್ಲವೇ? info
التفاسير:

external-link copy
54 : 41

اَلَاۤ اِنَّهُمْ فِیْ مِرْیَةٍ مِّنْ لِّقَآءِ رَبِّهِمْ ؕ— اَلَاۤ اِنَّهٗ بِكُلِّ شَیْءٍ مُّحِیْطٌ ۟۠

ತಿಳಿಯಿರಿ! ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವ ವಿಷಯದಲ್ಲಿ ಸಂದೇಹದಲ್ಲಿದ್ದಾರೆ. ತಿಳಿಯಿರಿ! ನಿಶ್ಚಯವಾಗಿಯೂ ಅವನು ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದ್ದಾನೆ. info
التفاسير: