ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
25 : 37

مَا لَكُمْ لَا تَنَاصَرُوْنَ ۟

(ಅವರೊಡನೆ ಕೇಳಲಾಗುವುದು): “ನಿಮಗೇನಾಗಿದೆ? ನೀವೇಕೆ ಪರಸ್ಪರ ಸಹಾಯ ಮಾಡುವುದಿಲ್ಲ?” info
التفاسير:

external-link copy
26 : 37

بَلْ هُمُ الْیَوْمَ مُسْتَسْلِمُوْنَ ۟

ಅಲ್ಲ, ವಾಸ್ತವವಾಗಿ ಇಂದು ಅವರು (ಸಂಪೂರ್ಣ) ಶರಣಾಗಿದ್ದಾರೆ. info
التفاسير:

external-link copy
27 : 37

وَاَقْبَلَ بَعْضُهُمْ عَلٰی بَعْضٍ یَّتَسَآءَلُوْنَ ۟

ಅವರಲ್ಲಿ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು. info
التفاسير:

external-link copy
28 : 37

قَالُوْۤا اِنَّكُمْ كُنْتُمْ تَاْتُوْنَنَا عَنِ الْیَمِیْنِ ۟

ಅವರು ಹೇಳುವರು: “ನಿಶ್ಚಯವಾಗಿಯೂ ನೀವು ನಮ್ಮ ಬಲಭಾಗದಿಂದ ನಮ್ಮ ಬಳಿಗೆ ಬರುತ್ತಿದ್ದಿರಿ.” info
التفاسير:

external-link copy
29 : 37

قَالُوْا بَلْ لَّمْ تَكُوْنُوْا مُؤْمِنِیْنَ ۟ۚ

ಅವರು ಉತ್ತರಿಸುವರು: “ಅಲ್ಲ, ನೀವು ಸತ್ಯವಿಶ್ವಾಸಿಗಳಾಗಿರಲಿಲ್ಲ. info
التفاسير:

external-link copy
30 : 37

وَمَا كَانَ لَنَا عَلَیْكُمْ مِّنْ سُلْطٰنٍ ۚ— بَلْ كُنْتُمْ قَوْمًا طٰغِیْنَ ۟

ನಮಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿರಲಿಲ್ಲ. ಬದಲಿಗೆ, ನೀವು ಅತಿರೇಕಿಗಳಾದ ಜನರಾಗಿದ್ದಿರಿ. info
التفاسير:

external-link copy
31 : 37

فَحَقَّ عَلَیْنَا قَوْلُ رَبِّنَاۤ ۖۗ— اِنَّا لَذَآىِٕقُوْنَ ۟

ಆದ್ದರಿಂದ ನಮ್ಮ ಪರಿಪಾಲಕನ (ಅಲ್ಲಾಹನ) ವಚನವು ನಮ್ಮ ಮೇಲೆ ಖಾತ್ರಿಯಾಯಿತು. ನಿಶ್ಚಯವಾಗಿಯೂ ನಾವು ಶಿಕ್ಷೆಯ ರುಚಿಯನ್ನು ನೋಡುವೆವು. info
التفاسير:

external-link copy
32 : 37

فَاَغْوَیْنٰكُمْ اِنَّا كُنَّا غٰوِیْنَ ۟

ನಾವು ನಿಮ್ಮನ್ನು ದಾರಿತಪ್ಪಿಸಿದೆವು. (ಏಕೆಂದರೆ) ನಾವು ಸ್ವತಃ ದಾರಿತಪ್ಪಿದ್ದೆವು.” info
التفاسير:

external-link copy
33 : 37

فَاِنَّهُمْ یَوْمَىِٕذٍ فِی الْعَذَابِ مُشْتَرِكُوْنَ ۟

ಆದ್ದರಿಂದ ಆ ದಿನದಂದು ಅವರೆಲ್ಲರೂ ಶಿಕ್ಷೆಯಲ್ಲಿ ಪಾಲುದಾರರಾಗುವರು. info
التفاسير:

external-link copy
34 : 37

اِنَّا كَذٰلِكَ نَفْعَلُ بِالْمُجْرِمِیْنَ ۟

ನಿಶ್ಚಯವಾಗಿಯೂ ನಾವು ಅಪರಾಧಿಗಳೊಡನೆ ಹೀಗೆಯೇ ವರ್ತಿಸುವೆವು. info
التفاسير:

external-link copy
35 : 37

اِنَّهُمْ كَانُوْۤا اِذَا قِیْلَ لَهُمْ لَاۤ اِلٰهَ اِلَّا اللّٰهُ یَسْتَكْبِرُوْنَ ۟ۙ

ಅವರೊಡನೆ, “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ” ಎಂದು ಹೇಳಲಾದರೆ ಅವರು ಅಹಂಕಾರ ತೋರುತ್ತಿದ್ದರು. info
التفاسير:

external-link copy
36 : 37

وَیَقُوْلُوْنَ اَىِٕنَّا لَتَارِكُوْۤا اٰلِهَتِنَا لِشَاعِرٍ مَّجْنُوْنٍ ۟ؕ

ಅವರು ಹೇಳುತ್ತಿದ್ದರು: “ಒಬ್ಬ ಮಾನಸಿಕ ಅಸ್ವಸ್ಥ ಕವಿಯ ಮಾತು ಕೇಳಿ ನಾವು ನಮ್ಮ ದೇವರುಗಳನ್ನು ಬಿಟ್ಟುಬಿಡಬೇಕೇ?” info
التفاسير:

external-link copy
37 : 37

بَلْ جَآءَ بِالْحَقِّ وَصَدَّقَ الْمُرْسَلِیْنَ ۟

ಅಲ್ಲ, ವಾಸ್ತವವಾಗಿ ಅವರು (ಪ್ರವಾದಿ) ಸತ್ಯದೊಂದಿಗೆ ಬಂದಿದ್ದರು ಮತ್ತು ಅವರು (ಮೊದಲಿನ) ಪ್ರವಾದಿಗಳನ್ನು ದೃಢೀಕರಿಸಿದ್ದರು. info
التفاسير:

external-link copy
38 : 37

اِنَّكُمْ لَذَآىِٕقُوا الْعَذَابِ الْاَلِیْمِ ۟ۚ

ನಿಶ್ಚಯವಾಗಿಯೂ ನೀವು ಯಾತನಾಮಯ ಶಿಕ್ಷೆಯ ರುಚಿಯನ್ನು ನೋಡುವಿರಿ. info
التفاسير:

external-link copy
39 : 37

وَمَا تُجْزَوْنَ اِلَّا مَا كُنْتُمْ تَعْمَلُوْنَ ۟ۙ

ನೀವು ಮಾಡಿದ ಕರ್ಮಗಳ ಪ್ರತಿಫಲವನ್ನೇ ಹೊರತು ಬೇರೇನೂ ನಿಮಗೆ ನೀಡಲಾಗುವುದಿಲ್ಲ. info
التفاسير:

external-link copy
40 : 37

اِلَّا عِبَادَ اللّٰهِ الْمُخْلَصِیْنَ ۟

ಆದರೆ, ಅಲ್ಲಾಹನ ನಿಷ್ಕಳಂಕ ದಾಸರು ಇದರಿಂದ ಹೊರತಾಗಿದ್ದಾರೆ. info
التفاسير:

external-link copy
41 : 37

اُولٰٓىِٕكَ لَهُمْ رِزْقٌ مَّعْلُوْمٌ ۟ۙ

ಅವರಿಗೆ ನಿಶ್ಚಿತ ಉಪಜೀವನವಿದೆ. info
التفاسير:

external-link copy
42 : 37

فَوَاكِهُ ۚ— وَهُمْ مُّكْرَمُوْنَ ۟ۙ

ಹಣ್ಣು-ಹಂಪಲುಗಳಿವೆ! ಅವರನ್ನು ಅಲ್ಲಿ ಗೌರವಿಸಲಾಗುವುದು. info
التفاسير:

external-link copy
43 : 37

فِیْ جَنّٰتِ النَّعِیْمِ ۟ۙ

ಸುಖಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ. info
التفاسير:

external-link copy
44 : 37

عَلٰی سُرُرٍ مُّتَقٰبِلِیْنَ ۟

ಅವರು ಪರಸ್ಪರ ಎದುರು-ಬದುರಾಗಿ ಮಂಚಗಳಲ್ಲಿ ಕುಳಿತಿರುವರು. info
التفاسير:

external-link copy
45 : 37

یُطَافُ عَلَیْهِمْ بِكَاْسٍ مِّنْ مَّعِیْنٍ ۟ۙ

ಹರಿಯುವ ಚಿಲುಮೆಯ ನೀರು ತುಂಬಿದ ಲೋಟಗಳನ್ನು ಅವರ ಸುತ್ತಲೂ ತರಲಾಗುವುದು. info
التفاسير:

external-link copy
46 : 37

بَیْضَآءَ لَذَّةٍ لِّلشّٰرِبِیْنَ ۟ۚ

ಅದು ಬೆಳ್ಳಗಿದ್ದು ಕುಡಿಯುವವರಿಗೆ ಆಹ್ಲಾದಕರವಾಗಿರುವುದು. info
التفاسير:

external-link copy
47 : 37

لَا فِیْهَا غَوْلٌ وَّلَا هُمْ عَنْهَا یُنْزَفُوْنَ ۟

ಅದರಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲ. ಅದರಿಂದ ನಶೆಯೂ ಉಂಟಾಗುವುದಿಲ್ಲ. info
التفاسير:

external-link copy
48 : 37

وَعِنْدَهُمْ قٰصِرٰتُ الطَّرْفِ عِیْنٌ ۟ۙ

ದೃಷ್ಟಿಯನ್ನು ನಿಯಂತ್ರಿಸುವ[1] ಮತ್ತು ಅರಳಿದ ನೇತ್ರಗಳುಳ್ಳ ಅಪ್ಸರೆಯರು ಅವರ ಬಳಿಯಿರುವರು. info

[1] ಅಂದರೆ ಅವರು ಅತ್ಯಂತ ಪರಿಶುದ್ಧ ಮತ್ತು ಸಭ್ಯರಾಗಿದ್ದು ತಮ್ಮ ಗಂಡಂದಿರ ಹೊರತು ಬೇರೆ ಯಾರ ಕಡೆಗೂ ದೃಷ್ಟಿ ಹಾಯಿಸುವುದಿಲ್ಲ.

التفاسير:

external-link copy
49 : 37

كَاَنَّهُنَّ بَیْضٌ مَّكْنُوْنٌ ۟

ಅವರು ಜೋಪಾನವಾಗಿಡಲಾದ ಮೊಟ್ಟೆಗಳಂತೆ ಇರುವರು. info
التفاسير:

external-link copy
50 : 37

فَاَقْبَلَ بَعْضُهُمْ عَلٰی بَعْضٍ یَّتَسَآءَلُوْنَ ۟

ಅವರು ಪರಸ್ಪರ ಒಬ್ಬರು ಇನ್ನೊಬ್ಬರ ಕಡೆಗೆ ತಿರುಗಿ ಪ್ರಶ್ನಿಸುವರು. info
التفاسير:

external-link copy
51 : 37

قَالَ قَآىِٕلٌ مِّنْهُمْ اِنِّیْ كَانَ لِیْ قَرِیْنٌ ۟ۙ

ಅವರಲ್ಲಿ ಒಬ್ಬನು ಹೇಳುವನು: “ನಿಜಕ್ಕೂ ನನಗೊಬ್ಬ ಗೆಳೆಯನಿದ್ದನು. info
التفاسير: