ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
36 : 27

فَلَمَّا جَآءَ سُلَیْمٰنَ قَالَ اَتُمِدُّوْنَنِ بِمَالٍ ؗ— فَمَاۤ اٰتٰىنِ اللّٰهُ خَیْرٌ مِّمَّاۤ اٰتٰىكُمْ ۚ— بَلْ اَنْتُمْ بِهَدِیَّتِكُمْ تَفْرَحُوْنَ ۟

ಆ ದೂತರು ಸುಲೈಮಾನರ ಬಳಿಗೆ ಬಂದಾಗ ಅವರು ಹೇಳಿದರು: “ನೀವು ನಿಮ್ಮ ಸಂಪತ್ತಿನ ಮೂಲಕ ನನಗೆ ಸಹಾಯ ಮಾಡಲು ಬಯಸುತ್ತೀರಾ? ಆದರೆ ನಿಮಗೆ ನೀಡಿರುವುದಕ್ಕಿಂತಲೂ ಶ್ರೇಷ್ಠವಾದುದನ್ನು ಅಲ್ಲಾಹು ನನಗೆ ನೀಡಿದ್ದಾನೆ. ಆದರೆ ನೀವಂತೂ ನಿಮ್ಮ ಉಡುಗೊರೆಯ ಬಗ್ಗೆ ಹೆಮ್ಮೆ ಪಡುತ್ತೀರಿ. info
التفاسير:

external-link copy
37 : 27

اِرْجِعْ اِلَیْهِمْ فَلَنَاْتِیَنَّهُمْ بِجُنُوْدٍ لَّا قِبَلَ لَهُمْ بِهَا وَلَنُخْرِجَنَّهُمْ مِّنْهَاۤ اَذِلَّةً وَّهُمْ صٰغِرُوْنَ ۟

ನೀವು ಅವರ (ನಿಮ್ಮ ಆಡಳಿತಗಾರರ) ಬಳಿಗೆ ವಾಪಸು ಹೋಗಿರಿ. ನಿಶ್ಚಯವಾಗಿಯೂ ಅವರಿಗೆ ಎದುರಿಸಲು ಸಾಧ್ಯವಾಗದ ಬೃಹತ್ ಸೈನ್ಯಗಳೊಂದಿಗೆ ನಾವು ಅವರ ಬಳಿಗೆ ಬರುವೆವು. ನಂತರ ಅವರನ್ನು ಅತ್ಯಂತ ಹೀನ ಸ್ಥಿತಿಯಲ್ಲಿ ಅವಮಾನದೊಂದಿಗೆ ಅಲ್ಲಿಂದ ಓಡಿಸುವೆವು.” info
التفاسير:

external-link copy
38 : 27

قَالَ یٰۤاَیُّهَا الْمَلَؤُا اَیُّكُمْ یَاْتِیْنِیْ بِعَرْشِهَا قَبْلَ اَنْ یَّاْتُوْنِیْ مُسْلِمِیْنَ ۟

ಸುಲೈಮಾನ್ ಹೇಳಿದರು: “ಓ ಸರದಾರರೇ! ಅವರು ನನ್ನ ಬಳಿಗೆ ಮುಸಲ್ಮಾನರಾಗಿ ಬರುವುದಕ್ಕೆ ಮೊದಲೇ ಅವಳ ಸಿಂಹಾಸನವನ್ನು ಯಾರು ನನಗೆ ತಂದು ಕೊಡುತ್ತೀರಿ?” info
التفاسير:

external-link copy
39 : 27

قَالَ عِفْرِیْتٌ مِّنَ الْجِنِّ اَنَا اٰتِیْكَ بِهٖ قَبْلَ اَنْ تَقُوْمَ مِنْ مَّقَامِكَ ۚ— وَاِنِّیْ عَلَیْهِ لَقَوِیٌّ اَمِیْنٌ ۟

ಒಬ್ಬ ಬಲಿಷ್ಠ ರೂಪದ ಜಿನ್ನ್ ಹೇಳಿದನು: “ನೀವು ನಿಮ್ಮ ಸ್ಥಾನದಿಂದ ಎದ್ದೇಳುವುದಕ್ಕೆ ಮೊದಲೇ ನಾನು ಅದನ್ನು ತರುವೆನು. ನಿಜಕ್ಕೂ ನನಗೆ ಅದನ್ನು ಮಾಡುವ ಶಕ್ತಿಯಿದೆ ಮತ್ತು ನಾನು ವಿಶ್ವಾಸಯೋಗ್ಯನಾಗಿದ್ದೇನೆ.” info
التفاسير:

external-link copy
40 : 27

قَالَ الَّذِیْ عِنْدَهٗ عِلْمٌ مِّنَ الْكِتٰبِ اَنَا اٰتِیْكَ بِهٖ قَبْلَ اَنْ یَّرْتَدَّ اِلَیْكَ طَرْفُكَ ؕ— فَلَمَّا رَاٰهُ مُسْتَقِرًّا عِنْدَهٗ قَالَ هٰذَا مِنْ فَضْلِ رَبِّیْ ۫— لِیَبْلُوَنِیْۤ ءَاَشْكُرُ اَمْ اَكْفُرُ ؕ— وَمَنْ شَكَرَ فَاِنَّمَا یَشْكُرُ لِنَفْسِهٖ ۚ— وَمَنْ كَفَرَ فَاِنَّ رَبِّیْ غَنِیٌّ كَرِیْمٌ ۟

ಗ್ರಂಥದ ಜ್ಞಾನವಿರುವ ಒಬ್ಬ ವ್ಯಕ್ತಿ ಎದ್ದು ನಿಂತು ಹೇಳಿದರು: “ನೀವು ಕಣ್ಣೆವೆಯಿಕ್ಕುವುದಕ್ಕೆ ಮೊದಲೇ ನಾನು ಅದನ್ನು ತರುವೆನು.” ಆ ಸಿಂಹಾಸನವು ತನ್ನ ಮುಂದೆ ನಿಂತಿರುವುದ್ನು ಕಂಡಾಗ ಸುಲೈಮಾನ್ ಹೇಳಿದರು: “ಇದು ನನ್ನ ಪರಿಪಾಲಕನ (ಅಲ್ಲಾಹನ) ಔದಾರ್ಯದಲ್ಲಿ ಸೇರಿದ್ದಾಗಿದೆ. ನಾನು ಕೃತಜ್ಞನಾಗುತ್ತೇನೋ ಅಥವಾ ಕೃತಘ್ನನಾಗುತ್ತೇನೋ ಎಂದು ಪರೀಕ್ಷಿಸುವುದಕ್ಕಾಗಿ. ಯಾರು ಕೃತಜ್ಞನಾಗುತ್ತಾನೋ—ಅವನು ಕೃತಜ್ಞನಾಗುವುದು ಸ್ವತಃ ಅವನ ಒಳಿತಿಗೇ ಆಗಿದೆ. ಯಾರಾದರೂ ಕೃತಘ್ನನಾಗುವುದಾದರೆ—ನಿಶ್ಚಯವಾಗಿಯೂ ನನ್ನ ಪರಿಪಾಲಕನು ನಿರಪೇಕ್ಷನು ಮತ್ತು ಪರಮ ಉದಾರಿಯಾಗಿದ್ದಾನೆ.” info
التفاسير:

external-link copy
41 : 27

قَالَ نَكِّرُوْا لَهَا عَرْشَهَا نَنْظُرْ اَتَهْتَدِیْۤ اَمْ تَكُوْنُ مِنَ الَّذِیْنَ لَا یَهْتَدُوْنَ ۟

ಸುಲೈಮಾನ್ ಹೇಳಿದರು: “ಅವಳ ಸಿಂಹಾಸನವನ್ನು (ಅವಳಿಗೆ ಗುರುತಿಸಲಾಗದಂತೆ) ವಿರೂಪಗೊಳಿಸಿರಿ. ಅವಳು ಸತ್ಯವನ್ನು ಕಂಡುಕೊಳ್ಳುತ್ತಾಳೋ ಅಥವಾ ಸತ್ಯವನ್ನು ಕಂಡುಕೊಳ್ಳಲು ಸಾಧ್ಯವಾಗದವರಲ್ಲಿ ಸೇರುತ್ತಾಳೋ ಎಂದು ನೋಡೋಣ.” info
التفاسير:

external-link copy
42 : 27

فَلَمَّا جَآءَتْ قِیْلَ اَهٰكَذَا عَرْشُكِ ؕ— قَالَتْ كَاَنَّهٗ هُوَ ۚ— وَاُوْتِیْنَا الْعِلْمَ مِنْ قَبْلِهَا وَكُنَّا مُسْلِمِیْنَ ۟

ನಂತರ ಅವಳು ಬಂದಾಗ ಕೇಳಲಾಯಿತು: “ನಿಮ್ಮ ಸಿಂಹಾಸನ ಇದೇ ರೀತಿಯಿದೆಯೇ?” ಅವಳು ಹೇಳಿದಳು: “ಇದು ಅದೇ ಆಗಿರುವಂತೆ ತೋರುತ್ತಿದೆ.” ನಮಗೆ ಇದಕ್ಕಿಂತ ಮೊದಲೇ ಜ್ಞಾನ ನೀಡಲಾಗಿದೆ ಮತ್ತು ನಾವು ಮುಸಲ್ಮಾನರಾಗಿದ್ದೇವೆ. info
التفاسير:

external-link copy
43 : 27

وَصَدَّهَا مَا كَانَتْ تَّعْبُدُ مِنْ دُوْنِ اللّٰهِ ؕ— اِنَّهَا كَانَتْ مِنْ قَوْمٍ كٰفِرِیْنَ ۟

ಅವಳು ಅಲ್ಲಾಹನನ್ನು ಬಿಟ್ಟು ಯಾರನ್ನು ಆರಾಧಿಸುತ್ತಿದ್ದಳೋ ಆ ದೇವರುಗಳು (ಅಲ್ಲಾಹನ ಆರಾಧನೆ ಮಾಡದಂತೆ) ಅವಳನ್ನು ತಡೆದಿದ್ದರು. ನಿಶ್ಚಯವಾಗಿಯೂ ಅವಳು ಸತ್ಯನಿಷೇಧಿಗಳಾದ ಜನರಲ್ಲಿ ಸೇರಿದ್ದಳು. info
التفاسير:

external-link copy
44 : 27

قِیْلَ لَهَا ادْخُلِی الصَّرْحَ ۚ— فَلَمَّا رَاَتْهُ حَسِبَتْهُ لُجَّةً وَّكَشَفَتْ عَنْ سَاقَیْهَا ؕ— قَالَ اِنَّهٗ صَرْحٌ مُّمَرَّدٌ مِّنْ قَوَارِیْرَ ؕ۬— قَالَتْ رَبِّ اِنِّیْ ظَلَمْتُ نَفْسِیْ وَاَسْلَمْتُ مَعَ سُلَیْمٰنَ لِلّٰهِ رَبِّ الْعٰلَمِیْنَ ۟۠

ಅವಳೊಡನೆ ಹೇಳಲಾಯಿತು: “ಅರಮನೆಯನ್ನು ಪ್ರವೇಶಿಸಿರಿ.” ಅವಳು ಅದನ್ನು ನೋಡಿದಾಗ ಅದೊಂದು ಕೊಳವಾಗಿರಬೇಕೆಂದು ಭಾವಿಸಿ ತನ್ನ ಕಣಕಾಲುಗಳಿಂದ ಬಟ್ಟೆಯನ್ನು ಎತ್ತಿದಳು. ಸುಲೈಮಾನ್ ಹೇಳಿದರು: “ಇದು ಸ್ಫಟಿಕವನ್ನು ಹಾಸಿ ಹೊಳೆಯುವಂತೆ ಮಾಡಿದ ಅರಮನೆಯಾಗಿದೆ.” ಅವಳು ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಸ್ವತಃ ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ನಾನು ಸುಲೈಮಾನರೊಂದಿಗೆ ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಶರಣಾಗಿದ್ದೇನೆ.” info
التفاسير: