ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

external-link copy
165 : 2

وَمِنَ النَّاسِ مَنْ یَّتَّخِذُ مِنْ دُوْنِ اللّٰهِ اَنْدَادًا یُّحِبُّوْنَهُمْ كَحُبِّ اللّٰهِ ؕ— وَالَّذِیْنَ اٰمَنُوْۤا اَشَدُّ حُبًّا لِّلّٰهِ ؕ— وَلَوْ یَرَی الَّذِیْنَ ظَلَمُوْۤا اِذْ یَرَوْنَ الْعَذَابَ ۙ— اَنَّ الْقُوَّةَ لِلّٰهِ جَمِیْعًا ۙ— وَّاَنَّ اللّٰهَ شَدِیْدُ الْعَذَابِ ۟

ಅಲ್ಲಾಹನಿಗೆ ಇತರರನ್ನು ಸರಿಸಾಟಿಯಾಗಿ ಮಾಡುವ ಕೆಲವರಿದ್ದಾರೆ. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಅವರನ್ನೂ ಪ್ರೀತಿಸುತ್ತಾರೆ. ಆದರೆ ಸತ್ಯವಿಶ್ವಾಸಿಗಳು ಅಲ್ಲಾಹನನ್ನು (ಎಲ್ಲಕ್ಕಿಂತಲೂ) ಗಾಢವಾಗಿ ಪ್ರೀತಿಸುತ್ತಾರೆ.[1] ಅಕ್ರಮಿಗಳು (ಅಲ್ಲಾಹನ) ಶಿಕ್ಷೆಯನ್ನು ನೇರವಾಗಿ ನೋಡುವಾಗ, ಶಕ್ತಿ-ಸಾಮರ್ಥ್ಯವಿರುವುದು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರ; ಮತ್ತು ಅಲ್ಲಾಹು ಅತಿಕಠೋರವಾಗಿ ಶಿಕ್ಷಿಸುತ್ತಾನೆಂದು ತಿಳಿಯುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)! info

[1] ಮಕ್ಕಾದ ಬಹುದೇವ ವಿಶ್ವಾಸಿಗಳು ಅಲ್ಲಾಹನಿಗೆ ಸಹಭಾಗಿಗಳನ್ನು ಕಲ್ಪಿಸಿಕೊಂಡು ಅವರನ್ನು ಆರಾಧಿಸುತ್ತಿದ್ದರು. ಅಲ್ಲಾಹನನ್ನು ಪ್ರೀತಿಸುವಂತೆಯೇ ಅವರು ಆ ದೇವರುಗಳನ್ನು ಕೂಡ ಪ್ರೀತಿಸುತ್ತಿದ್ದರು. ಈ ಸನ್ನಿವೇಶವು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಾಲಕ್ಕೆ ಮಾತ್ರ ಸೀಮಿತವಲ್ಲ. ಆಧುನಿಕ ಕಾಲದಲ್ಲೂ ಇದನ್ನು ಕಾಣಬಹುದಾಗಿದೆ. ತಮ್ಮನ್ನು ಮುಸ್ಲಿಮರೆಂದು ಕರೆಯುವವರಲ್ಲೂ ಈ ರೋಗವು ಕಾಣಿಸಿಕೊಂಡಿದೆ. ಅವರು ಅಲ್ಲಾಹನನ್ನು ಬಿಟ್ಟು ಮಹಾಪುರುಷರು ಮತ್ತು ಅವರ ಸಮಾಧಿಗಳನ್ನು ಆರಾಧಿಸುತ್ತಾರೆ. ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಎಂದು ಹೇಳಿದರೆ ಮಕ್ಕಾದ ಬಹುದೇವ ವಿಶ್ವಾಸಿಗಳಂತೆ ಇವರಿಗೂ ಕೂಡ ಕೋಪ ಬರುತ್ತದೆ.

التفاسير: