ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߌߣߊߘߌߞߊ߲ ߘߟߊߡߌߘߊ - ߤ߭ߊߡߑߗ߭ߊ߫ ߓߎߕߎߙ ߓߟߏ߫

ߞߐߜߍ ߝߙߍߕߍ:close

external-link copy
21 : 10

وَاِذَاۤ اَذَقْنَا النَّاسَ رَحْمَةً مِّنْ بَعْدِ ضَرَّآءَ مَسَّتْهُمْ اِذَا لَهُمْ مَّكْرٌ فِیْۤ اٰیَاتِنَا ؕ— قُلِ اللّٰهُ اَسْرَعُ مَكْرًا ؕ— اِنَّ رُسُلَنَا یَكْتُبُوْنَ مَا تَمْكُرُوْنَ ۟

ಜನರಿಗೆ ಕಷ್ಟ ಬಂದ ಬಳಿಕ ನಾವು ಅವರಿಗೆ ನಮ್ಮ ದಯೆಯ ರುಚಿಯನ್ನು ತೋರಿಸಿದರೆ, ಅಗೋ ಅವರು ನಮ್ಮ ವಚನಗಳ ವಿರುದ್ಧ ಪಿತೂರಿ ಮಾಡುತ್ತಾರೆ. ಹೇಳಿರಿ: “ಅಲ್ಲಾಹು ನಿಮಗಿಂತಲೂ ವೇಗವಾಗಿ ತಂತ್ರಗಾರಿಕೆ ಮಾಡುತ್ತಾನೆ. ನಿಶ್ಚಯವಾಗಿಯೂ ನೀವು ಮಾಡುವ ಪಿತೂರಿಗಳನ್ನು ನಮ್ಮ ದೇವದೂತರು ದಾಖಲಿಸುತ್ತಿದ್ದಾರೆ.” info
التفاسير:

external-link copy
22 : 10

هُوَ الَّذِیْ یُسَیِّرُكُمْ فِی الْبَرِّ وَالْبَحْرِ ؕ— حَتّٰۤی اِذَا كُنْتُمْ فِی الْفُلْكِ ۚ— وَجَرَیْنَ بِهِمْ بِرِیْحٍ طَیِّبَةٍ وَّفَرِحُوْا بِهَا جَآءَتْهَا رِیْحٌ عَاصِفٌ وَّجَآءَهُمُ الْمَوْجُ مِنْ كُلِّ مَكَانٍ وَّظَنُّوْۤا اَنَّهُمْ اُحِیْطَ بِهِمْ ۙ— دَعَوُا اللّٰهَ مُخْلِصِیْنَ لَهُ الدِّیْنَ ۚ۬— لَىِٕنْ اَنْجَیْتَنَا مِنْ هٰذِهٖ لَنَكُوْنَنَّ مِنَ الشّٰكِرِیْنَ ۟

ನಿಮ್ಮನ್ನು ನೆಲದಲ್ಲಿ ಮತ್ತು ಕಡಲಲ್ಲಿ ಸಂಚರಿಸುವಂತೆ ಮಾಡುವವನು ಅವನೇ. ಎಲ್ಲಿಯವರೆಗೆಂದರೆ, ನೀವೊಂದು ನಾವೆಯಲ್ಲಿದ್ದು, ಉತ್ತಮ ಹವೆಯಿಂದಾಗಿ ಅವು ಯಾತ್ರಿಕರನ್ನು ಹೊತ್ತು ಚಲಿಸುತ್ತಿರುವಾಗ ಮತ್ತು ನೀವು ತುಂಬಾ ಸಂಭ್ರಮದಲ್ಲಿರುವಾಗ, ಇದ್ದಕ್ಕಿದ್ದಂತೆ ಒಂದು ಭೀಕರ ಬಿರುಗಾಳಿಯು ಬೀಸಿ, ಎಲ್ಲಾ ದಿಕ್ಕುಗಳಿಂದಲೂ ಹೆದ್ದೆರೆಗಳು ಎದ್ದು, ಸಾವು ತಮ್ಮನ್ನು ಆವರಿಸಿಕೊಂಡಿದೆಯೆಂದು ಅವರಿಗೆ ಖಾತ್ರಿಯಾದಾಗ, ಅವರು ಸಂಪೂರ್ಣ ನಿಷ್ಕಳಂಕತೆಯಿಂದ ಅಲ್ಲಾಹನನ್ನು ಕರೆದು ಪ್ರಾರ್ಥಿಸುತ್ತಾರೆ: “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಿಶ್ಚಯವಾಗಿಯೂ ನಾವು ನಿನಗೆ ಆಭಾರಿಯಾಗಿರುತ್ತೇವೆ.” info
التفاسير:

external-link copy
23 : 10

فَلَمَّاۤ اَنْجٰىهُمْ اِذَا هُمْ یَبْغُوْنَ فِی الْاَرْضِ بِغَیْرِ الْحَقِّ ؕ— یٰۤاَیُّهَا النَّاسُ اِنَّمَا بَغْیُكُمْ عَلٰۤی اَنْفُسِكُمْ ۙ— مَّتَاعَ الْحَیٰوةِ الدُّنْیَا ؗ— ثُمَّ اِلَیْنَا مَرْجِعُكُمْ فَنُنَبِّئُكُمْ بِمَا كُنْتُمْ تَعْمَلُوْنَ ۟

ಆದರೆ ಅವನು ಅವರನ್ನು ಪಾರು ಮಾಡಿದಾಗ, ಅಗೋ ಅವರು ಅನ್ಯಾಯವಾಗಿ ಭೂಮಿಯಲ್ಲಿ ಅತಿರೇಕವೆಸಗುತ್ತಾರೆ. ಓ ಮನುಷ್ಯರೇ! ನೀವು ಮಾಡುವ ಅತಿರೇಕಗಳ ದುಷ್ಫಲವನ್ನು ನೀವೇ ಉಣ್ಣುತ್ತೀರಿ. ಅವು ಇಹಲೋಕದ ಕೆಲವು ಆನಂದಗಳು ಮಾತ್ರ. ನಂತರ ನಿಮ್ಮನ್ನು ನಮ್ಮ ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡಿದ ಕರ್ಮಗಳನ್ನು ನಾವು ನಿಮಗೆ ತಿಳಿಸಿಕೊಡುವೆವು. info
التفاسير:

external-link copy
24 : 10

اِنَّمَا مَثَلُ الْحَیٰوةِ الدُّنْیَا كَمَآءٍ اَنْزَلْنٰهُ مِنَ السَّمَآءِ فَاخْتَلَطَ بِهٖ نَبَاتُ الْاَرْضِ مِمَّا یَاْكُلُ النَّاسُ وَالْاَنْعَامُ ؕ— حَتّٰۤی اِذَاۤ اَخَذَتِ الْاَرْضُ زُخْرُفَهَا وَازَّیَّنَتْ وَظَنَّ اَهْلُهَاۤ اَنَّهُمْ قٰدِرُوْنَ عَلَیْهَاۤ ۙ— اَتٰىهَاۤ اَمْرُنَا لَیْلًا اَوْ نَهَارًا فَجَعَلْنٰهَا حَصِیْدًا كَاَنْ لَّمْ تَغْنَ بِالْاَمْسِ ؕ— كَذٰلِكَ نُفَصِّلُ الْاٰیٰتِ لِقَوْمٍ یَّتَفَكَّرُوْنَ ۟

ಇಹಲೋಕದ ಉದಾಹರಣೆಯು ಒಂದು ಮಳೆಯಂತೆ. ನಾವು ಅದನ್ನು ಆಕಾಶದಿಂದ ಇಳಿಸಿದೆವು. ಆಗ ಅದರೊಂದಿಗೆ ಭೂಮಿಯಲ್ಲಿ ಮನುಷ್ಯರು ಮತ್ತು ಜಾನುವಾರುಗಳು ತಿನ್ನುವ ಸಸ್ಯಲತಾದಿಗಳು ಬೆರೆತು ಬೆಳೆದವು. ಎಲ್ಲಿಯವರೆಗೆಂದರೆ, ಭೂಮಿ ತನ್ನ ಶೃಂಗಾರವನ್ನು ಧರಿಸಿ ಅಲಂಕಾರದಿಂದ ಕಂಗೊಳಿಸಿದಾಗ ಮತ್ತು ಭೂಮಿಯನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಿದೆಯೆಂದು ಭೂನಿವಾಸಿಗಳು ಭಾವಿಸಿದಾಗ, ಒಂದು ರಾತ್ರಿಯಲ್ಲಿ ಅಥವಾ ಹಗಲಲ್ಲಿ ನಮ್ಮ ಆಜ್ಞೆಯು ಅದಕ್ಕೆ ಬಂದುಬಿಟ್ಟಿತು. ಆಗ ನಿನ್ನೆ ಅಲ್ಲಿ ಏನೂ ಇರಲಿಲ್ಲವೋ ಎಂಬಂತೆ ನಾವು ಅವುಗಳನ್ನು ಸಂಪೂರ್ಣ ನಾಶ ಮಾಡಿದೆವು. ಆಲೋಚಿಸುವ ಜನರಿಗೆ ನಾವು ಈ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಡುವೆವು. info
التفاسير:

external-link copy
25 : 10

وَاللّٰهُ یَدْعُوْۤا اِلٰی دَارِ السَّلٰمِ ؕ— وَیَهْدِیْ مَنْ یَّشَآءُ اِلٰی صِرَاطٍ مُّسْتَقِیْمٍ ۟

ಅಲ್ಲಾಹು ಶಾಂತಿಯ ಭವನಕ್ಕೆ ಕರೆಯುತ್ತಿದ್ದಾನೆ. ಅವನು ಇಚ್ಛಿಸುವವರಿಗೆ ಅವನು ನೇರ ಮಾರ್ಗವನ್ನು ತೋರಿಸುತ್ತಾನೆ. info
التفاسير: