ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
34 : 8

وَمَا لَهُمْ اَلَّا یُعَذِّبَهُمُ اللّٰهُ وَهُمْ یَصُدُّوْنَ عَنِ الْمَسْجِدِ الْحَرَامِ وَمَا كَانُوْۤا اَوْلِیَآءَهٗ ؕ— اِنْ اَوْلِیَآؤُهٗۤ اِلَّا الْمُتَّقُوْنَ وَلٰكِنَّ اَكْثَرَهُمْ لَا یَعْلَمُوْنَ ۟

ಅಲ್ಲಾಹನು ಅವರಿಗೆ ಶಿಕ್ಷಿಸದಿರಲು ಅವರಲ್ಲಿ ಯಾವ ಅರ್ಹತೆಯಿದೆ? ವಸ್ತುತಃ ಅವರು ಮಸ್ಜಿದುಲ್ ಹರಾಮ್‌ನಿಂದ ಜನರನ್ನು ತಡೆಯುತ್ತಾರೆ. ಅವರು ಅದರ ಮೇಲ್ವಿಚಾರಕರೂ ಅಲ್ಲ. ಭಯಭಕ್ತಿಯುಳ್ಳವರ ಹೊರತು ಇನ್ನಾರೂ ಅದರ ಮೇಲ್ವಿಚಾರಕರಾಗಲಾರರು. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ. info
التفاسير:

external-link copy
35 : 8

وَمَا كَانَ صَلَاتُهُمْ عِنْدَ الْبَیْتِ اِلَّا مُكَآءً وَّتَصْدِیَةً ؕ— فَذُوْقُوا الْعَذَابَ بِمَا كُنْتُمْ تَكْفُرُوْنَ ۟

ಮತ್ತು ಕಾಬಾದ ಬಳಿ ಅವರ ಪ್ರಾರ್ಥನೆಯು ಶಿಳ್ಳೆ ಹೊಡೆಯುವುದು ಮತ್ತು ಚಪ್ಪಾಳೆ ತಟ್ಟುವುದರ ಹೊರತು ಇನ್ನೇನೂ ಇಲ್ಲ. ಆದ್ದರಿಂದ ನೀವು ನಿಮ್ಮ ಸತ್ಯನಿಷೇಧದ ನಿಮಿತ್ತ ಈ ಶಿಕ್ಷೆಯನ್ನು ಸವಿಯಿರಿ. info
التفاسير:

external-link copy
36 : 8

اِنَّ الَّذِیْنَ كَفَرُوْا یُنْفِقُوْنَ اَمْوَالَهُمْ لِیَصُدُّوْا عَنْ سَبِیْلِ اللّٰهِ ؕ— فَسَیُنْفِقُوْنَهَا ثُمَّ تَكُوْنُ عَلَیْهِمْ حَسْرَةً ثُمَّ یُغْلَبُوْنَ ؕ۬— وَالَّذِیْنَ كَفَرُوْۤا اِلٰی جَهَنَّمَ یُحْشَرُوْنَ ۟ۙ

ನಿಸ್ಸಂಶಯವಾಗಿಯು ಸತ್ಯನಿಷೇಧಿಗಳು ತಮ್ಮ ಸಂಪತ್ತನ್ನು ಅಲ್ಲಾಹನ ಮಾರ್ಗದಿಂದ ತಡೆಯುವುದಕ್ಕಾಗಿ ಖರ್ಚು ಮಾಡುತ್ತಾರೆ. ಹಾಗೆಯೇ ಅವರು ತಮ್ಮ ಸಂಪತ್ತುಗಳನ್ನು ಖರ್ಚು ಮಾಡುತ್ತಲಿರುವರು. ಅನಂತರ ಆ ಸಂಪತ್ತು ಅವರ ಪಾಲಿಗೆ ಖೇದದ ವಸ್ತುವಾಗಿ ಪರಿಣಮಿಸಲಿರುವುದು. ತದನಂತರ ಅವರು ಪರಾಜಿತರಾಗುವರು ಮತ್ತು ಸತ್ಯನಿಷೇಧಿಗಳನ್ನು ನರಕದೆಡೆಗೇ ಒಟ್ಟುಗೂಡಿಸಲಾಗುವುದು. info
التفاسير:

external-link copy
37 : 8

لِیَمِیْزَ اللّٰهُ الْخَبِیْثَ مِنَ الطَّیِّبِ وَیَجْعَلَ الْخَبِیْثَ بَعْضَهٗ عَلٰی بَعْضٍ فَیَرْكُمَهٗ جَمِیْعًا فَیَجْعَلَهٗ فِیْ جَهَنَّمَ ؕ— اُولٰٓىِٕكَ هُمُ الْخٰسِرُوْنَ ۟۠

ಇದು ಅಲ್ಲಾಹನು ಅಶುದ್ಧತೆಯಿಂದ ಶುದ್ಧತೆಯನ್ನು ಬೇರ್ಪಡಿಸಲು, ಅಶುದ್ಧತೆಗಳನ್ನು ಪರಸ್ಪರ ಒಟ್ಟ್ಟಾಗಿಸಲು ಮತ್ತು ಅವರೆಲ್ಲರನ್ನೂ ಒಟ್ಟುಗೂಡಿಸಿ ಅನಂತರ ನರಕದಲ್ಲಿ ಹಾಕಲೆಂದಾಗಿದೆ. ಅವರೇ ನಷ್ಟ ಹೊಂದುವವರಾಗಿದ್ದಾರೆ. info
التفاسير:

external-link copy
38 : 8

قُلْ لِّلَّذِیْنَ كَفَرُوْۤا اِنْ یَّنْتَهُوْا یُغْفَرْ لَهُمْ مَّا قَدْ سَلَفَ ۚ— وَاِنْ یَّعُوْدُوْا فَقَدْ مَضَتْ سُنَّتُ الْاَوَّلِیْنَ ۟

ಅವರು ಸತ್ಯನಿಷೇಧದಿಂದ ಹಿಂದೆ ಸರಿಯುವುದಾದರೆ ಅವರು ಮುಂಚೆ ಮಾಡಿರುವ ಪಾಪಗಳನ್ನು ಅವರಿಗೆ ಕ್ಷಮಿಸಿ ಬಿಡಲಾಗುವುದೆಂದು ನೀವು ಸತ್ಯನಿಷೇಧಿಗಳಿಗೆ ಹೇಳಿರಿ ಮತ್ತು ಅವರು ತಮ್ಮ ಅದೇ ಚಾಳಿಯನ್ನು ಮುಂದುವರಿಸಿದರೆ (ಸತ್ಯನಿಷೇಧಿ) ಪೂರ್ವಿಕರ ಪಾಲಿನ ಶಿಕ್ಷಾಕ್ರಮವು ಇವರ ಮೇಲೂ ಜಾರಿಯಾಗಿರುತ್ತದೆ. info
التفاسير:

external-link copy
39 : 8

وَقَاتِلُوْهُمْ حَتّٰی لَا تَكُوْنَ فِتْنَةٌ وَّیَكُوْنَ الدِّیْنُ كُلُّهٗ لِلّٰهِ ۚ— فَاِنِ انْتَهَوْا فَاِنَّ اللّٰهَ بِمَا یَعْمَلُوْنَ بَصِیْرٌ ۟

ಓ ಸತ್ಯವಿಶ್ವಾಸಿಗಳೇ ಕ್ಷೆÆÃಭೆಯು ಅಳಿಯುವ ತನಕ ಮತ್ತು ಧರ್ಮವು ಸಂಪೂರ್ಣವಾಗಿ ಅಲ್ಲಾಹನದೇ ಆಗುವ ತನಕ ನೀವು ಅವರೊಂದಿಗೆ ಯುದ್ಧ ಮಾಡಿರಿ. ಇನ್ನು ಅವರು ಸ್ಥಗಿತಗೊಳಿಸುವುದಾದರೆ ಅವರ ಕರ್ಮಗಳನ್ನು ಅಲ್ಲಾಹನು ಚೆನ್ನಾಗಿ ನೋಡುತ್ತಿದ್ದಾನೆ. info
التفاسير:

external-link copy
40 : 8

وَاِنْ تَوَلَّوْا فَاعْلَمُوْۤا اَنَّ اللّٰهَ مَوْلٰىكُمْ ؕ— نِعْمَ الْمَوْلٰی وَنِعْمَ النَّصِیْرُ ۟

ಮತ್ತು ಇನ್ನು ಅವರು ವಿಮುಖತೆ ತೋರುವುದಾದರೆ ಅಲ್ಲಾಹನು ನಿಮ್ಮ ಕಾರ್ಯಸಾಧಕನೆಂಬುದನ್ನು ಖಚಿತವಾಗಿ ಅರಿತುಕೊಳ್ಳಿರಿ. ಅವನು ಉತ್ತಮ ಕಾರ್ಯಸಾಧಕನು ಮತ್ತು ಉತ್ತಮ ಸಹಾಯಕನಾಗಿದ್ದಾನೆ. info
التفاسير: