ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
41 : 5

یٰۤاَیُّهَا الرَّسُوْلُ لَا یَحْزُنْكَ الَّذِیْنَ یُسَارِعُوْنَ فِی الْكُفْرِ مِنَ الَّذِیْنَ قَالُوْۤا اٰمَنَّا بِاَفْوَاهِهِمْ وَلَمْ تُؤْمِنْ قُلُوْبُهُمْ ۛۚ— وَمِنَ الَّذِیْنَ هَادُوْا ۛۚ— سَمّٰعُوْنَ لِلْكَذِبِ سَمّٰعُوْنَ لِقَوْمٍ اٰخَرِیْنَ ۙ— لَمْ یَاْتُوْكَ ؕ— یُحَرِّفُوْنَ الْكَلِمَ مِنْ بَعْدِ مَوَاضِعِهٖ ۚ— یَقُوْلُوْنَ اِنْ اُوْتِیْتُمْ هٰذَا فَخُذُوْهُ وَاِنْ لَّمْ تُؤْتَوْهُ فَاحْذَرُوْا ؕ— وَمَنْ یُّرِدِ اللّٰهُ فِتْنَتَهٗ فَلَنْ تَمْلِكَ لَهٗ مِنَ اللّٰهِ شَیْـًٔا ؕ— اُولٰٓىِٕكَ الَّذِیْنَ لَمْ یُرِدِ اللّٰهُ اَنْ یُّطَهِّرَ قُلُوْبَهُمْ ؕ— لَهُمْ فِی الدُّنْیَا خِزْیٌ ۙ— وَّلَهُمْ فِی الْاٰخِرَةِ عَذَابٌ عَظِیْمٌ ۟

ಓ ಸಂದೇಶವಾಹಕರೇ, ನಾವು ಸತ್ಯವಿಶ್ವಾಸವಿಟ್ಟೆವು ಎಂದು ಬಾಯಿ ಮಾತಿನಲ್ಲಿ ಹೇಳುವ ಹಾಗೂ ಹೃದಯದಲ್ಲಿ ವಿಶ್ವಾಸವಿಲ್ಲದ ಕಪಟವಿಶ್ವಾಸಿಗಳ ಪೈಕಿ ಮತ್ತು ಯಹೂದರ ಪೈಕಿ ಸತ್ಯನಿಷೇಧದೆಡೆಗೆ ಧಾವಿಸುತ್ತಿರುವವರ ಅವಸ್ಥೆಯು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ. ಕೆಲವರು ಹೀಗಿರುತ್ತಾರೆ ಅವರು ಸುಳ್ಳು ವದಂತಿಗಳನ್ನು ಆಲಿಸುವವರೂ, ಮತ್ತು ನಿಮ್ಮ ಬಳಿಗೆ ಇದುವರೆಗೂ ಬರದಂತಹ ಜನರ ಗೂಢಾಚಾರರೂ ಆಗಿದ್ದಾರೆ. ಅವರು ಗ್ರಂಥ ವಾಕ್ಯಗಳನ್ನು ಅವುಗಳ ನೈಜ ಸ್ಥಾನದಿಂದ ಬದಲಿಸುತ್ತಾರೆ. ಮತ್ತು ಹೇಳುತ್ತಾರೆ (ಪೈಗಂಬರರ ಬಳಿ) ಇದೇ ವಿಧಿಯು ನಿಮಗೆ ನೀಡಲಾಗುವುದಾದರೆ ನೀವು ಅದನ್ನು ಸ್ವೀಕರಿಸಿರಿ. ಇದೇ ವಿಧಿಯು ನೀಡಲಾಗುವುದಿಲ್ಲವೆಂದಾದರೆ ನೀವು ಎಚ್ಚರ ವಹಿಸಿರಿ. ಅಲ್ಲಾಹನು ಯಾರನ್ನಾದರೂ ಗೊಂದಲಗೊಳಿಸಲು ಇಚ್ಚಿಸಿದರೆ ಅವನಿಗೆ ಅಲ್ಲಾಹನಿಂದ ಏನನ್ನೂ ತಡೆಯಲೂ ನಿಮಗೆ ಸಾಧ್ಯವಿಲ್ಲ. ಅಲ್ಲಾಹನು ಅವರ ಹೃದಯಗಳನ್ನು ಶುದ್ಧೀಕರಿಸಲು ಇಚ್ಛಿಸುವುದಿಲ್ಲ. ಅವರಿಗೆ ಇಹಲೋಕದಲ್ಲಿ ಅಪಮಾನವಿದೆ ಮತ್ತು ಪರಲೋಕದಲ್ಲೂ ಕಠಿಣ ಶಿಕ್ಷೆಯಿದೆ. info
التفاسير: