ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
110 : 5

اِذْ قَالَ اللّٰهُ یٰعِیْسَی ابْنَ مَرْیَمَ اذْكُرْ نِعْمَتِیْ عَلَیْكَ وَعَلٰی وَالِدَتِكَ ۘ— اِذْ اَیَّدْتُّكَ بِرُوْحِ الْقُدُسِ ۫— تُكَلِّمُ النَّاسَ فِی الْمَهْدِ وَكَهْلًا ۚ— وَاِذْ عَلَّمْتُكَ الْكِتٰبَ وَالْحِكْمَةَ وَالتَّوْرٰىةَ وَالْاِنْجِیْلَ ۚ— وَاِذْ تَخْلُقُ مِنَ الطِّیْنِ كَهَیْـَٔةِ الطَّیْرِ بِاِذْنِیْ فَتَنْفُخُ فِیْهَا فَتَكُوْنُ طَیْرًا بِاِذْنِیْ وَتُبْرِئُ الْاَكْمَهَ وَالْاَبْرَصَ بِاِذْنِیْ ۚ— وَاِذْ تُخْرِجُ الْمَوْتٰی بِاِذْنِیْ ۚ— وَاِذْ كَفَفْتُ بَنِیْۤ اِسْرَآءِیْلَ عَنْكَ اِذْ جِئْتَهُمْ بِالْبَیِّنٰتِ فَقَالَ الَّذِیْنَ كَفَرُوْا مِنْهُمْ اِنْ هٰذَاۤ اِلَّا سِحْرٌ مُّبِیْنٌ ۟

ಅಲ್ಲಾಹನು (ಈಸಾರೊಂದಿಗೆ) ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಓ ಮರ್ಯಮರ ಪುತ್ರನಾದ ಈಸಾ! ನಿಮ್ಮ ಮೇಲೂ, ನಿಮ್ಮ ತಾಯಿಯ ಮೇಲೂ ಮಾಡಲಾಗಿರುವ ನನ್ನ ಅನುಗ್ರಹಗಳನ್ನು ಸ್ಮರಿಸಿರಿ. ನಾನು ನಿಮಗೆ ಪವಿತ್ರಾತ್ಮನ ಮೂಲಕ ಬೆಂಬಲ ನೀಡಿದೆ. ನೀವು ತೊಟ್ಟಿಲಿನಲ್ಲಿರುವಾಗ ಮತ್ತು ಹಿರಿಯ ವಯಸ್ಕನಾಗಿರುವಾಗ ಜನರೊಂದಿಗೆ ಮಾತನಾಡುತ್ತಿದ್ದೀರಿ ಮತ್ತು ನಿಮಗೆ ನಾನು ಗ್ರಂಥ ಹಾಗೂ ಸುಜ್ಞಾನವನ್ನು, ತೌರಾತ್ ಮತ್ತು ಇಂಜೀಲ್‌ನ ಶಿಕ್ಷಣವನ್ನು ಕಲಿಸಿಕೊಟ್ಟಿದ್ದೆ. ಮತ್ತು ನೀವು ನನ್ನ ಅಪ್ಪಣೆಯಿಂದ ಮಣ್ಣಿನಿಂದ ಪಕ್ಷಿಯ ರೂಪವನ್ನು ಮಾಡಿ, ನಂತರ ನೀವು ಅದರಲ್ಲಿ ಊದುವಾಗ ಅದು ನನ್ನ ಅಪ್ಪಣೆಯಿಂದ ಪಕ್ಷಿಯಾಗಿ ಮಾರ್ಪಡುತ್ತಿತ್ತು. ಮತ್ತು ನೀವು ನನ್ನ ಅಪ್ಪಣೆಯಿಂದ ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುತ್ತಿದ್ದೀರಿ ಮತ್ತು ನೀವು ನನ್ನ ಅಪ್ಪಣೆಯಿಂದ ಮೃತಪಟ್ಟವರನ್ನು ಎಬ್ಬಿಸುತ್ತಿದ್ದೀರಿ ಮತ್ತು ನೀವು ಇಸ್ರಾಯೀಲ್ ಸಂತತಿಗಳೆಡೆಗೆ ಸುವ್ಯಕ್ತ ದುಷ್ಟಾಂತಗಳೊAದಿಗೆ ಬಂದಾಗ ಅವರ ಪೈಕಿಯ ಸತ್ಯನಿಷೇಧಿಗಳು 'ಇದು ಸ್ಪಷ್ಟ ಜಾದುವಿನ ಹೊರತು ಇನ್ನೇನೂ ಅಲ್ಲ ಎಂದು ಹೇಳಿದಾಗ ನಾವು ನಿಮ್ಮನ್ನು ಅವರ ಕೇಡಿನಿಂದ ರಕ್ಷಿಸಿದೆವು.' info
التفاسير: