ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
10 : 48

اِنَّ الَّذِیْنَ یُبَایِعُوْنَكَ اِنَّمَا یُبَایِعُوْنَ اللّٰهَ ؕ— یَدُ اللّٰهِ فَوْقَ اَیْدِیْهِمْ ۚ— فَمَنْ نَّكَثَ فَاِنَّمَا یَنْكُثُ عَلٰی نَفْسِهٖ ۚ— وَمَنْ اَوْفٰی بِمَا عٰهَدَ عَلَیْهُ اللّٰهَ فَسَیُؤْتِیْهِ اَجْرًا عَظِیْمًا ۟۠

ಖಂಡಿತವಾಗಿಯು ನಿಮ್ಮೊಂದಿಗೆ ವಿಧೇಯತೆಯ ಪ್ರಮಾಣ ಮಾಡುವವರು ನಿಜವಾಗಿಯು ಅಲ್ಲಾಹನೊಂದಿಗೆ ವಿಧೇಯತೆಯ ಪ್ರಮಾಣ ಮಾಡುತ್ತಿದ್ದಾರೆ. ಅವರ ಹಸ್ತಗಳ ಮೇಲೆ ಅಲ್ಲಾಹನ ಹಸ್ತವಿದೆ. ಇನ್ನು ಯಾರು ಕರಾರನ್ನು ಉಲ್ಲಂಘಿಸುತ್ತಾನೋ ಅದರ ದುಷ್ಪರಿಣಾಮವು ಸ್ವತಃ ಅವನ ಮೇಲೆಯೇ ಇರುವುದು ಮತ್ತು ಯಾರು ಅಲ್ಲಾಹನೊಂದಿಗೆ ಮಾಡಿದ ಕರಾರನ್ನು ಈಡೇರಿಸುತ್ತಾನೋ ಸದ್ಯದಲ್ಲೇ ಅವನು ಅವನಿಗೆ ಮಹಾ ಪ್ರತಿಫಲವನ್ನು ಕರುಣಿಸುವನು. info
التفاسير:

external-link copy
11 : 48

سَیَقُوْلُ لَكَ الْمُخَلَّفُوْنَ مِنَ الْاَعْرَابِ شَغَلَتْنَاۤ اَمْوَالُنَا وَاَهْلُوْنَا فَاسْتَغْفِرْ لَنَا ۚ— یَقُوْلُوْنَ بِاَلْسِنَتِهِمْ مَّا لَیْسَ فِیْ قُلُوْبِهِمْ ؕ— قُلْ فَمَنْ یَّمْلِكُ لَكُمْ مِّنَ اللّٰهِ شَیْـًٔا اِنْ اَرَادَ بِكُمْ ضَرًّا اَوْ اَرَادَ بِكُمْ نَفْعًا ؕ— بَلْ كَانَ اللّٰهُ بِمَا تَعْمَلُوْنَ خَبِیْرًا ۟

ಗ್ರಾಮೀಣರ ಪೈಕಿ (ಹುದೈಬಿಯಾದ ಯಾತ್ರೆಯಿಂದ) ಹಿಂದುಳಿದು ಬಿಟ್ಟವರು ನಿಮ್ಮೊಡನೆ ಹೇಳುತ್ತಾರೆ; ನಮ್ಮ ಸೊತ್ತು ಸಂಪತ್ತು ಮತ್ತು ಸಂತಾನಗಳು ನಮ್ಮನ್ನು ಕಾರ್ಯ ನಿರಂತರನ್ನಾಗಿ ಮಾಡಿದ್ದವು. ಆದ್ದರಿಂದ ನೀವು ನಮಗಾಗಿ ಕ್ಷಮೆಯಾಚಿಸಿರಿ, ಇವರು ತಮ್ಮ ಹೃದಯಗಳಲ್ಲಿಲ್ಲದ್ದನ್ನು ತಮ್ಮ ನಾಲಗೆಗಳ ಮೂಲಕ ಹೇಳುತ್ತಿದ್ದಾರೆ. ನೀವು ಉತ್ತರಿಸಿರಿ; ಅಲ್ಲಾಹನು ನಿಮಗೆ ಹಾನಿಯನ್ನುಂಟು ಮಾಡಲು ಉದ್ದೇಶಿಸಿದರೆ ಅಥವ ನಿಮಗೆ ಯಾವುದಾದರೂ ಪ್ರಯೋಜನವನ್ನುಂಟು ಮಾಡಲು ಉದ್ದೇಶಿಸಿದರೆ ನಿಮ್ಮ ವಿಷಯದಲ್ಲಿ ಅಲ್ಲಾಹನ ತೀರ್ಮಾನವನ್ನು ತಡೆಯಲು ಸ್ವಲ್ಪವಾದರೂ ಅಧಿಕಾರವುಳ್ಳವರು ಯಾರಿದ್ದಾರೆ? ಇಲ್ಲ! ನೀವು ಮಾಡುತ್ತಿರುವುದರ ಕುರಿತು ಅಲ್ಲಾಹನು ಸೂಕ್ಷö್ಮಜ್ಞಾನಿಯಾಗಿದ್ದಾನೆ. info
التفاسير:

external-link copy
12 : 48

بَلْ ظَنَنْتُمْ اَنْ لَّنْ یَّنْقَلِبَ الرَّسُوْلُ وَالْمُؤْمِنُوْنَ اِلٰۤی اَهْلِیْهِمْ اَبَدًا وَّزُیِّنَ ذٰلِكَ فِیْ قُلُوْبِكُمْ وَظَنَنْتُمْ ظَنَّ السَّوْءِ ۖۚ— وَكُنْتُمْ قَوْمًا بُوْرًا ۟

ಖಂಡಿತವಾಗಿಯೂ ಸಂದೇಶವಾಹಕರು ಮತ್ತು ಸತ್ಯವಿಶ್ವಾಸಿಗಳು ತಮ್ಮ ಮನೆಯವರೆಡೆಗೆ ಮರಳಲಾರರೆಂದು ನೀವು ಭಾವಿಸಿದ್ದಿರಿ ಮತ್ತು ಇದೇ ಭಾವನೆಯು ನಿಮ್ಮ ಹೃದಯಗಳಲ್ಲಿ ಅಲಂಕೃತಗೊಳಿಸಲಾಗಿತ್ತು, ನೀವು ಕೆಟ್ಟ ಅನುಮಾನವನ್ನು ಹೊಂದಿದ್ದಿರಿ, ವಾಸ್ತವದಲ್ಲಿ ನೀವು ನಾಶವಾಗುವ ಜನಾಂಗವಾಗಿದ್ದೀರಿ. info
التفاسير:

external-link copy
13 : 48

وَمَنْ لَّمْ یُؤْمِنْ بِاللّٰهِ وَرَسُوْلِهٖ فَاِنَّاۤ اَعْتَدْنَا لِلْكٰفِرِیْنَ سَعِیْرًا ۟

ಅಲ್ಲಾಹನಲ್ಲೂ, ಅವನ ಸಂದೇಶವಾಹಕರಲ್ಲೂ ವಿಶ್ವಾಸವಿಡದ ಸತ್ಯನಿಷೇಧಿಗಳಿಗೆ ಖಂಡಿತ ನಾವು ಧಗಧಗಿಸುವ ನರಕಾಗ್ನಿಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
14 : 48

وَلِلّٰهِ مُلْكُ السَّمٰوٰتِ وَالْاَرْضِ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَكَانَ اللّٰهُ غَفُوْرًا رَّحِیْمًا ۟

ಆಕಾಶಗಳ, ಭೂಮಿಯ ಅಧಿಪತ್ಯವು ಅಲ್ಲಾಹನದ್ದಾಗಿದೆ, ಅವನು ತಾನಿಚ್ಛಿಸಿದವರನ್ನು ಕ್ಷಮಿಸುತ್ತಾನೆ ಮತ್ತು ತಾನಿಚ್ಛಿಸಿದವರನ್ನು ಶಿಕ್ಷಿಸುತ್ತಾನೆ ಮತ್ತು ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
15 : 48

سَیَقُوْلُ الْمُخَلَّفُوْنَ اِذَا انْطَلَقْتُمْ اِلٰی مَغَانِمَ لِتَاْخُذُوْهَا ذَرُوْنَا نَتَّبِعْكُمْ ۚ— یُرِیْدُوْنَ اَنْ یُّبَدِّلُوْا كَلٰمَ اللّٰهِ ؕ— قُلْ لَّنْ تَتَّبِعُوْنَا كَذٰلِكُمْ قَالَ اللّٰهُ مِنْ قَبْلُ ۚ— فَسَیَقُوْلُوْنَ بَلْ تَحْسُدُوْنَنَا ؕ— بَلْ كَانُوْا لَا یَفْقَهُوْنَ اِلَّا قَلِیْلًا ۟

ನೀವು (ಖೈಬರ್) ಯುದ್ಧಾರ್ಜಿತ ಸೊತ್ತುಗಳನ್ನು ಪಡೆಯಲೆಂದು ಹೋಗತೊಡಗಿದರೆ (ಹುದೈಬಿಯಾ ಯಾತ್ರೆಯಿಂದ) ಹಿಂದುಳಿದವರು ಹೇಳುವರು; “ನಮಗೂ ನಿಮ್ಮೊಂದಿಗೆ ಬರುವ ಅನುಮತಿಯನ್ನು ನೀಡಿರಿ” ಅವರು ಅಲ್ಲಾಹನ ವಚನವನ್ನು ಬದಲಾಯಿಸಿ ಬಿಡಲು ಇಚ್ಛಿಸಿದ್ದಾರೆ. ನೀವು ಹೇಳಿರಿ; ನೀವು ನಮ್ಮ ಹಿಂದೆ ಬರುವಂತಿಲ್ಲವೆAದು. “ಅಲ್ಲಾಹನು ಮೊದಲೇ ಹೇಳಿರುತ್ತಾನೆ, ಆಗ ಅವರು ಹೀಗೆ ಹೇಳುತ್ತಾರೆ; ನೀವು ನಮ್ಮೊಂದಿಗೆ ಅಸೂಯೆ ತೋರಿಸುತ್ತಿದ್ದೀರಿ, ವಾಸ್ತವ ವಿಚಾರವೇನೆಂದರೆ ಅವರು ಅತ್ಯಲ್ಪವೇ ಅರಿತುಕೊಳ್ಳುತ್ತಾರೆ. info
التفاسير: