ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
6 : 46

وَاِذَا حُشِرَ النَّاسُ كَانُوْا لَهُمْ اَعْدَآءً وَّكَانُوْا بِعِبَادَتِهِمْ كٰفِرِیْنَ ۟

ಜನರನ್ನು ಒಟ್ಟುಗೂಡಿಸಲಾಗುವಾಗ ಅವರು ಇವರ ಶತ್ರುಗಳಾಗಿಬಿಡುವರು ಮತ್ತು ಅವರು ಇವರ ಆರಾಧನೆಯನ್ನೇ ನಿರಾಕರಿಸಿಬಿಡುವರು. info
التفاسير:

external-link copy
7 : 46

وَاِذَا تُتْلٰی عَلَیْهِمْ اٰیٰتُنَا بَیِّنٰتٍ قَالَ الَّذِیْنَ كَفَرُوْا لِلْحَقِّ لَمَّا جَآءَهُمْ ۙ— هٰذَا سِحْرٌ مُّبِیْنٌ ۟ؕ

ಅವರಿಗೆ ನಮ್ಮ ಸುಸ್ಪಷ್ಟ ಸೂಕ್ತಿಗಳನ್ನು ಓದಿ ಹೇಳಲಾದಾಗ ತಮ್ಮ ಬಳಿಗೆ ಬಂದ ಸತ್ಯದ ಕುರಿತು ಸತ್ಯನಿಷೇಧಿಗಳು 'ಇದೊಂದು ಸುಸ್ಪಷ್ಟ ಮಾಟವಾಗಿದೆ' ಎಂದು ಹೇಳುತ್ತಾರೆ. info
التفاسير:

external-link copy
8 : 46

اَمْ یَقُوْلُوْنَ افْتَرٰىهُ ؕ— قُلْ اِنِ افْتَرَیْتُهٗ فَلَا تَمْلِكُوْنَ لِیْ مِنَ اللّٰهِ شَیْـًٔا ؕ— هُوَ اَعْلَمُ بِمَا تُفِیْضُوْنَ فِیْهِ ؕ— كَفٰی بِهٖ شَهِیْدًا بَیْنِیْ وَبَیْنَكُمْ ؕ— وَهُوَ الْغَفُوْرُ الرَّحِیْمُ ۟

ಅಥವಾ ಇದನ್ನು ಸ್ವತಃ ಪೈಗಂಬರ್‌ರವರೆ ರಚಿಸಿರುತ್ತಾರೆಂದು ಅವರು ಹೇಳುತ್ತಿದ್ದಾರೆಯೇ ? ಹೇಳಿರಿ; ಇದನ್ನು ನಾನೇ ರಚಿಸಿರುತ್ತಿದ್ದರೆ ನೀವು ನನ್ನನ್ನು ಅಲ್ಲಾಹನ ಶಿಕ್ಷೆಯಿಂದ ಸ್ವಲ್ಪವೂ ರಕ್ಷಿಸಲಾರಿರಿ. ಈ ಕುರ್‌ಆನಿನ ಕುರಿತು ಹೆಣೆಯುತ್ತಿರುವ ಮಾತುಗಳನ್ನು ಅಲ್ಲಾಹನು ಚೆನ್ನಾಗಿ ಬಲ್ಲನು. ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅವನೇ (ಅಲ್ಲಾಹನೇ) ಸಾಕು ಮತ್ತು ಅವನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
9 : 46

قُلْ مَا كُنْتُ بِدْعًا مِّنَ الرُّسُلِ وَمَاۤ اَدْرِیْ مَا یُفْعَلُ بِیْ وَلَا بِكُمْ ؕ— اِنْ اَتَّبِعُ اِلَّا مَا یُوْحٰۤی اِلَیَّ وَمَاۤ اَنَا اِلَّا نَذِیْرٌ مُّبِیْنٌ ۟

ಹೇಳಿರಿ ; ನಾನು ಸಂದೇಶವಾಹಕರಲ್ಲಿ ಹೊಸಬನಲ್ಲ ಮತ್ತು ನನ್ನೊಂದಿಗೆ ನಿಮ್ಮೊಂದಿಗೆ ಹೇಗೆ ವರ್ತಿಸಲಾಗುವುದೆಂಬುದನ್ನು ನಾನರಿಯೆನು, ನಾನಂತು ನನ್ನೆಡೆಗೆ ದಿವ್ಯವಾಣಿ ಮಾಡುಲಾಗುತ್ತಿರುವುದನ್ನೇ ಅನುಸರಿಸುತ್ತೇನೆ ಮತ್ತು ನಾನು ಸುಸ್ಪಷ್ಟ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ. info
التفاسير:

external-link copy
10 : 46

قُلْ اَرَءَیْتُمْ اِنْ كَانَ مِنْ عِنْدِ اللّٰهِ وَكَفَرْتُمْ بِهٖ وَشَهِدَ شَاهِدٌ مِّنْ بَنِیْۤ اِسْرَآءِیْلَ عَلٰی مِثْلِهٖ فَاٰمَنَ وَاسْتَكْبَرْتُمْ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟۠

ಓ ಪೈಗಂಬರರೇ ಹೇಳಿರಿ; ಈ ಕುರ್‌ಆನ್ ಅಲ್ಲಾಹನ ಕಡೆಯಿಂದಾಗಿದ್ದು ನೀವು ಅದನ್ನು ನಿಷೇಧಿಸಿಬಿಟ್ಟರೆ (ನಿಮ್ಮ ಗತಿ ಏನಾದೀತು ?) ಇದರಂತಿರುವ ಒಂದು ಗ್ರಂಥದ ಬಗ್ಗೆ ಇಸ್ರಾಯೀಲರ ಒಬ್ಬ ಸಾಕ್ಷೀದಾರನು ಸಾಕ್ಷಿಯನ್ನು ನೀಡಿದ್ದಾನೆ, ಅವನು ವಿಶ್ವಾಸವಿಟ್ಟಿರುವನು, ಮತ್ತು ನೀವು ಧಿಕ್ಕಾರ ತೋರಿದ್ದೀರಿ, ನಿಸ್ಸಂಶಯವಾಗಿಯೂ ಅಲ್ಲಾಹನು ಅಕ್ರಮಿಗಳನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುವುದಿಲ್ಲ. info
التفاسير:

external-link copy
11 : 46

وَقَالَ الَّذِیْنَ كَفَرُوْا لِلَّذِیْنَ اٰمَنُوْا لَوْ كَانَ خَیْرًا مَّا سَبَقُوْنَاۤ اِلَیْهِ ؕ— وَاِذْ لَمْ یَهْتَدُوْا بِهٖ فَسَیَقُوْلُوْنَ هٰذَاۤ اِفْكٌ قَدِیْمٌ ۟

ಸತ್ಯನಿಷೇಧಿಗಳು ಸತ್ಯವಿಶ್ವಾಸಿಗಳಿಗೆ ಹೇಳುತ್ತಾರೆ, ಇದು (ಈ ಕುರ್‌ಆನ್) ಉತ್ತಮ ವಾಗಿರುತ್ತಿದ್ದರೆ ಈ ಜನರು ನಮಗಿಂತ ಮುಂಚೆ ಅದರೆಡೆಗೆ ಮುಂದಾಗುತ್ತಿರಲಿಲ್ಲ. ಅವರು ಈ ಕುರ್‌ಆನಿನಿಂದ ಮಾರ್ಗದರ್ಶನ ಪಡೆಯದಿದ್ದುದರಿಂದ ಇದೊಂದು ಹಳೆಯ ಸುಳ್ಳಾಗಿದೆ ಎಂದು ಹೇಳುತ್ತಾರೆ. info
التفاسير:

external-link copy
12 : 46

وَمِنْ قَبْلِهٖ كِتٰبُ مُوْسٰۤی اِمَامًا وَّرَحْمَةً ؕ— وَهٰذَا كِتٰبٌ مُّصَدِّقٌ لِّسَانًا عَرَبِیًّا لِّیُنْذِرَ الَّذِیْنَ ظَلَمُوْا ۖۗ— وَبُشْرٰی لِلْمُحْسِنِیْنَ ۟

ಇದಕ್ಕೆ ಮೊದಲು ಮೂಸಾರ ಗ್ರಂಥವು ಮಾರ್ಗದರ್ಶಕವಾಗಿಯೂ, ಕಾರುಣ್ಯವಾಗಿಯೂ ಬಂದಿತ್ತು ಮತ್ತು ಈ ಕುರ್‌ಆನ್ ಅದನ್ನು ದೃಢೀಕರಿಸುವಂತದ್ದೂ, ಅರಬೀ ಭಾಷೆಯಲ್ಲಿರುವಂತದ್ದೂ ಆಗಿದೆ, ಅಕ್ರಮಿಗಳಿಗೆ ಎಚ್ಚರಿಸಲೆಂದು ಮತ್ತು ಸತ್ಕರ್ಮಿಗಳಿಗೆ ಸುವಾರ್ತೆಯಾಗಲೆಂದಾಗಿದೆ. info
التفاسير:

external-link copy
13 : 46

اِنَّ الَّذِیْنَ قَالُوْا رَبُّنَا اللّٰهُ ثُمَّ اسْتَقَامُوْا فَلَا خَوْفٌ عَلَیْهِمْ وَلَا هُمْ یَحْزَنُوْنَ ۟ۚ

ನಿಸ್ಸಂದೇಹವಾಗಿಯೂ ನಮ್ಮ ಪ್ರಭುವು ಅಲ್ಲಾಹನೆಂದು ಹೇಳಿ, ಆ ಬಳಿಕ ಅದರಲ್ಲಿ ದೃಢವಾಗಿ ನೆಲೆನಿಂತಿರುವವರ ಮೇಲೆ ಯಾವ ಭಯವೂ ಇಲ್ಲ ಮತ್ತು ಅವರು ದುಖಿಃತರಾಗಲಾರರು. info
التفاسير:

external-link copy
14 : 46

اُولٰٓىِٕكَ اَصْحٰبُ الْجَنَّةِ خٰلِدِیْنَ فِیْهَا ۚ— جَزَآءً بِمَا كَانُوْا یَعْمَلُوْنَ ۟

ಇಂತಹವರೇ ಸ್ವರ್ಗವಾಸಿಗಳು, ಅವರು ಮಾಡುತ್ತಿದ್ದ ಸತ್ಕರ್ಮಗಳ ಪ್ರತಿಫಲವಾಗಿ ಅದರಲ್ಲೇ ಶಾಶ್ವತರಾಗಿರುವರು. info
التفاسير: