ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
23 : 43

وَكَذٰلِكَ مَاۤ اَرْسَلْنَا مِنْ قَبْلِكَ فِیْ قَرْیَةٍ مِّنْ نَّذِیْرٍ اِلَّا قَالَ مُتْرَفُوْهَاۤ ۙ— اِنَّا وَجَدْنَاۤ اٰبَآءَنَا عَلٰۤی اُمَّةٍ وَّاِنَّا عَلٰۤی اٰثٰرِهِمْ مُّقْتَدُوْنَ ۟

ಇದೇ ಪ್ರಕಾರ ನಿಮಗಿಂತ ಮೊದಲು ನಾವು ಪ್ರತಿಯೊಂದು ನಾಡಿನಲ್ಲಿ ಯಾವೊಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿನ ಸುಖಲೋಲುಪರು ಹೀಗೆ ಹೇಳದೆ ಇರಲಿಲ್ಲ. “ ನಾವು ನಮ್ಮ ಪೂರ್ವಿಕರನ್ನು ಒಂದು ಧರ್ಮದಲ್ಲಿ ಕಂಡಿರುತ್ತೇವೆ ಮತ್ತು ನಾವು ಅವರ ಹೆಜ್ಜೆಗಳನ್ನೇ ಅನುಸರಿಸುತ್ತೇವೆ.” info
التفاسير:

external-link copy
24 : 43

قٰلَ اَوَلَوْ جِئْتُكُمْ بِاَهْدٰی مِمَّا وَجَدْتُّمْ عَلَیْهِ اٰبَآءَكُمْ ؕ— قَالُوْۤا اِنَّا بِمَاۤ اُرْسِلْتُمْ بِهٖ كٰفِرُوْنَ ۟

ಪೈಗಂಬರರು ಹೇಳಿದರು: ನೀವು ನಿಮ್ಮ ಪೂರ್ವಿಕರನ್ನು ಕಂಡಿರುವ ಆ ಮಾರ್ಗಕ್ಕಿಂತಲೂ ಉತ್ತಮ ಮಾರ್ಗವನ್ನು ನಾನು ನಿಮ್ಮ ಬಳಿ ತಂದಿದ್ದರೂ ಸರಿಯೇ? ಅವರು ಉತ್ತರಿಸಿದರು: ನೀವು ಯಾವ ಮಾರ್ಗದೊಂದಿಗೆ ಕಳುಹಿಸಲ್ಪಟ್ಟಿರುವಿರೋ ನಾವು ಅದನ್ನೇ ನಿರಾಕರಿಸುವವರಾಗಿದ್ದೇವೆ. info
التفاسير:

external-link copy
25 : 43

فَانْتَقَمْنَا مِنْهُمْ فَانْظُرْ كَیْفَ كَانَ عَاقِبَةُ الْمُكَذِّبِیْنَ ۟۠

ಆದುದರಿಂದ ನಾವು ಅವರೊಂದಿಗೆ ಪ್ರತಿಕಾರ ಪಡೆದೆವು ಮತ್ತು ಸತ್ಯನಿಷೇಧಿಗಳ ಪರಿಣಾಮವು ಹೇಗಾಯಿತೆಂಬುದನ್ನು ನೋಡಿರಿ. info
التفاسير:

external-link copy
26 : 43

وَاِذْ قَالَ اِبْرٰهِیْمُ لِاَبِیْهِ وَقَوْمِهٖۤ اِنَّنِیْ بَرَآءٌ مِّمَّا تَعْبُدُوْنَ ۟ۙ

ಇಬ್ರಾಹೀಮ್ ತನ್ನ ತಂದೆ ಮತ್ತು ತಮ್ಮ ಜನಾಂಗದೊAದಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಖಂಡಿತವಾಗಿಯು ನಾನು ನೀವು ಆರಾಧಿಸುತ್ತಿರುವವುಗಳಿಂದ ವಿಮುಕ್ತನಾಗಿದ್ದೇನೆ. info
التفاسير:

external-link copy
27 : 43

اِلَّا الَّذِیْ فَطَرَنِیْ فَاِنَّهٗ سَیَهْدِیْنِ ۟

ನನ್ನನ್ನು ಸೃಷ್ಟಿಸಿದ ಅಲ್ಲಾಹನ ಹೊರತು ಖಂಡಿತವಾಗಿಯು ಅವನು ನನಗೆ ಮಾರ್ಗದರ್ಶನ ಮಾಡುವನು. info
التفاسير:

external-link copy
28 : 43

وَجَعَلَهَا كَلِمَةً بَاقِیَةً فِیْ عَقِبِهٖ لَعَلَّهُمْ یَرْجِعُوْنَ ۟

ಇಬ್ರಾಹೀಮ್‌ರವರು ಅದನ್ನು ತಮ್ಮ ಸಂತತಿಗಳಲ್ಲೂ ಬಾಕಿ ಉಳಿಯುವಂತಹ ವಚನವಾಗಿ ಮಾಡಿದರು. (ಸತ್ಯದೆಡೆಗೆ) ಅವರು ಮರಳುವಂತಾಗಲು. info
التفاسير:

external-link copy
29 : 43

بَلْ مَتَّعْتُ هٰۤؤُلَآءِ وَاٰبَآءَهُمْ حَتّٰی جَآءَهُمُ الْحَقُّ وَرَسُوْلٌ مُّبِیْنٌ ۟

ಬದಲಾಗಿ, ನಾನು ಇವರಿಗೆ ಮತ್ತು ಇವರ ಪೂರ್ವಿಕರಿಗೆ ಸತ್ಯವು ಸ್ಪಷ್ಟವಾಗಿ ವಿವರಿಸಿಕೊಡುವ ಸಂದೇಶವಾಹಕ ಬರುವತನಕ ಜೀವನಾನುಕೂಲತೆಯನ್ನು ನೀಡಿದೆನು. info
التفاسير:

external-link copy
30 : 43

وَلَمَّا جَآءَهُمُ الْحَقُّ قَالُوْا هٰذَا سِحْرٌ وَّاِنَّا بِهٖ كٰفِرُوْنَ ۟

ಅವರ ಬಳಿ ಸತ್ಯವು ಬಂದಾಗ ಅವರು: ಇದಂತು ಜಾದುವಾಗಿದೆ ಮತ್ತು ನಾವಿದನ್ನು ನಿಷೇಧಿಸುತ್ತೇವೆ ಎಂದು ಹೇಳತೊಡಗಿದರು. info
التفاسير:

external-link copy
31 : 43

وَقَالُوْا لَوْلَا نُزِّلَ هٰذَا الْقُرْاٰنُ عَلٰی رَجُلٍ مِّنَ الْقَرْیَتَیْنِ عَظِیْمٍ ۟

ಮತ್ತು ಅವರು ಹೇಳಿದರು: ಈ ಕುರ್‌ಆನ್ ಎರಡು ನಗರಗಳ ಯಾವೊಬ್ಬ ಗಣ್ಯವ್ಯಕ್ತಿಯ ಮೇಲೆ ಅವತೀರ್ಣಗೊಳಿಸಲಾಗಿಲ್ಲವೇಕೆ? info
التفاسير:

external-link copy
32 : 43

اَهُمْ یَقْسِمُوْنَ رَحْمَتَ رَبِّكَ ؕ— نَحْنُ قَسَمْنَا بَیْنَهُمْ مَّعِیْشَتَهُمْ فِی الْحَیٰوةِ الدُّنْیَا وَرَفَعْنَا بَعْضَهُمْ فَوْقَ بَعْضٍ دَرَجٰتٍ لِّیَتَّخِذَ بَعْضُهُمْ بَعْضًا سُخْرِیًّا ؕ— وَرَحْمَتُ رَبِّكَ خَیْرٌ مِّمَّا یَجْمَعُوْنَ ۟

ನಿಮ್ಮ ಪ್ರಭುವಿನ ಅನುಗ್ರಹವನ್ನು ಹಂಚುವವರು ಇವರಾಗಿದ್ದಾರೆಯೇ? ನಾವೇ ಅವರ ಐಹಿಕ ಜೀವನದಲ್ಲಿ ಜೀವನಾಧಾರವನ್ನು ಅವರ ನಡುವೆ ಹಂಚಿದ್ದೇವೆ ಮತ್ತು ಒಬ್ಬನು ಮತ್ತೊಬ್ಬನನ್ನು ಅಧೀನದಲ್ಲಿರಿಸಲು ನಾವು ಕೆಲವರನ್ನು ಕೆಲವರಿಗಿಂತ ಶ್ರೇಷ್ಠರನ್ನಾಗಿಸಿದ್ದೇವೆ. ನಿಮ್ಮ ಪ್ರಭುವಿನ ಕೃಪೆಯು ಅವರು ಸಂಗ್ರಹಿಸುತ್ತಿರುವ ಸಂಪತ್ತಿಗಿAತಲು ಹೆಚ್ಚು ಉತ್ತಮವಾಗಿದೆ. info
التفاسير:

external-link copy
33 : 43

وَلَوْلَاۤ اَنْ یَّكُوْنَ النَّاسُ اُمَّةً وَّاحِدَةً لَّجَعَلْنَا لِمَنْ یَّكْفُرُ بِالرَّحْمٰنِ لِبُیُوْتِهِمْ سُقُفًا مِّنْ فِضَّةٍ وَّمَعَارِجَ عَلَیْهَا یَظْهَرُوْنَ ۟ۙ

ಮನುಷ್ಯರೆಲ್ಲ ಸತ್ಯನಿಷೇಧದಲ್ಲಿ ಒಂದೇ ಸಮುದಾಯದವರಾಗುವರೆಂಬ ಭಯವಿಲ್ಲದಿರುತ್ತಿದ್ದರೆ ಪರಮ ದಯಾಮಯನನ್ನು ನಿಷೇಧಿಸುವವರ ಮನೆಗಳ ಛಾವಣಿಗಳನ್ನು ಬೆಳ್ಳಿಯದ್ದನ್ನಾಗಿ ಮತ್ತು ಅವರು ಏರಿ ಹೋಗುವ ಮೆಟ್ಟಿಲುಗಳನ್ನು ಬೆಳ್ಳಿಯದ್ದನ್ನಾಗಿ ಮಾಡಿಬಿಡುತ್ತಿದ್ದೆವು. info
التفاسير: