ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
23 : 42

ذٰلِكَ الَّذِیْ یُبَشِّرُ اللّٰهُ عِبَادَهُ الَّذِیْنَ اٰمَنُوْا وَعَمِلُوا الصّٰلِحٰتِ ؕ— قُلْ لَّاۤ اَسْـَٔلُكُمْ عَلَیْهِ اَجْرًا اِلَّا الْمَوَدَّةَ فِی الْقُرْبٰی ؕ— وَمَنْ یَّقْتَرِفْ حَسَنَةً نَّزِدْ لَهٗ فِیْهَا حُسْنًا ؕ— اِنَّ اللّٰهَ غَفُوْرٌ شَكُوْرٌ ۟

ಇದು ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ತನ್ನ ದಾಸರಿಗೆ ಅಲ್ಲಾಹನು ನೀಡುವ ಶುಭವಾರ್ತೆಯಾಗಿದೆ. ಹೇಳಿರಿ: ನಾನು ಈ ಕಾರ್ಯಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಕೇಳುತ್ತಿಲ್ಲ. ಆದರೆ ಬಾಂಧವ್ಯ ಸಾಮಿಪ್ಯದ ಪ್ರೀತಿಯ ಹೊರತು. ಯಾರಾದರೂ ಒಳಿತು ಮಾಡಿದರೆ ನಾವು ಅವನ ಒಳಿತಿನಲ್ಲಿ ಇನ್ನಷ್ಟು ವೃದ್ಧಿಸಿ ಕೊಡುವೆವು. ನಿಸ್ಸಂದೇಹವಾಗಿಯು ಅಲ್ಲಾಹನು ಕ್ಷಮಿಸುವವನೂ, ಕೃತಜ್ಞನೂ ಆಗಿದ್ದಾನೆ. info
التفاسير:

external-link copy
24 : 42

اَمْ یَقُوْلُوْنَ افْتَرٰی عَلَی اللّٰهِ كَذِبًا ۚ— فَاِنْ یَّشَاِ اللّٰهُ یَخْتِمْ عَلٰی قَلْبِكَ ؕ— وَیَمْحُ اللّٰهُ الْبَاطِلَ وَیُحِقُّ الْحَقَّ بِكَلِمٰتِهٖ ؕ— اِنَّهٗ عَلِیْمٌۢ بِذَاتِ الصُّدُوْرِ ۟

ಪೈಗಂಬರರು ಅಲ್ಲಾಹನ ಮೇಲೆ ಸುಳ್ಳಾರೋಪ ಮಾಡಿರುವರೆಂದು ಅವರು ಹೇಳುತ್ತಿದ್ದಾರೆಯೇ? ಅಲ್ಲಾಹನು ಇಚ್ಛಿಸುತ್ತಿದ್ದರೆ ನಿಮ್ಮ ಹೃದಯದ ಮೇಲೆ ಮುದ್ರೆಯೊತ್ತಿ ಬಿಡುತ್ತಿದ್ದನು ಅವನು ಮಿಥ್ಯವನ್ನು ಅಳಿಸುತ್ತಾನೆ. ಮತ್ತು ತನ್ನ ವಚನಗಳ ಮೂಲಕ ಸತ್ಯವನ್ನು ದೃಢಗೊಳಿಸುತ್ತಾನೆ. ನಿಶ್ಚಯವಾಗಿಯು ಅವನು ಹೃದಯಗಳಲ್ಲಿರುವ ವಿಚಾರಗಳನ್ನು ಚೆನ್ನಾಗಿ ಬಲ್ಲನು. info
التفاسير:

external-link copy
25 : 42

وَهُوَ الَّذِیْ یَقْبَلُ التَّوْبَةَ عَنْ عِبَادِهٖ وَیَعْفُوْا عَنِ السَّیِّاٰتِ وَیَعْلَمُ مَا تَفْعَلُوْنَ ۟ۙ

ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುವವನು ಮತ್ತು ಪಾಪಗಳನ್ನು ಮನ್ನಿಸುವವನು ಅವನೇ. ಮತ್ತು ನೀವು ಮಾಡುತ್ತಿರುವುದನ್ನು ಅವನು ಚೆನ್ನಾಗಿ ಬಲ್ಲನು. info
التفاسير:

external-link copy
26 : 42

وَیَسْتَجِیْبُ الَّذِیْنَ اٰمَنُوْا وَعَمِلُوا الصّٰلِحٰتِ وَیَزِیْدُهُمْ مِّنْ فَضْلِهٖ ؕ— وَالْكٰفِرُوْنَ لَهُمْ عَذَابٌ شَدِیْدٌ ۟

ಸತ್ಯವಿಶ್ವಾಸಿಗಳ ಹಾಗೂ ಸತ್ಕರ್ಮಿಗಳ ಪ್ರಾರ್ಥನೆಗೆ ಅವನು ಓಗೊಡುತ್ತಾನೆ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಇನ್ನಷ್ಟು ಹೆಚ್ಚು ನೀಡುತ್ತಾನೆ. ಇನ್ನು ಸತ್ಯನಿಷೇಧಿಗಳಿಗೆ ಕಠಿಣ ಶಿಕ್ಷೆಯಿರುವುದು. info
التفاسير:

external-link copy
27 : 42

وَلَوْ بَسَطَ اللّٰهُ الرِّزْقَ لِعِبَادِهٖ لَبَغَوْا فِی الْاَرْضِ وَلٰكِنْ یُّنَزِّلُ بِقَدَرٍ مَّا یَشَآءُ ؕ— اِنَّهٗ بِعِبَادِهٖ خَبِیْرٌ بَصِیْرٌ ۟

ಅಲ್ಲಾಹನು ತನ್ನ ಸಕಲ ದಾಸರ ಜೀವನಾಧಾರವನ್ನು ವಿಶಾಲಗೊಳಿಸಿರುತ್ತಿದ್ದರೆ ಅವರು ಭೂಮಿಯಲ್ಲಿ ಕ್ಷೆÆÃಭೆಯನ್ನು ಹರಡುತ್ತಿದ್ದರು. ಆದರೆ ಅವನು ನಿಶ್ಚಿತ ಪ್ರಮಾಣದೊಂದಿಗೆ ತಾನಿಚ್ಛಿಸುವುದನ್ನು ಇಳಿಸುತ್ತಾನೆ ನಿಶ್ಚಯವಾಗಿಯೂ ಅವನು ತನ್ನ ದಾಸರ ಕುರಿತು ಸಂಪೂರ್ಣವಾಗಿ ಅರಿವುಳ್ಳವನೂ, ಚೆನ್ನಾಗಿ ನೋಡುವವನೂ ಆಗಿದ್ದಾನೆ. info
التفاسير:

external-link copy
28 : 42

وَهُوَ الَّذِیْ یُنَزِّلُ الْغَیْثَ مِنْ بَعْدِ مَا قَنَطُوْا وَیَنْشُرُ رَحْمَتَهٗ ؕ— وَهُوَ الْوَلِیُّ الْحَمِیْدُ ۟

ಜನರು ನಿರಾಶರಾದ ಬಳಿಕ ಮಳೆ ಸುರಿಸುವವನು ಮತ್ತು ತನ್ನ ಕೃಪೆಯನ್ನು ಹರಡುವವನು ಅವನೇ, ಅವನು ಸ್ತುತ್ಯಾರ್ಹನಾದ ರಕ್ಷಕ ಮಿತ್ರನಾಗಿರುವನು. info
التفاسير:

external-link copy
29 : 42

وَمِنْ اٰیٰتِهٖ خَلْقُ السَّمٰوٰتِ وَالْاَرْضِ وَمَا بَثَّ فِیْهِمَا مِنْ دَآبَّةٍ ؕ— وَهُوَ عَلٰی جَمْعِهِمْ اِذَا یَشَآءُ قَدِیْرٌ ۟۠

ಆಕಾಶಗಳ ಮತ್ತು ಭೂಮಿಯ ಸೃಷ್ಠಿ ಹಾಗೂ ಅವುಗಳಲ್ಲಿ ಜೀವಜಾಲಗಳನ್ನು ಹರಡಿಸಿರುವುದು ಅವನ ನಿದರ್ಶÀನಗಳಲ್ಲಾಗಿದೆ. ತಾನಿಚ್ಛಿಸಿದಾಗ ಅವನು ಅವುಗಳನ್ನು ಒಟ್ಟುಗೂಡಿಸಲು ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
30 : 42

وَمَاۤ اَصَابَكُمْ مِّنْ مُّصِیْبَةٍ فَبِمَا كَسَبَتْ اَیْدِیْكُمْ وَیَعْفُوْا عَنْ كَثِیْرٍ ۟ؕ

ನಿಮಗೆ ಯಾವುದೇ ವಿಪತ್ತು ಬಂದರೂ ಅದು ನಿಮ್ಮ ಕೃತ್ಯಗಳ ಪರಿಣಾಮವಾಗಿರುತ್ತದೆ ಅವನು ಅನೇಕ ಪಾಪಗಳನ್ನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ. info
التفاسير:

external-link copy
31 : 42

وَمَاۤ اَنْتُمْ بِمُعْجِزِیْنَ فِی الْاَرْضِ ۖۚ— وَمَا لَكُمْ مِّنْ دُوْنِ اللّٰهِ مِنْ وَّلِیٍّ وَّلَا نَصِیْرٍ ۟

ನೀವು ನಮ್ಮನ್ನು ಭೂಮಿಯಲ್ಲಿ ಸೋಲಿಸುವವರಲ್ಲ. ನಿಮಗೆ ಅಲ್ಲಾಹನ ಹೊರತು ಇನ್ನಾವ ರಕ್ಷಕನಾಗಲಿ, ಸಹಾಯಕನಾಗಲಿ ಇಲ್ಲ. info
التفاسير: