ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
141 : 4

١لَّذِیْنَ یَتَرَبَّصُوْنَ بِكُمْ ۚ— فَاِنْ كَانَ لَكُمْ فَتْحٌ مِّنَ اللّٰهِ قَالُوْۤا اَلَمْ نَكُنْ مَّعَكُمْ ۖؗ— وَاِنْ كَانَ لِلْكٰفِرِیْنَ نَصِیْبٌ ۙ— قَالُوْۤا اَلَمْ نَسْتَحْوِذْ عَلَیْكُمْ وَنَمْنَعْكُمْ مِّنَ الْمُؤْمِنِیْنَ ؕ— فَاللّٰهُ یَحْكُمُ بَیْنَكُمْ یَوْمَ الْقِیٰمَةِ ؕ— وَلَنْ یَّجْعَلَ اللّٰهُ لِلْكٰفِرِیْنَ عَلَی الْمُؤْمِنِیْنَ سَبِیْلًا ۟۠

ಇವರು (ಕಪಟವಿಶ್ವಾಸಿಗಳು) ನಿಮಗೊದಗುವ ಪರಿಣಾಮವನ್ನು ನಿರೀಕ್ಷಿಸುತ್ತಿರುತ್ತಾರೆ. ಅನಂತರ ನಿಮಗೆ ಅಲ್ಲಾಹನು ವಿಜಯವನ್ನು ಕರುಣಿಸಿದರೆ ನಾವು ನಿಮ್ಮ ಜೊತೆಗಾರರಲ್ಲವೆ? ಎನ್ನುವರು. ಮತ್ತು ಸತ್ಯನಿಷೇಧಿಗಳಿಗೇನಾದರು ಯಶಸ್ಸು ಲಭಿಸಿದರೆ (ಅವರೊಂದಿಗೆ) ಹೇಳುವರು: ನಾವು ನಿಮ್ಮ ಮೇಲೆ ಯಶಸ್ಸು ಸಾಧಿಸಿದಾಗ ಮತ್ತು ನಿಮನ್ನು ವಿಶ್ವಾಸಿಗಳ ಕೈಗಳಿಂದ ರಕ್ಷಿಸಲಿಲ್ಲವೆ? ಆದರೆ ಪುನರುತ್ಥಾನ ದಿನದಂದು ಸ್ವತಃ ಅಲ್ಲಾಹನೇ ನಿಮ್ಮ ಮಧ್ಯೆ ತೀರ್ಪು ನೀಡುವನು. ಮತ್ತು ಅಲ್ಲಾಹನು ಸತ್ಯನಿಷೇಧಿಗಳಿಗೆ ವಿಶ್ವಾಸಿಗಳ ಮೇಲೆ ಎಂದೂ ಮಾರ್ಗವನ್ನು ತೆರೆದು ಕೊಡಲಾರನು. info
التفاسير: