ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
12 : 32

وَلَوْ تَرٰۤی اِذِ الْمُجْرِمُوْنَ نَاكِسُوْا رُءُوْسِهِمْ عِنْدَ رَبِّهِمْ ؕ— رَبَّنَاۤ اَبْصَرْنَا وَسَمِعْنَا فَارْجِعْنَا نَعْمَلْ صَالِحًا اِنَّا مُوْقِنُوْنَ ۟

ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು ಹೇಳುತ್ತಿರುವರು: ನಮ್ಮ ಪ್ರಭೂ, ನಾವಿಂದು ಕಂಡಿರುವೆವು ಮತ್ತು ಕೇಳಿಸಿಕೊಂಡಿರುವೆವು. ಆದ್ದರಿಂದ ನಮ್ಮನ್ನು ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ಖಂಡಿತವಾಗಿಯು ನಾವು ಈಗ ದೃಢವಿಶ್ವಾಸವುಳ್ಳವರಾಗಿದ್ದೇವೆ. info
التفاسير:

external-link copy
13 : 32

وَلَوْ شِئْنَا لَاٰتَیْنَا كُلَّ نَفْسٍ هُدٰىهَا وَلٰكِنْ حَقَّ الْقَوْلُ مِنِّیْ لَاَمْلَـَٔنَّ جَهَنَّمَ مِنَ الْجِنَّةِ وَالنَّاسِ اَجْمَعِیْنَ ۟

ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ನಾವು ಅವನ ಸನ್ಮಾರ್ಗವನ್ನು ಕರುಣಿಸುತ್ತಿದ್ದೆವು. ಆದರೆ ಯಕ್ಷ ಮತ್ತು ಮಾನವರಿಂದ ನಾನು ನರಕವನ್ನು ತುಂಬಿ ಬಿಡುವೆನು ಎಂಬ ನನ್ನ ಕಡೆಯ ಮಾತು ಸ್ಥಿರವಾಗಿಬಿಟ್ಟಿದೆ. info
التفاسير:

external-link copy
14 : 32

فَذُوْقُوْا بِمَا نَسِیْتُمْ لِقَآءَ یَوْمِكُمْ هٰذَا ۚ— اِنَّا نَسِیْنٰكُمْ وَذُوْقُوْا عَذَابَ الْخُلْدِ بِمَا كُنْتُمْ تَعْمَلُوْنَ ۟

ಆದ್ದರಿಂದ ನೀವು ನಿಮ್ಮ ಈ ದಿನದ ಭೇಟಿಯನ್ನು ಮರೆತು ಬಿಟ್ಟಿರುವ ಕಾರಣ ಶಿಕ್ಷೆಯನ್ನು ಸವಿಯಿರಿ. ನಾವು ಸಹ ನಿಮ್ಮನ್ನು ಮರೆತು ಬಿಟ್ಟಿದ್ದೇವೆ. ನೀವು ಮಾಡುತ್ತಿದ್ದಂತಹ ಕರ್ಮದ (ಫಲವಾಗಿ) ಶಾಶ್ವತ ಶಿಕ್ಷೆಯನ್ನು ಸವಿಯಿರಿ. info
التفاسير:

external-link copy
15 : 32

اِنَّمَا یُؤْمِنُ بِاٰیٰتِنَا الَّذِیْنَ اِذَا ذُكِّرُوْا بِهَا خَرُّوْا سُجَّدًا وَّسَبَّحُوْا بِحَمْدِ رَبِّهِمْ وَهُمْ لَا یَسْتَكْبِرُوْنَ ۟

ನಮ್ಮ ಸೂಕ್ತಗಳ ಮೂಲಕ ಬೋಧಿಸಲಾದಾಗ ಸಾಷ್ಟಾಂಗವೆರಗುವವರು ಮತ್ತು ತಮ್ಮ ಪ್ರಭುವನ್ನು ಸ್ತುತಿಸುವವರು ಮಾತ್ರ ನಮ್ಮ ದೃಷ್ಟಾಂತಗಳಲ್ಲಿ ವಿಸ್ವಾಸವಿಡುತ್ತಾರೆ ಮತು ್ತಅವರು ಅಹಂಕಾರತೋರುವುದಿಲ್ಲ. info
التفاسير:

external-link copy
16 : 32

تَتَجَافٰی جُنُوْبُهُمْ عَنِ الْمَضَاجِعِ یَدْعُوْنَ رَبَّهُمْ خَوْفًا وَّطَمَعًا ؗ— وَّمِمَّا رَزَقْنٰهُمْ یُنْفِقُوْنَ ۟

ಅವರ ಪಾರ್ಶ್ವಗಳು ತಮ್ಮ ಹಾಸಿಗೆಗಳಿಂದ ಬೇರ್ಪಟ್ಟಿರುತ್ತವೆ. ಅವರು ಭಯ ಮತ್ತು ನಿರೀಕ್ಷೆಯೊಂದಿಗೆ ತಮ್ಮ ಪ್ರಭುವಿನಲ್ಲಿ ಪ್ರಾರ್ಥಿಸುತ್ತಾರೆ ಮತ್ತು ನಾವು ಅವರಿಗೆ ನೀಡಿರುವುದರಿಂದ ಅವರು ಖರ್ಚು ಮಾಡುತ್ತಾರೆ. info
التفاسير:

external-link copy
17 : 32

فَلَا تَعْلَمُ نَفْسٌ مَّاۤ اُخْفِیَ لَهُمْ مِّنْ قُرَّةِ اَعْیُنٍ ۚ— جَزَآءً بِمَا كَانُوْا یَعْمَلُوْنَ ۟

ಅವರ ಕರ್ಮಗಳ ಫಲವಾಗಿ ಅವರಿಗಾಗಿ ಕಣ್ಮನತಣಿಸುವ ಯಾವ ವಸ್ತುಗಳನ್ನು ಗೌಪ್ಯವಾಗಿಡಲಾಗಿದೆ ಎಂದು ಯಾವ ವ್ಯಕ್ತಿಯು ಅರಿಯುವುದಿಲ್ಲ. info
التفاسير:

external-link copy
18 : 32

اَفَمَنْ كَانَ مُؤْمِنًا كَمَنْ كَانَ فَاسِقًا ؔؕ— لَا یَسْتَوٗنَ ۟

ಏನು; ಸತ್ಯವಿಶ್ವಾಸಿಯು ಧಿಕ್ಕಾರಿಯಂತಾಗುವನೇ? ಅವರು ಸಮಾನರಲ್ಲ. info
التفاسير:

external-link copy
19 : 32

اَمَّا الَّذِیْنَ اٰمَنُوْا وَعَمِلُوا الصّٰلِحٰتِ فَلَهُمْ جَنّٰتُ الْمَاْوٰی ؗ— نُزُلًا بِمَا كَانُوْا یَعْمَلُوْنَ ۟

ಯಾರು ಸತ್ಯವಿಶ್ವಾಸವಿಟ್ಟು ಸತ್ಕರ್ಮವನ್ನೂ ಮಾಡಿದರೋ ಅವರಿಗೆ ಅತಿಥ್ಯವಾಗಿ ಶಾಶ್ವತ ವಾಸದ ಸ್ವರ್ಗೋದ್ಯಾನಗಳಿವೆ. ಇದು ಅವರು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿದೆ. info
التفاسير:

external-link copy
20 : 32

وَاَمَّا الَّذِیْنَ فَسَقُوْا فَمَاْوٰىهُمُ النَّارُ ؕ— كُلَّمَاۤ اَرَادُوْۤا اَنْ یَّخْرُجُوْا مِنْهَاۤ اُعِیْدُوْا فِیْهَا وَقِیْلَ لَهُمْ ذُوْقُوْا عَذَابَ النَّارِ الَّذِیْ كُنْتُمْ بِهٖ تُكَذِّبُوْنَ ۟

ಇನ್ನು ಧಿಕ್ಕಾರವೆಸಗಿದವರ ವಾಸಸ್ಥಳವು ನರಕವಾಗಿದೆ. ಅವರು ಅಲ್ಲಿಂದ ಹೊರಬರಲು ಬಯಸುವಾಗಲೆಲ್ಲ ಅಲ್ಲಿಗೇ ಮರಳಿಸಲಾಗುವರು ಮತ್ತು ನಿಮ್ಮ ನಿಷೇಧದ ಪ್ರತಿಫಲವಾಗಿ ನರಕಾಗ್ನಿಯ ಶಿಕ್ಷೆಯನ್ನು ಸವಿಯಿರಿ ಎಂದು ಅವರೊಂದಿಗೆ ಹೇಳಲಾಗುವುದು. info
التفاسير: