ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
33 : 30

وَاِذَا مَسَّ النَّاسَ ضُرٌّ دَعَوْا رَبَّهُمْ مُّنِیْبِیْنَ اِلَیْهِ ثُمَّ اِذَاۤ اَذَاقَهُمْ مِّنْهُ رَحْمَةً اِذَا فَرِیْقٌ مِّنْهُمْ بِرَبِّهِمْ یُشْرِكُوْنَ ۟ۙ

ಅವರಿಗೆ ಯಾವುದಾದರೂ ಸಂಕಷ್ಟವು ಬಾಧಿಸಿದರೆ ಅವರು ತಮ್ಮ ಪ್ರಭುವಿನೆಡೆಗೆ ಮರಳಿ ಅವನನ್ನೇ ಕರೆದು ಬೇಡುತ್ತಾರೆ. ನಂತರ ಅವನು ಅವರಿಗೆ ತನ್ನೆಡೆಯಿಂದ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರ ಪೈಕಿ ಒಂದು ತಂಡದವರು ನಾವು ಅವರಿಗೆ ದಯಪಾಲಿಸಿರುವುದಕ್ಕೆ ಅವರು ಕೃತಘ್ನತೆ ತೋರಲೆಂದು ತಮ್ಮ ಪ್ರಭುವಿನೊಂದಿಗೆ ಸಹಭಾಗಿಗಳನ್ನು ನಿಶ್ಚಯಿಸತೊಡಗುತ್ತಾರೆ. info
التفاسير:

external-link copy
34 : 30

لِیَكْفُرُوْا بِمَاۤ اٰتَیْنٰهُمْ ؕ— فَتَمَتَّعُوْا ۥ— فَسَوْفَ تَعْلَمُوْنَ ۟

ಸರಿ, ನೀವು ಸುಖಭೋಗಗಳನ್ನು ಸವಿಯಿರಿ. ಬಹುಬೇಗನೇ ನೀವು ಅರಿತುಕೊಳ್ಳಲಿದ್ದೀರಿ. info
التفاسير:

external-link copy
35 : 30

اَمْ اَنْزَلْنَا عَلَیْهِمْ سُلْطٰنًا فَهُوَ یَتَكَلَّمُ بِمَا كَانُوْا بِهٖ یُشْرِكُوْنَ ۟

ಇವರು ಅಲ್ಲಾಹನಿಗೆ ಸಹಭಾಗಿಯನ್ನಾಗಿ ನಿಶ್ಚಯಿಸುವಂತೆ ಹೇಳುವ ಯಾವುದಾದರೂ ಪುರಾವೆಯನ್ನು ನಾವು ಇವರ ಮೇಲೆ ಇಳಿಸಿರುತ್ತೇವೆಯೇ? info
التفاسير:

external-link copy
36 : 30

وَاِذَاۤ اَذَقْنَا النَّاسَ رَحْمَةً فَرِحُوْا بِهَا ؕ— وَاِنْ تُصِبْهُمْ سَیِّئَةٌ بِمَا قَدَّمَتْ اَیْدِیْهِمْ اِذَا هُمْ یَقْنَطُوْنَ ۟

ಮತ್ತು ನಾವು ಜನರಿಗೆ ಕಾರುಣ್ಯವನ್ನು ಸವಿಯುವಂತೆ ಮಾಡಿದರೆ ಅವರು ಸಂತುಷ್ಟರಾಗುತ್ತಾರೆ ಮತ್ತು ಅವರಿಗೆ ಅವರ ಕೃತ್ಯಗಳ ನಿಮಿತ್ತ ಯಾವುದಾದರೂ ವಿಪತ್ತು ತಟ್ಟಿದರೆ ಅವರು ನಿರಾಶರಾಗುತ್ತಾರೆ. info
التفاسير:

external-link copy
37 : 30

اَوَلَمْ یَرَوْا اَنَّ اللّٰهَ یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّ فِیْ ذٰلِكَ لَاٰیٰتٍ لِّقَوْمٍ یُّؤْمِنُوْنَ ۟

ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ತಾನಿಚ್ಛಿಸಿದವರಿಗೆ ಸೀಮಿತಗೊಳಿಸುತ್ತಾನೆಂಬುದನ್ನು ಅವರು ನೋಡಲಿಲ್ಲವೆ? ಇದರಲ್ಲೂ ವಿಶ್ವಾಸಿವಿರಿಸುವ ಜನರಿಗೆ ಹಲವಾರು ನಿದರ್ಶನಗಳಿವೆ. info
التفاسير:

external-link copy
38 : 30

فَاٰتِ ذَا الْقُرْبٰى حَقَّهٗ وَالْمِسْكِیْنَ وَابْنَ السَّبِیْلِ ؕ— ذٰلِكَ خَیْرٌ لِّلَّذِیْنَ یُرِیْدُوْنَ وَجْهَ اللّٰهِ ؗ— وَاُولٰٓىِٕكَ هُمُ الْمُفْلِحُوْنَ ۟

ಆದುದರಿಂದ ನೀವು ಆಪ್ತ ಸಂಬAಧಿಕರಿಗೂ, ನಿರ್ಗತಿಕರಿಗೂ ಮತ್ತು ಪ್ರಯಾಣಿಕರಿಗೂ ಅವರ ಹಕ್ಕನ್ನು ನೀಡಿರಿ. ಇದು ಅಲ್ಲಾಹನ ಸಂತುಷ್ಟತೆ ಬಯಸುವವನ ಪಾಲಿಗೆ ಉತ್ತಮವಾಗಿದೆ ಮತ್ತು ಇವರೇ ಯಶಸ್ಸು ಹೊಂದುವವರಾಗಿರುತ್ತಾರೆ. info
التفاسير:

external-link copy
39 : 30

وَمَاۤ اٰتَیْتُمْ مِّنْ رِّبًا لِّیَرْبُوَاۡ فِیْۤ اَمْوَالِ النَّاسِ فَلَا یَرْبُوْا عِنْدَ اللّٰهِ ۚ— وَمَاۤ اٰتَیْتُمْ مِّنْ زَكٰوةٍ تُرِیْدُوْنَ وَجْهَ اللّٰهِ فَاُولٰٓىِٕكَ هُمُ الْمُضْعِفُوْنَ ۟

ಅವರು ಸಂಪತ್ತುಗಳಿAದ ಅಭಿವೃದ್ಧಿ ಹೊಂದಲೆAದು ನೀವು ಬಡ್ಡಿಗೆ ಕೊಡುವುದೇನಿದ್ದರೂ ಅಲ್ಲಾಹನ ಬಳಿ ಅದು ಅಭಿವೃದ್ಧಿ ಹೊಂದಲಾರದು ಮತ್ತು ಅಲ್ಲಾಹನ ಸಂತೃಪ್ತಿ ಬಯಸಿ ಝಕಾತ್ ನೀಡಿದವರೇ ತಮ್ಮ ಸಂಪತ್ತನ್ನು ವೃದ್ಧಿಗೊಳಿಸುವವರಾಗಿದ್ದಾರೆ. info
التفاسير:

external-link copy
40 : 30

اَللّٰهُ الَّذِیْ خَلَقَكُمْ ثُمَّ رَزَقَكُمْ ثُمَّ یُمِیْتُكُمْ ثُمَّ یُحْیِیْكُمْ ؕ— هَلْ مِنْ شُرَكَآىِٕكُمْ مَّنْ یَّفْعَلُ مِنْ ذٰلِكُمْ مِّنْ شَیْءٍ ؕ— سُبْحٰنَهٗ وَتَعٰلٰى عَمَّا یُشْرِكُوْنَ ۟۠

ಅಲ್ಲಾಹನೆಂದರೇ ನಿಮ್ಮನ್ನು ಸೃಷ್ಟಿಸಿದವನು. ತರುವಾಯ ಜೀವನಾಧಾರ ನೀಡಿದವನು ಅನಂತರ ನಿಮಗೆ ಮರಣ ನೀಡುವವನು. ಆಮೇಲೆ ನಿಮ್ಮನ್ನು ಸಜೀವಗೊಳಿಸುವವನಾಗಿದ್ದಾನೆ. ಆದರೆ ಇವುಗಳಲ್ಲಿ ಯಾವುದನ್ನಾದರೂ ಮಾಡುವ ನಿಮ್ಮ ಸಹಭಾಗಿ ದೇವರುಗಳಲ್ಲಿ ಯಾರಾದರು ಇದ್ದಾರೆಯೇ? ಅವನು ಪರಮ ಪಾವನನು ಮತ್ತು ಇವರು ಮಾಡುತ್ತಿರುವ ಸಕಲ ಸಹಭಾಗಿತ್ವದಿಂದ ಅವನು ಮಹೋನ್ನತನಾಗಿರುವನು. info
التفاسير:

external-link copy
41 : 30

ظَهَرَ الْفَسَادُ فِی الْبَرِّ وَالْبَحْرِ بِمَا كَسَبَتْ اَیْدِی النَّاسِ لِیُذِیْقَهُمْ بَعْضَ الَّذِیْ عَمِلُوْا لَعَلَّهُمْ یَرْجِعُوْنَ ۟

ಜನರ ಕೈಗಳು ಎಸಗಿದ ದುಷ್ಕೃತ್ಯಗಳ ನಿಮಿತ್ತ ನೆಲದಲ್ಲೂ, ಕಡಲಲ್ಲೂ ಕ್ಷೆÆÃಭೆಯು ಹರಡಿಬಿಟ್ಟಿದೆ. ಇದು ಅವರು ಎಸಗಿದ ಕೃತ್ಯಗಳ ಫಲವನ್ನು ಅವರು ಸವಿಯಲೆಂದಾಗಿದೆ. ಅವರು ಮರಳಲೂಬಹುದು. info
التفاسير: