ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
45 : 21

قُلْ اِنَّمَاۤ اُنْذِرُكُمْ بِالْوَحْیِ ۖؗ— وَلَا یَسْمَعُ الصُّمُّ الدُّعَآءَ اِذَا مَا یُنْذَرُوْنَ ۟

ಹೇಳಿರಿ: ನಾನು ನಿನಗೆ ದಿವ್ಯ ಸಂದೇಶದ ಮೂಲಕ ಎಚ್ಚರಿಕೆ ನೀಡುತ್ತಿರುವೆನು. ಆದರೆ ಕಿವುಡರಿಗೆ ಎಚ್ಚರಿಕೆ ನೀಡಲಾದಾಗ ಕರೆಯನ್ನು ಕೇಳಿಸಿಕೊಳ್ಳಲಾರರು. info
التفاسير:

external-link copy
46 : 21

وَلَىِٕنْ مَّسَّتْهُمْ نَفْحَةٌ مِّنْ عَذَابِ رَبِّكَ لَیَقُوْلُنَّ یٰوَیْلَنَاۤ اِنَّا كُنَّا ظٰلِمِیْنَ ۟

ಮತ್ತು ಇವರಿಗೆ ನಿನ್ನ ಪ್ರಭುವಿನ ಯಾತನೆಯು ಅಲ್ಪವೂ ಸೊಂಕಿದರೆ ಅವರು ಅಯ್ಯೋ ನಮ್ಮ ದುರ್ಗತಿಯೇ, ನಿಜವಾಗಿಯು ನಾವು ಅಪರಾಧಿಗಳಾಗಿದ್ದೆವು ಎಂದು ಗೋಳಾಡುವರು. info
التفاسير:

external-link copy
47 : 21

وَنَضَعُ الْمَوَازِیْنَ الْقِسْطَ لِیَوْمِ الْقِیٰمَةِ فَلَا تُظْلَمُ نَفْسٌ شَیْـًٔا ؕ— وَاِنْ كَانَ مِثْقَالَ حَبَّةٍ مِّنْ خَرْدَلٍ اَتَیْنَا بِهَا ؕ— وَكَفٰی بِنَا حٰسِبِیْنَ ۟

ಪುನರುತ್ಥಾನದ ದಿನ ನಾವು ನ್ಯಾಯದ ತಕ್ಕಡಿಯನ್ನು ಇರಿಸುವೆವು. ಅ ಬಳಿಕ ಯಾರೊಂದಿಗೂ ಸ್ವಲ್ಪವು ಅನ್ಯಾಯ ಮಾಡಲಾಗದು ಕರ್ಮವು ಒಂದು ಸಾಸಿವೆಯ ಕಾಳಿನಷ್ಟಿದ್ದರೂ ನಾವದನ್ನು ಹಾಜರುಗೊಳಿಸುವೆವು, ಮತ್ತು ಲೆಕ್ಕ ಪರಿಶೋಧಕರಾಗಿ ನಾವೇ ಸಾಕು. info
التفاسير:

external-link copy
48 : 21

وَلَقَدْ اٰتَیْنَا مُوْسٰی وَهٰرُوْنَ الْفُرْقَانَ وَضِیَآءً وَّذِكْرًا لِّلْمُتَّقِیْنَ ۟ۙ

ನಾವು ಮೂಸಾ ಮತ್ತು ಹಾರೂನರಿಗೆ ಸತ್ಯಾಸತ್ಯತೆಯ ಮಾನದಂಡ ಪ್ರಕಾಶ ಹಾಗೂ ಭಯಭಕ್ತಿಯುಳ್ಳವರಿಗೆ ಸ್ಮರಣೆಯು ಆಗಿರುವಂತಹ ಗ್ರಂಥವನ್ನು ದಯಪಾಲಿಸಿರುತ್ತೇವೆ. info
التفاسير:

external-link copy
49 : 21

الَّذِیْنَ یَخْشَوْنَ رَبَّهُمْ بِالْغَیْبِ وَهُمْ مِّنَ السَّاعَةِ مُشْفِقُوْنَ ۟

ಅವರು ತಮ್ಮ ಪ್ರಭುವನ್ನು ಅಗೋಚರವಾಗಿ ಭಯ ಪಡುತ್ತಾರೆ ಮತ್ತು ಪ್ರಳಯ ದಿನದ ಬಗ್ಗೆ ಹೆದರುತ್ತಿರುತ್ತಾರೆ. info
التفاسير:

external-link copy
50 : 21

وَهٰذَا ذِكْرٌ مُّبٰرَكٌ اَنْزَلْنٰهُ ؕ— اَفَاَنْتُمْ لَهٗ مُنْكِرُوْنَ ۟۠

ಈ (ಕುರ್‌ಆನ್) ಅನುಗ್ರಹಿತ ಬೋಧನೆಯನ್ನು ನಾವೇ ಇಳಿಸಿರುತ್ತೇವೆ. ಹಾಗಿದ್ದೂ ನೀವದನ್ನು ನಿರಾಕರಿಸುವಿರಾ? info
التفاسير:

external-link copy
51 : 21

وَلَقَدْ اٰتَیْنَاۤ اِبْرٰهِیْمَ رُشْدَهٗ مِنْ قَبْلُ وَكُنَّا بِهٖ عٰلِمِیْنَ ۟ۚ

ನಿಶ್ಚಯವಾಗಿಯು ಇದಕ್ಕೆ ಮೊದಲು ನಾವು ಇಬ್ರಾಹೀಮರಿಗೆ ಸನ್ಮಾರ್ಗವನ್ನು ದಯಪಾಲಿಸಿದ್ದೆವು. ಮತ್ತು ನಾವು ಅವರ ಸ್ಥಿತಿಗತಿಯ ಬಗ್ಗೆ ನಿಖರ ಜ್ಞಾನವುಳ್ಳರಾಗಿದ್ದೆವು. info
التفاسير:

external-link copy
52 : 21

اِذْ قَالَ لِاَبِیْهِ وَقَوْمِهٖ مَا هٰذِهِ التَّمَاثِیْلُ الَّتِیْۤ اَنْتُمْ لَهَا عٰكِفُوْنَ ۟

ನೀವು ಭಕ್ತಾರಾಧನೆಯಲ್ಲಿ ಕುಳಿತಿರುವಂತಹ ಈ ವಿಗ್ರಹಗಳೇನು ? ಎಂದು ಇಬ್ರಾಹೀಮರವರು ತಮ್ಮ ತಂದೆ ಮತ್ತು ತಮ್ಮ ಜನಾಂಗದೊಡನೆ ಕೇಳಿದ ಸಂದರ್ಭನ್ನು ಸ್ಮರಿಸಿರಿ. info
التفاسير:

external-link copy
53 : 21

قَالُوْا وَجَدْنَاۤ اٰبَآءَنَا لَهَا عٰبِدِیْنَ ۟

ಅವರು ಉತ್ತರಿಸಿದರು: ನಮ್ಮ ಪೂರ್ವಿಕರು ಇವುಗಳನ್ನು ಪೂಜಿಸುತ್ತಿರುವುದಾಗಿ ನಾವು ಕಂಡಿರುವೆವು. info
التفاسير:

external-link copy
54 : 21

قَالَ لَقَدْ كُنْتُمْ اَنْتُمْ وَاٰبَآؤُكُمْ فِیْ ضَلٰلٍ مُّبِیْنٍ ۟

ಆಗ ಇಬ್ರಾಹೀಮರು ಹೇಳಿದರು: ನಿಶ್ಚಯವಾಗಿಯು ನೀವು ಮತ್ತು ನಿಮ್ಮ ಪೂರ್ವಿಕರು ಸ್ಪಷ್ಟ ಪಥಭ್ರಷ್ಟತೆಯಲ್ಲಿದ್ದೀರಿ. info
التفاسير:

external-link copy
55 : 21

قَالُوْۤا اَجِئْتَنَا بِالْحَقِّ اَمْ اَنْتَ مِنَ اللّٰعِبِیْنَ ۟

ಅವರು ಕೇಳಿದರು: ನೀನು ನಮ್ಮ ಬಳಿಗೆ ಸತ್ಯವನ್ನು ತಂದಿರುವೆಯಾ? ಅಥವಾ ಅಪಹಾಸ್ಯ ಮಾಡುತ್ತಿರುವೆಯಾ? info
التفاسير:

external-link copy
56 : 21

قَالَ بَلْ رَّبُّكُمْ رَبُّ السَّمٰوٰتِ وَالْاَرْضِ الَّذِیْ فَطَرَهُنَّ ۖؗ— وَاَنَا عَلٰی ذٰلِكُمْ مِّنَ الشّٰهِدِیْنَ ۟

ಅವರು ಹೇಳಿದರು: ಅಲ್ಲ, ವಾಸ್ತವದಲ್ಲಿ ನಿಮ್ಮ ಪ್ರಭು ಭೂಮಿ, ಆಕಾಶಗಳ ಒಡೆಯನಾಗಿದ್ದಾನೆ. ಅವನು ಅವುಗಳನ್ನು ಸೃಷ್ಟಿಸಿದನು ನಾನು ಇದರ ಮೇಲೆ ಸಾಕ್ಷಿ ನೀಡುತ್ತೇನೆ. info
التفاسير:

external-link copy
57 : 21

وَتَاللّٰهِ لَاَكِیْدَنَّ اَصْنَامَكُمْ بَعْدَ اَنْ تُوَلُّوْا مُدْبِرِیْنَ ۟

ಅಲ್ಲಾಹನ ಆಣೆ, ನೀವು ಹಿಂತಿರುಗಿ ಹೋದ ಬಳಿಕ ನಿಮ್ಮ ವಿಗ್ರಹಗಳೊಂದಿಗೆ ನಾನೊಂದು ತಂತ್ರವನ್ನು ಪ್ರಯೋಗಿಸುವೆನು. info
التفاسير: