ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
88 : 20

فَاَخْرَجَ لَهُمْ عِجْلًا جَسَدًا لَّهٗ خُوَارٌ فَقَالُوْا هٰذَاۤ اِلٰهُكُمْ وَاِلٰهُ مُوْسٰی ۚۙ۬— فَنَسِیَ ۟ؕ

ಅನಂತರ ಅವನು ಅವರಿಗೋಸ್ಕರ ಒಂದು ಕರುವಿನ ಪ್ರತಿಮೆಯನ್ನು ಹೊರ ತಂದನು. ಅದರಿಂದ ದನದಂತಹ ಶಬ್ದವೂ ಹೊರಡುತ್ತಿತ್ತು. ಅನಂತರ ಸಾಮಿರಿಯ ಅನುಯಾಯಿಗಳು ಇದುವೇ ನಿಮ್ಮ ದೇವರು, ಮೂಸಾನ ದೇವರು. ಆದರೆ ಮೂಸಾ ಮರೆತುಬಿಟ್ಟಿದ್ದಾರೆ ಎಂದನು. info
التفاسير:

external-link copy
89 : 20

اَفَلَا یَرَوْنَ اَلَّا یَرْجِعُ اِلَیْهِمْ قَوْلًا ۙ۬— وَّلَا یَمْلِكُ لَهُمْ ضَرًّا وَّلَا نَفْعًا ۟۠

ಅದು ಅವರ ಮಾತಿಗೆ ಯಾವ ಉತ್ತರವನ್ನು ನೀಡಲಾರದೆಂದೂ, ಅದು ಅವರಿಗೆ ಯಾವುದೇ ಹಾನಿಯನ್ನಾಗಲೀ, ಲಾಭವನ್ನಾಗಲೀ ಕೊಡುವ ಅಧಿಕಾರ ಹೊಂದಿಲ್ಲವೆAದು ಈ ಪಥಭ್ರಷ್ಟರು ಕಾಣುವುದಿಲ್ಲವೇ? info
التفاسير:

external-link copy
90 : 20

وَلَقَدْ قَالَ لَهُمْ هٰرُوْنُ مِنْ قَبْلُ یٰقَوْمِ اِنَّمَا فُتِنْتُمْ بِهٖ ۚ— وَاِنَّ رَبَّكُمُ الرَّحْمٰنُ فَاتَّبِعُوْنِیْ وَاَطِیْعُوْۤا اَمْرِیْ ۟

ಹಾರೂನ್‌ರವರು (ಮೂಸ ಬರುವುದಕ್ಕಿಂತ) ಮೊದಲೇ ಅವರಿಗೆ ಹೇಳಿದ್ದರು: ಓ ನನ್ನ ಜನಾಂಗವೇ, ನೀವು ಈ ಕರುವಿನ ಮೂಲಕ ಪರೀಕ್ಷೆಗೊಳಗಾಗಿರುವಿರಿ. ನಿಶ್ಚಯವಾಗಿಯು ನಿಮ್ಮ ನೈಜ ಪ್ರಭು ಪರಮ ದಯಾಮಯನಾದ ಅಲ್ಲಾಹನಾಗಿದ್ದಾನೆ. ಆದ್ದರಿಂದ ನೀವೆಲ್ಲರೂ ನನ್ನನ್ನು ಅನುಸರಿಸಿರಿ ಮತ್ತು ನನ್ನ ಆದೇಶವನ್ನು ಪಾಲಿಸಿರಿ. info
التفاسير:

external-link copy
91 : 20

قَالُوْا لَنْ نَّبْرَحَ عَلَیْهِ عٰكِفِیْنَ حَتّٰی یَرْجِعَ اِلَیْنَا مُوْسٰی ۟

ಅವರು ಉತ್ತರ ನೀಡಿದರು: ಮೂಸಾ ನಮ್ಮೆಡೆಗೆ ಮರಳಿ ಬರುವವರೆಗೆ ನಾವು ಇದರ ಆರಾಧನೆಯನ್ನೇ ಮಾಡುತ್ತಿರುವೆವು. info
التفاسير:

external-link copy
92 : 20

قَالَ یٰهٰرُوْنُ مَا مَنَعَكَ اِذْ رَاَیْتَهُمْ ضَلُّوْۤا ۟ۙ

92&93 info
التفاسير:

external-link copy
93 : 20

اَلَّا تَتَّبِعَنِ ؕ— اَفَعَصَیْتَ اَمْرِیْ ۟

ಮೂಸಾ ಕೇಳಿದರು: ಓ ಹಾರೂನ್, ಇವರು ಮಾರ್ಗಭ್ರಷ್ಟರಾಗುತ್ತಿರುವುದನ್ನು ಕಂಡಾಗ ನನ್ನ ಅನುಸರಣೆ ಮಾಡದಂತೆ ನಿನ್ನನ್ನು ತಡೆದಿದ್ದಾದರೂ ಏನು? ನೀನು ಸಹ ನನ್ನ ಆದೇಶವನ್ನು ಧಿಕ್ಕರಿಸಿ ಬಿಟ್ಟೆಯಾ? info
التفاسير:

external-link copy
94 : 20

قَالَ یَبْنَؤُمَّ لَا تَاْخُذْ بِلِحْیَتِیْ وَلَا بِرَاْسِیْ ۚ— اِنِّیْ خَشِیْتُ اَنْ تَقُوْلَ فَرَّقْتَ بَیْنَ بَنِیْۤ اِسْرَآءِیْلَ وَلَمْ تَرْقُبْ قَوْلِیْ ۟

ಹಾರೂನ್ ಹೇಳಿದರು: ಓ ನನ್ನ ತಾಯಿಯ ಪುತ್ರನೇ, ನೀನು ನನ್ನ ಗಡ್ಡವನ್ನು, ತಲೆಗೂದಲನ್ನು ಹಿಡಿದು ಎಳೆಯಬೇಡ, ನೀನು ಇಸ್ರಾಯೀಲ್ ಸಂತತಿಗಳ ನಡುವೆ ಒಡಕುಂಟು ಮಾಡಿದೆ ಮತ್ತು ನನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂದು ನೀನು ಹೇಳಬಹುದೆಂದು ನಾನು ಭಯಪಟ್ಟೆ. info
التفاسير:

external-link copy
95 : 20

قَالَ فَمَا خَطْبُكَ یٰسَامِرِیُّ ۟

ಮೂಸಾ ಕೇಳಿದರು: ಓ ಸಾಮಿರಿ, ನಿನ್ನ ಸಮಾಚಾರವೇನು? info
التفاسير:

external-link copy
96 : 20

قَالَ بَصُرْتُ بِمَا لَمْ یَبْصُرُوْا بِهٖ فَقَبَضْتُ قَبْضَةً مِّنْ اَثَرِ الرَّسُوْلِ فَنَبَذْتُهَا وَكَذٰلِكَ سَوَّلَتْ لِیْ نَفْسِیْ ۟

ಅವನು ಉತ್ತರಿಸಿದನು: ಅವರಿಗೆ ಕಾಣದಂತಹ ವಸ್ತುವೊಂದು ನನಗೆ ಕಂಡಿತು. ಆಗ ನಾನು ದೇವದೂತರ ಹೆಜ್ಜೆ ಗುರಿತಿನಿಂದ ಒಂದು ಹಿಡಿ ಮಣ್ಣನ್ನು ಮುಷ್ಠಿಯಲ್ಲಿ ತೆಗೆದುಕೊಂಡು ಅದರಲ್ಲಿ ಹಾಕಿ ಬಿಟ್ಟೆನು.ಹೀಗೆ ನನ್ನ ಮನಸ್ಸು ನನಗೆ ಇದನ್ನು ಸುಂದರವಾಗಿ ತೋರಿಸಿತು. info
التفاسير:

external-link copy
97 : 20

قَالَ فَاذْهَبْ فَاِنَّ لَكَ فِی الْحَیٰوةِ اَنْ تَقُوْلَ لَا مِسَاسَ ۪— وَاِنَّ لَكَ مَوْعِدًا لَّنْ تُخْلَفَهٗ ۚ— وَانْظُرْ اِلٰۤی اِلٰهِكَ الَّذِیْ ظَلْتَ عَلَیْهِ عَاكِفًا ؕ— لَنُحَرِّقَنَّهٗ ثُمَّ لَنَنْسِفَنَّهٗ فِی الْیَمِّ نَسْفًا ۟

ಅವರು ಹೇಳಿದರು: ಹಾಗಾದರೆ ಇಲ್ಲಿಂದ ಹೊರಟು ಹೋಗು. ಐಹಿಕ ಜೀವನದ ನಿನ್ನ ಶಿಕ್ಷೆಯು ಜೀವನವಿಡೀ ನನ್ನನ್ನು ಮುಟ್ಟಬೇಡಿ ಎಂದು ಹೇಳುತ್ತಿರುವುದಾಗಿದೆ ಮತ್ತು ನಿನಗೆ ಇನ್ನೊಂದು ವಾಗ್ದತ್ತ ಸಮಯವೂ ಇದೆ.ಅದು ನಿನ್ನಿಂದ ಎಂದೂ ತಪ್ಪಿಹೋಗದು. ಮತ್ತು ನೀನು ಪೂಜೆಯಲ್ಲಿ ನಿರತನಾಗುತ್ತಿದ್ದ ಆ ನಿನ್ನ ಆರಾಧ್ಯ ದೇವತೆಯನ್ನೂ ನೋಡು. ನಾವದನ್ನು ಸುಟ್ಟು ಬಿಡುವೆವು ಆ ಬಳಿಕ ಅದರ ಬೂದಿಯನ್ನು ಸಮುದ್ರದಲ್ಲಿ ಹಾರಿಸಿ ಬಿಡುವೆವು. info
التفاسير:

external-link copy
98 : 20

اِنَّمَاۤ اِلٰهُكُمُ اللّٰهُ الَّذِیْ لَاۤ اِلٰهَ اِلَّا هُوَ ؕ— وَسِعَ كُلَّ شَیْءٍ عِلْمًا ۟

ವಾಸ್ತವದಲ್ಲಿ ನಿಮ್ಮ ನೈಜ ಆರಾಧ್ಯ ಕೇವಲ ಅಲ್ಲಾಹನಾಗಿದ್ದಾನೆ. ಅವನ ಹೊರತು ಇನ್ನಾವ ಆರಾಧ್ಯನಿಲ್ಲ. ಅವನ ಜ್ಞಾನವು ಸಕಲ ವಸ್ತುಗಳನ್ನು ವ್ಯಾಪಿಸಿಕೊಂಡಿದೆ. info
التفاسير: