ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
43 : 16

وَمَاۤ اَرْسَلْنَا مِنْ قَبْلِكَ اِلَّا رِجَالًا نُّوْحِیْۤ اِلَیْهِمْ فَسْـَٔلُوْۤا اَهْلَ الذِّكْرِ اِنْ كُنْتُمْ لَا تَعْلَمُوْنَ ۟ۙ

ನಾವು ನಿಮಗಿಂತ ಮೊದಲು ಪುರುಷರನ್ನೇ ಸಂದೇಶವಾಹಕರನ್ನಾಗಿ ಕಳುಹಿಸುತ್ತಿದ್ದೆವು. ಅವರೆಡೆಗೆ ನಾವು ದಿವ್ಯವಾಣಿ ಅವತೀರ್ಣಗೊಳಿಸುತ್ತಿದ್ದೆವು. ಇನ್ನು ನಿಮಗೆ ಅರಿವಿಲ್ಲದಿದ್ದರೆ ಜ್ಞಾನಿಗಳೊಡನೆ ವಿಚಾರಿಸಿರಿ. info
التفاسير:

external-link copy
44 : 16

بِالْبَیِّنٰتِ وَالزُّبُرِ ؕ— وَاَنْزَلْنَاۤ اِلَیْكَ الذِّكْرَ لِتُبَیِّنَ لِلنَّاسِ مَا نُزِّلَ اِلَیْهِمْ وَلَعَلَّهُمْ یَتَفَكَّرُوْنَ ۟

ಗತ ಪೈಗಂಬರರನ್ನು ನಾವು ಪುರಾವೆ ಮತ್ತು ಗ್ರಂಥಗಳೊAದಿಗೆ ಕಳುಹಿಸಿದೆವು ಮತ್ತು ಈ ಕುರ್‌ಆನನ್ನು ನಾವು ನಿಮ್ಮೆಡೆಗೆ ಅವತೀರ್ಣಗೊಳಿಸಿರುತ್ತೇವೆ. ಜನರಿಗಾಗಿ ಅವತೀರ್ಣಗೊಳಿಸಲಾ ಗಿರುವುದನ್ನು ನೀವು ಅವರಿಗೆ ಸ್ಪಷ್ಟವಾಗಿ ವಿವರಿಸಿಕೊಡುವ ಮತ್ತು ಅವರು ಚಿಂತಿಸುವ ಸಲುವಾಗಿ. info
التفاسير:

external-link copy
45 : 16

اَفَاَمِنَ الَّذِیْنَ مَكَرُوا السَّیِّاٰتِ اَنْ یَّخْسِفَ اللّٰهُ بِهِمُ الْاَرْضَ اَوْ یَاْتِیَهُمُ الْعَذَابُ مِنْ حَیْثُ لَا یَشْعُرُوْنَ ۟ۙ

(ಪೈಗಂಬರರನ್ನು ಸಂಕಷ್ಟಕ್ಕೀಡು ಮಾಡಲು) ದುಷ್ಟ ತಂತ್ರವನ್ನು ಹೂಡುತ್ತಿರುವವರು ಅಲ್ಲಾಹನು ತಮ್ಮನ್ನು ಭೂಮಿಯೊಳಗೆ ಹೂತು ಬಿಡಬಹುದು ಅಥವಾ ಅನಿರೀಕ್ಷಿತವಾಗಿ ತಮ್ಮೆಡೆಗೆ ಶಿಕ್ಷೆಯು ಎರಗಿಸಿಬಿಡಬಹುದೆಂಬ ವಿಚಾರದಿಂದ ನಿರ್ಭೀತರಾಗಿರುವರೇ? info
التفاسير:

external-link copy
46 : 16

اَوْ یَاْخُذَهُمْ فِیْ تَقَلُّبِهِمْ فَمَا هُمْ بِمُعْجِزِیْنَ ۟ۙ

ಅಥವಾ ಅವರು ನಡೆದಾಡುತ್ತಿರುವಾಗ ಹಿಡಿದು ಬಿಡಬಹುದೆಂಬ ವಿಚಾರದಿಂದ (ನಿರ್ಭೀತರಾಗಿರುವರೇ?) ಮತ್ತು ಅವರು ಅಲ್ಲಾಹನನ್ನು ಸೋಲಿಸಲಾರರು. info
التفاسير:

external-link copy
47 : 16

اَوْ یَاْخُذَهُمْ عَلٰی تَخَوُّفٍ ؕ— فَاِنَّ رَبَّكُمْ لَرَءُوْفٌ رَّحِیْمٌ ۟

ಅಥವಾ ಅವರು ಭಯಭೀತರಾಗಿರುವ ಸ್ಥಿತಿಯಲ್ಲಿ ಹಿಡಿದು ಬಿಡಬಹುದೆಂಬ ವಿಚಾರದಿಂದ. (ನಿರ್ಭೀತರಾಗಿರುವರೇ?) ನಿಜವಾಗಿಯು ನಿಮ್ಮ ಪ್ರಭುವು ಮಹಾ ದಯಾಮಯನು, ಕರುಣಾನಿಧಿಯು ಆಗಿರುತ್ತಾನೆ. info
التفاسير:

external-link copy
48 : 16

اَوَلَمْ یَرَوْا اِلٰی مَا خَلَقَ اللّٰهُ مِنْ شَیْءٍ یَّتَفَیَّؤُا ظِلٰلُهٗ عَنِ الْیَمِیْنِ وَالشَّمَآىِٕلِ سُجَّدًا لِّلّٰهِ وَهُمْ دٰخِرُوْنَ ۟

ಅಲ್ಲಾಹನು ಸೃಷ್ಟಿಸಿರುವ ವಸ್ತುಗಳ ನೆರಳು ಬಲಕ್ಕೂ, ಎಡಕ್ಕೂ ಬಾಗಿ ವಿನಮ್ರತೆಯಿಂದ ಅಲ್ಲಾಹನ ಮುಂದೆ ಸಾಷ್ಟಾಂಗವೆರಗುತ್ತಿರುವುದನ್ನು ಅವರು ನೋಡಲಿಲ್ಲವೇ? info
التفاسير:

external-link copy
49 : 16

وَلِلّٰهِ یَسْجُدُ مَا فِی السَّمٰوٰتِ وَمَا فِی الْاَرْضِ مِنْ دَآبَّةٍ وَّالْمَلٰٓىِٕكَةُ وَهُمْ لَا یَسْتَكْبِرُوْنَ ۟

ಭೂಮಿಯಲ್ಲಿಯು, ಆಕಾಶಗಳಲ್ಲಿಯು, ಇರುವ ಜೀವಿಗಳೆಲ್ಲವೂ ಅಲ್ಲಾಹನಿಗೆ ಸಾಷ್ಟಾಂಗವೆರಗುತ್ತವೆ ಮತ್ತು ಮಲಕ್‌ಗಳೆÉಲ್ಲರೂ ಸಹ ಮತ್ತು ಅವರು ಅಹಂಭಾವ ತೋರಿಸುವುದಿಲ್ಲ. info
التفاسير:

external-link copy
50 : 16

یَخَافُوْنَ رَبَّهُمْ مِّنْ فَوْقِهِمْ وَیَفْعَلُوْنَ مَا یُؤْمَرُوْنَ ۟

ತಮ್ಮ ಮೇಲಿರುವ ತಮ್ಮ ಪ್ರಭುವನ್ನು ಅವರು ಭಯಪಡುತ್ತಾರೆ ಹಾಗೂ ತಮಗೆ ಆಜ್ಞಾಪಿಸಲಾದಂತೆ ಅವರು ಕಾರ್ಯ ನಿರ್ವಹಿಸುತ್ತಾರೆ. info
التفاسير:

external-link copy
51 : 16

وَقَالَ اللّٰهُ لَا تَتَّخِذُوْۤا اِلٰهَیْنِ اثْنَیْنِ ۚ— اِنَّمَا هُوَ اِلٰهٌ وَّاحِدٌ ۚ— فَاِیَّایَ فَارْهَبُوْنِ ۟

ಅಲ್ಲಾಹನು ಹೇಳುತ್ತಾನೆ: ನೀವು ಎರಡೆರಡು ಆರಾಧ್ಯರನ್ನು ಮಾಡಿಕೊಳ್ಳಬೇಡಿರಿ. ಆರಾಧ್ಯನಂತು ಕೇವಲ ಏಕೈಕನು ಮಾತ್ರ. ಆದ್ದರಿಂದ ನೀವು ನನ್ನನ್ನು ಮಾತ್ರ ಭಯಪಡಿರಿ. info
التفاسير:

external-link copy
52 : 16

وَلَهٗ مَا فِی السَّمٰوٰتِ وَالْاَرْضِ وَلَهُ الدِّیْنُ وَاصِبًا ؕ— اَفَغَیْرَ اللّٰهِ تَتَّقُوْنَ ۟

ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಆಗಿದೆ ಮತ್ತು ಅವನದೇ ಅನುಸರಣೆಯು ಕಡ್ಡಾಯವಾಗಿರುತ್ತದೆ. ಹಾಗಿದ್ದೂ ನೀವು ಅಲ್ಲಾಹನನ್ನು ಬಿಟ್ಟು ಇತರರನ್ನು ಭಯಪಡುತ್ತಿರುವಿರಾ? info
التفاسير:

external-link copy
53 : 16

وَمَا بِكُمْ مِّنْ نِّعْمَةٍ فَمِنَ اللّٰهِ ثُمَّ اِذَا مَسَّكُمُ الضُّرُّ فَاِلَیْهِ تَجْـَٔرُوْنَ ۟ۚ

ನಿಮ್ಮ ಬಳಿಯಿರುವ ಪ್ರತಿಯೊಂದು ಅನುಗ್ರಹವು ಅಲ್ಲಾಹನಿಂದಲೇ ದೊರೆತಿದೆ ಮತ್ತು ನಿಮಗೆ ಯಾವುದಾದರು ವಿಪತ್ತು ಬಾಧಿಸಿದರೆ ಅವನೆಡೆಗೇ ನೀವು ಮೊರೆ ಹೋಗುತ್ತಿರಿ. info
التفاسير:

external-link copy
54 : 16

ثُمَّ اِذَا كَشَفَ الضُّرَّ عَنْكُمْ اِذَا فَرِیْقٌ مِّنْكُمْ بِرَبِّهِمْ یُشْرِكُوْنَ ۟ۙ

ಆದರೆ ಅವನು ನಿಮ್ಮಿಂದ ಆ ಸಂಕಷ್ಟವನ್ನು ನೀಗಿಸಿದಾಗ ನಿಮ್ಮಲ್ಲಿನ ಒಂದು ವಿಭಾಗ ತಮ್ಮ ಪ್ರಭುವಿನೊಂದಿಗೆ ಕೂಡಲೇ ಸಹಭಾಗಿತ್ವವನ್ನು ಕಲ್ಪಿಸತೊಡಗುತ್ತದೆ. info
التفاسير: