ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

ߞߐߜߍ ߝߙߍߕߍ:close

external-link copy
19 : 14

اَلَمْ تَرَ اَنَّ اللّٰهَ خَلَقَ السَّمٰوٰتِ وَالْاَرْضَ بِالْحَقِّ ؕ— اِنْ یَّشَاْ یُذْهِبْكُمْ وَیَاْتِ بِخَلْقٍ جَدِیْدٍ ۟ۙ

ಅಲ್ಲಾಹನು ಆಕಾಶಗಳನ್ನು ಮತ್ತು ಭೂಮಿಯನ್ನು ಅತ್ಯುತ್ತಮ ಯೋಜನೆಯೊಂದಿಗೆ ಸೃಷ್ಟಿಸಿರುತ್ತಾನೆ ಎಂದು ನೀವು ನೋಡಿಲ್ಲವೇ? ಅವನಿಚ್ಛಿಸಿದರೆ ನಿಮ್ಮನ್ನು ಅಳಿಸಿ ಒಂದು ಹೊಸ ಸೃಷ್ಟಿಯನ್ನು ತರಬಲ್ಲನು. info
التفاسير:

external-link copy
20 : 14

وَّمَا ذٰلِكَ عَلَی اللّٰهِ بِعَزِیْزٍ ۟

ಇದು ಅಲ್ಲಾಹನ ಮೇಲೆ ಒಂದಿಷÀÄ್ಟ ಕಷÀ್ಟಕರ ಕಾರ್ಯವಲ್ಲ. info
التفاسير:

external-link copy
21 : 14

وَبَرَزُوْا لِلّٰهِ جَمِیْعًا فَقَالَ الضُّعَفٰٓؤُا لِلَّذِیْنَ اسْتَكْبَرُوْۤا اِنَّا كُنَّا لَكُمْ تَبَعًا فَهَلْ اَنْتُمْ مُّغْنُوْنَ عَنَّا مِنْ عَذَابِ اللّٰهِ مِنْ شَیْءٍ ؕ— قَالُوْا لَوْ هَدٰىنَا اللّٰهُ لَهَدَیْنٰكُمْ ؕ— سَوَآءٌ عَلَیْنَاۤ اَجَزِعْنَاۤ اَمْ صَبَرْنَا مَا لَنَا مِنْ مَّحِیْصٍ ۟۠

ಸಕಲರೂ ಅಲ್ಲಾಹನ ಮುಂದೆ ಹಾಜರಾಗುವರು. ಆಗ ದುರ್ಬಲರು ಅಹಂಕಾರಿಗಳಾಗಿದ್ದವರೊAದಿಗೆ ಹೇಳುವರು; ನಾವಂತೂ ನಿಮ್ಮ ಅನುಯಾಯಿಗಳಾಗಿದ್ದೆವು ಆದ್ದರಿಂದ ಅಲ್ಲಾಹನ ಯಾತನೆಯಿಂದ ರಕ್ಷಿಸಲಿಕ್ಕಾಗಿ ನೀವು ಏನಾದರೂ ಮಾಡಬಲ್ಲಿರಾ? ಅವರು ಉತ್ತರ ನೀಡುವವರು; ಅಲ್ಲಾಹನು ನಮ್ಮನ್ನು ಸನ್ಮಾರ್ಗಕ್ಕೆ ಮುನ್ನಡೆಸುತ್ತಿದ್ದರೆ ಖಂಡಿತ ನಾವು ನಿಮಗೆ ಮಾರ್ಗದರ್ಶನ ನೀಡುತ್ತಿದ್ದೆವು. ಇನ್ನು ನಾವು ಕೂಗಾಡಿದರು ಅಥವ ಸಹನೆ ವಹಿಸಿದರೂ ಸಮಾನವಾಗಿದೆ. ನಮಗೆ ಪಾರಾಗುವ ಯಾವುದೇ ಮಾರ್ಗವಿಲ್ಲ. info
التفاسير:

external-link copy
22 : 14

وَقَالَ الشَّیْطٰنُ لَمَّا قُضِیَ الْاَمْرُ اِنَّ اللّٰهَ وَعَدَكُمْ وَعْدَ الْحَقِّ وَوَعَدْتُّكُمْ فَاَخْلَفْتُكُمْ ؕ— وَمَا كَانَ لِیَ عَلَیْكُمْ مِّنْ سُلْطٰنٍ اِلَّاۤ اَنْ دَعَوْتُكُمْ فَاسْتَجَبْتُمْ لِیْ ۚ— فَلَا تَلُوْمُوْنِیْ وَلُوْمُوْۤا اَنْفُسَكُمْ ؕ— مَاۤ اَنَا بِمُصْرِخِكُمْ وَمَاۤ اَنْتُمْ بِمُصْرِخِیَّ ؕ— اِنِّیْ كَفَرْتُ بِمَاۤ اَشْرَكْتُمُوْنِ مِنْ قَبْلُ ؕ— اِنَّ الظّٰلِمِیْنَ لَهُمْ عَذَابٌ اَلِیْمٌ ۟

ಕಾರ್ಯವು ತೀರ್ಮಾನಿಸಲ್ಪಟ್ಟಾಗ ಶೈತಾನನು ಹೇಳುವನು; ಖಂಡಿತ ಅಲ್ಲಾಹನು ನಿಮಗೆ ಸತ್ಯವಾದ ವಾಗ್ದಾನವನ್ನು ಮಾಡಿದ್ದನು. ಮತ್ತು ನಾನು ನಿಮಗೆ ವಾಗ್ದಾನಗಳನ್ನು ಮಾಡಿದ್ದೆನು. ಆದರೆ ಅದನ್ನು ಉಲ್ಲಂಘಿಸಿಬಿಟ್ಟಿರುವೆನು. ನಿಮ್ಮ ಮೇಲೆ ನನ್ನ ಯಾವುದೇ ಒತ್ತಡ ಇರಲಿಲ.್ಲ ಹೌದು ನಾನು ನಿಮ್ಮನ್ನು ಕರೆದೆನು ಮತ್ತೆ ನೀವು ನನ್ನ ಕರೆಗೆ ಓಗೊಟ್ಟಿರಿ. ಆದ್ದರಿಂದ ನೀವು ನನ್ನನ್ನು ಆಕ್ಷೇಪಿಸಬೇಡಿರಿ. ಸ್ವತಃ ನಿಮ್ಮನ್ನೇ ಆಕ್ಷೇಪಿಸಿಕೊಳ್ಳಿರಿ ನಾನೂ ನಿಮಗೆ ನೆರವು ನೀಡಲಾರೆ. ಇದಕ್ಕೆ ಮೊದಲು ನೀವು ನನ್ನನ್ನು ಅಲ್ಲಾಹನ ಸಹಭಾಗಿಯನ್ನಾಗಿ ನಿಶ್ಚಯಿಸಿದ್ದನ್ನು ನಾನು ನಿರಾಕರಿಸುತ್ತೇನೆ. ಖಂಡಿತವಾಗಿಯೂ ಅಕ್ರಮಿಗಳಿಗೆ ವೇದನಾಜನಕ ಯಾತನೆ ಇರುವುದು. info
التفاسير:

external-link copy
23 : 14

وَاُدْخِلَ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَا بِاِذْنِ رَبِّهِمْ ؕ— تَحِیَّتُهُمْ فِیْهَا سَلٰمٌ ۟

ಸತ್ಯ ವಿಶ್ವಾಸವನ್ನಿರಿಸಿ ಸತ್ಕರ್ಮಗಳನ್ನು ಎಸಗುವವರು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳೊಳಗೆ ಪ್ರವೇಶಿಸಲಾಗುವರು. ಅಲ್ಲಿ ಅವರು ಅವರ ಪ್ರಭುವಿನ ಅಪ್ಪಣೆಯಿಂದ ಸದಾ ವಾಸಿಸುವರು. ಅಲ್ಲಿ ಅವರ ಸ್ವಾಗತ ಕೋರುವಿಕೆಯು ಸಲಾಮ್(ಶಾಂತಿ) ಎಂದಾಗಿರುವುದು. info
التفاسير:

external-link copy
24 : 14

اَلَمْ تَرَ كَیْفَ ضَرَبَ اللّٰهُ مَثَلًا كَلِمَةً طَیِّبَةً كَشَجَرَةٍ طَیِّبَةٍ اَصْلُهَا ثَابِتٌ وَّفَرْعُهَا فِی السَّمَآءِ ۟ۙ

ಅಲ್ಲಾಹನು ಪವಿತ್ರ ವಚನದ ಉಪಮೆಯನ್ನು ಹೇಗೆ ಕೊಟ್ಟಿರುವನೆಂದು ನೀವು ನೋಡಿಲ್ಲವೆ? ಒಂದು ಉತ್ತಮವಾದ ಮರದಂತೆ; ಅದರ ಬೇರುಗಳು ಬಲಿಷÀ್ಠವಾಗಿವೆ ಮತ್ತು ಅದರ ಕೊಂಬೆಗಳು ಆಕಾಶಕ್ಕೇರಿವೆ. info
التفاسير: