[1] ಒಮ್ಮೆ ಒಂದು ಯುದ್ಧದಿಂದ ಹಿಂದಿರುಗಿ ಬರುವಾಗ ಒಬ್ಬ ಮುಹಾಜಿರ್ ಮತ್ತು ಅನ್ಸಾರನ ನಡುವೆ ಜಗಳವಾಯಿತು. ಇಬ್ಬರೂ ತಮ್ಮ ತಮ್ಮ ಜನರನ್ನು ಸಹಾಯಕ್ಕೆ ಕರೆದರು. ಆಗ ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಅನ್ಸಾರರನ್ನು ಕರೆದು, “ನೋಡಿ, ನೀವು ಅವರಿಗೆ ಸಹಾಯ ಮಾಡಿದ್ದೀರಿ. ಈಗ ಅದರ ಫಲಿತಾಂಶವೇನಾಯಿತೆಂದು ನೋಡಿ. ಅವರು ನಿಮ್ಮ ವಿರುದ್ಧ ಅವರ ಜನರನ್ನು ಕರೆಯುತ್ತಿದ್ದಾರೆ.” ನಂತರ ಆತ ಹೇಳಿದ: “ಇದಕ್ಕಿರುವ ಮದ್ದೇನೆಂದರೆ ಅವರಿಗೆ ಖರ್ಚು ಮಾಡುವುದನ್ನು ನೀವು ನಿಲ್ಲಿಸಬೇಕು. ಆಗ ಅವರ ಸ್ವಯಂ ಸರಿದಾರಿಗೆ ಬರುತ್ತಾರೆ.”
[1] ಇದು ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಹೇಳಿದ ಮಾತು. ಅವನ ಪ್ರಕಾರ ಅವನು ಮತ್ತು ಅವನ ಅನುಯಾಯಿಗಳು ಪ್ರತಿಷ್ಠಿತರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮತ್ತು ಅವರ ಅನುಯಾಯಿಗಳು ದೀನರು.