पवित्र कुरअानको अर्थको अनुवाद - कन्नड अनुवाद : हमजा बेतुर ।

ಅರ್‍ರಹ್ಮಾನ್

external-link copy
1 : 55

اَلرَّحْمٰنُ ۟ۙ

ಪರಮ ದಯಾಳು. info
التفاسير:

external-link copy
2 : 55

عَلَّمَ الْقُرْاٰنَ ۟ؕ

ಕುರ್‌ಆನನ್ನು ಕಲಿಸಿದನು. info
التفاسير:

external-link copy
3 : 55

خَلَقَ الْاِنْسَانَ ۟ۙ

ಮನುಷ್ಯನನ್ನು ಸೃಷ್ಟಿಸಿದನು. info
التفاسير:

external-link copy
4 : 55

عَلَّمَهُ الْبَیَانَ ۟

ಅವನಿಗೆ ಮಾತನಾಡಲು ಕಲಿಸಿದನು. info
التفاسير:

external-link copy
5 : 55

اَلشَّمْسُ وَالْقَمَرُ بِحُسْبَانٍ ۟ۙ

ಸೂರ್ಯ ಮತ್ತು ಚಂದ್ರ (ನಿಶ್ಚಿತ) ಗಣನೆಯಲ್ಲಿವೆ. info
التفاسير:

external-link copy
6 : 55

وَّالنَّجْمُ وَالشَّجَرُ یَسْجُدٰنِ ۟

ಸಸ್ಯಗಳು ಮತ್ತು ಮರಗಳು (ಅಲ್ಲಾಹನಿಗೆ) ಸಾಷ್ಟಾಂಗ ಮಾಡುತ್ತಿವೆ. info
التفاسير:

external-link copy
7 : 55

وَالسَّمَآءَ رَفَعَهَا وَوَضَعَ الْمِیْزَانَ ۟ۙ

ಅವನು ಆಕಾಶವನ್ನು ಎತ್ತರಕ್ಕೇರಿಸಿದನು ಮತ್ತು ತಕ್ಕಡಿಯನ್ನು ಸ್ಥಾಪಿಸಿದನು.[1] info

[1] ಅಂದರೆ ಭೂಮಿಯಲ್ಲಿ ನ್ಯಾಯವನ್ನು ಸ್ಥಾಪಿಸಿದನು. ನ್ಯಾಯದಿಂದ ವ್ಯವಹರಿಸುವಂತೆ ಮನುಷ್ಯರಿಗೆ ಆಜ್ಞಾಪಿಸಿದನು.

التفاسير:

external-link copy
8 : 55

اَلَّا تَطْغَوْا فِی الْمِیْزَانِ ۟

ನೀವು ತೂಕದಲ್ಲಿ ಅಸಮತೋಲನ ಮಾಡದಿರುವುದಕ್ಕಾಗಿ. info
التفاسير:

external-link copy
9 : 55

وَاَقِیْمُوا الْوَزْنَ بِالْقِسْطِ وَلَا تُخْسِرُوا الْمِیْزَانَ ۟

ನೀವು ನ್ಯಾಯದೊಂದಿಗೆ ತಕ್ಕಡಿಯನ್ನು ಸ್ಥಾಪಿಸಿರಿ. ತೂಕದಲ್ಲಿ ಕಡಿಮೆ ಮಾಡಬೇಡಿ. info
التفاسير:

external-link copy
10 : 55

وَالْاَرْضَ وَضَعَهَا لِلْاَنَامِ ۟ۙ

ಅವನು ಭೂಮಿಯನ್ನು ಮನುಷ್ಯರಿಗೋಸ್ಕರ ಇಟ್ಟನು. info
التفاسير:

external-link copy
11 : 55

فِیْهَا فَاكِهَةٌ وَّالنَّخْلُ ذَاتُ الْاَكْمَامِ ۟ۖ

ಅದರಲ್ಲಿ ಹಣ್ಣು-ಹಂಪಲುಗಳು ಮತ್ತು ಪೊರೆಗಳಿರುವ ಖರ್ಜೂರದ ಮರಗಳಿವೆ. info
التفاسير:

external-link copy
12 : 55

وَالْحَبُّ ذُو الْعَصْفِ وَالرَّیْحَانُ ۟ۚ

ಹೊಟ್ಟಿರುವ ಧಾನ್ಯಗಳು ಮತ್ತು ಸುಗಂಧಪೂರಿತ ಸಸ್ಯಗಳಿವೆ. info
التفاسير:

external-link copy
13 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು (ಜಿನ್ನ್ ಮತ್ತು ಮನುಷ್ಯರು) ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
14 : 55

خَلَقَ الْاِنْسَانَ مِنْ صَلْصَالٍ كَالْفَخَّارِ ۟ۙ

ಅವನು ಮನುಷ್ಯನನ್ನು ಕುಂಬಾರಿಕೆಯ ಜೇಡಿಮಣ್ಣಿನಿಂದ ಸೃಷ್ಟಿಸಿದನು. info
التفاسير:

external-link copy
15 : 55

وَخَلَقَ الْجَآنَّ مِنْ مَّارِجٍ مِّنْ نَّارٍ ۟ۚ

ಜಿನ್ನ್‌ಗಳನ್ನು ಬೆಂಕಿಯ ಜ್ವಾಲೆಯಿಂದ ಸೃಷ್ಟಿಸಿದನು. info
التفاسير:

external-link copy
16 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير:

external-link copy
17 : 55

رَبُّ الْمَشْرِقَیْنِ وَرَبُّ الْمَغْرِبَیْنِ ۟ۚ

ಅವನು ಎರಡು ಉದಯಸ್ಥಾನಗಳ ಮತ್ತು ಎರಡು ಅಸ್ತಮಸ್ಥಾನಗಳ ಪರಿಪಾಲಕನಾಗಿದ್ದಾನೆ.[1] info

[1] ಅಂದರೆ ಬೇಸಿಗೆಗಾಲದ ಉದಯಸ್ಥಾನ ಮತ್ತು ಚಳಿಗಾಲದ ಉದಯಸ್ಥಾನ. ಅದೇ ರೀತಿ ಬೇಸಿಗೆಗಾಲದ ಅಸ್ತಮಸ್ಥಾನ ಮತ್ತು ಚಳಿಗಾಲದ ಅಸ್ತಮಸ್ಥಾನ.

التفاسير:

external-link copy
18 : 55

فَبِاَیِّ اٰلَآءِ رَبِّكُمَا تُكَذِّبٰنِ ۟

ಹಾಗಾದರೆ ನೀವಿಬ್ಬರು ನಿಮ್ಮ ಪರಿಪಾಲಕನ (ಅಲ್ಲಾಹನ) ಯಾವೆಲ್ಲಾ ಅನುಗ್ರಹಗಳನ್ನು ನಿಷೇಧಿಸುವಿರಿ? info
التفاسير: