വിശുദ്ധ ഖുർആൻ പരിഭാഷ - കന്നഡ പരിഭാഷ - ഹംസ പുത്തൂർ

പേജ് നമ്പർ:close

external-link copy
9 : 62

یٰۤاَیُّهَا الَّذِیْنَ اٰمَنُوْۤا اِذَا نُوْدِیَ لِلصَّلٰوةِ مِنْ یَّوْمِ الْجُمُعَةِ فَاسْعَوْا اِلٰی ذِكْرِ اللّٰهِ وَذَرُوا الْبَیْعَ ؕ— ذٰلِكُمْ خَیْرٌ لَّكُمْ اِنْ كُنْتُمْ تَعْلَمُوْنَ ۟

ಓ ಸತ್ಯವಿಶ್ವಾಸಿಗಳೇ! ಶುಕ್ರವಾರ ನಮಾಝ್‍ಗಾಗಿ ಕರೆಯಲಾದರೆ (ಅಝಾನ್ ನೀಡಲಾದರೆ) ಅಲ್ಲಾಹನ ಸ್ಮರಣೆಯ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ-ವ್ಯವಹಾರಗಳನ್ನು ಬಿಟ್ಟುಬಿಡಿ. ಅದು ನಿಮಗೆ ಅತ್ಯುತ್ತಮವಾಗಿದೆ. ನೀವು ತಿಳಿದವರಾಗಿದ್ದರೆ. info
التفاسير:

external-link copy
10 : 62

فَاِذَا قُضِیَتِ الصَّلٰوةُ فَانْتَشِرُوْا فِی الْاَرْضِ وَابْتَغُوْا مِنْ فَضْلِ اللّٰهِ وَاذْكُرُوا اللّٰهَ كَثِیْرًا لَّعَلَّكُمْ تُفْلِحُوْنَ ۟

ನಮಾಝ್ ಮುಗಿದ ನಂತರ ನೀವು ಭೂಮಿಯಲ್ಲಿ ಚದುರಿ ಹೋಗಿರಿ ಮತ್ತು ಅಲ್ಲಾಹನ ಔದಾರ್ಯವನ್ನು ಹುಡುಕಿರಿ. ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ. info
التفاسير:

external-link copy
11 : 62

وَاِذَا رَاَوْا تِجَارَةً اَوْ لَهْوَا ١نْفَضُّوْۤا اِلَیْهَا وَتَرَكُوْكَ قَآىِٕمًا ؕ— قُلْ مَا عِنْدَ اللّٰهِ خَیْرٌ مِّنَ اللَّهْوِ وَمِنَ التِّجَارَةِ ؕ— وَاللّٰهُ خَیْرُ الرّٰزِقِیْنَ ۟۠

ಅವರು ವ್ಯಾಪಾರದ ಸರಕು ಮಾರಾಟವಾಗುವುದನ್ನು ಕಂಡರೆ ಅಥವಾ ಮನೋರಂಜನೆಯನ್ನು ಕಂಡರೆ ಅದರ ಕಡೆಗೆ ಓಡುತ್ತಾರೆ ಮತ್ತು ನಿಮ್ಮನ್ನು ನಿಂತ ಸ್ಥಿತಿಯಲ್ಲೇ ಬಿಟ್ಟುಬಿಡುತ್ತಾರೆ.[1] ಹೇಳಿರಿ: “ಅಲ್ಲಾಹನ ಬಳಿ ಏನಿದೆಯೋ ಅದು ವ್ಯಾಪಾರ ಮತ್ತು ಮನೋರಂಜನೆಗಿಂತಲೂ ಶ್ರೇಷ್ಠವಾಗಿದೆ. ಅಲ್ಲಾಹು ಉಪಜೀವನ ನೀಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.” info

[1] ಒಮ್ಮೆ ಒಂದು ಶುಕ್ರವಾರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಖುತ್ಬಾ (ಪ್ರವಚನ) ನಿರ್ವಹಿಸುತ್ತಿದ್ದಾಗ ವ್ಯಾಪಾರ ತಂಡವು ಮದೀನ ಮಾರುಕಟ್ಟೆಗೆ ಆಗಮಿಸಿತು. ಸದ್ದುಗದ್ದಲ ಕೇಳಿ ಮಸೀದಿಯಲ್ಲಿದ್ದ ಜನರೆಲ್ಲರೂ ಸರಕು ಖರೀದಿಸಲು ಮಾರುಕಟ್ಟೆಗೆ ಓಡಿದರು. ಕೇವಲ 12 ಮಂದಿ ಮಾತ್ರ ಮಸೀದಿಯಲ್ಲಿ ಉಳಿದರು. ಇದರ ಬಗ್ಗೆ ಈ ವಚನವು ಅವತೀರ್ಣವಾಯಿತು.

التفاسير: