വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
74 : 9

یَحْلِفُوْنَ بِاللّٰهِ مَا قَالُوْا ؕ— وَلَقَدْ قَالُوْا كَلِمَةَ الْكُفْرِ وَكَفَرُوْا بَعْدَ اِسْلَامِهِمْ وَهَمُّوْا بِمَا لَمْ یَنَالُوْا ۚ— وَمَا نَقَمُوْۤا اِلَّاۤ اَنْ اَغْنٰىهُمُ اللّٰهُ وَرَسُوْلُهٗ مِنْ فَضْلِهٖ ۚ— فَاِنْ یَّتُوْبُوْا یَكُ خَیْرًا لَّهُمْ ۚ— وَاِنْ یَّتَوَلَّوْا یُعَذِّبْهُمُ اللّٰهُ عَذَابًا اَلِیْمًا فِی الدُّنْیَا وَالْاٰخِرَةِ ۚ— وَمَا لَهُمْ فِی الْاَرْضِ مِنْ وَّلِیٍّ وَّلَا نَصِیْرٍ ۟

(ಕಪಟವಿಶ್ವಾಸಿಗಳು) ನಾವು ಏನು ಹೇಳಿಲ್ಲವೆಂದು ಅವರು ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ. ವಸ್ತುತಃ ಸತ್ಯನಿಷೇಧದ ಮಾತನ್ನು ಅವರು ಆಡಿದ್ದಾರೆ. ಮತ್ತು ತಮ್ಮ ಇಸ್ಲಾಮ್ ಸ್ವೀಕಾರದ ನಂತರ ಅವರು ಸತ್ಯನಿಷೇಧಿಗಳಾಗಿ ಬಿಟ್ಟರು. ಮತ್ತು ಅವರು ತಮಗೆ ಮಾಡಲು ಸಾಧ್ಯವಾಗದ ಸಂಗತಿಯನ್ನೂ (ಪೈಗಂಬರವರನ್ನು ವಧಿಸಲು) ನಿರ್ಧರಿಸಿದ್ದರು. ಅಲ್ಲಾಹನು ತನ್ನ ಅನುಗ್ರಹದಿಂದ ಮತ್ತು ಅವನ ಸಂದೇಶವಾಹಕರು ಅವರಿಗೆ (ಮದೀನಾ ವಾಸಿಗಳಿಗೆ) ಸಂಪತ್ತÀನ್ನು ನೀಡಿದರು ಎಂಬ ವಿಚಾರವೇ ಅವರ ಪ್ರತೀಕಾರಕ್ಕೆ ಕಾರಣವಾಗಿದೆ. ಇನ್ನು ಅವರು ಪಶ್ಚಾತ್ತಾಪ ಪಡುವುದಾದರೆ ಅದು ಅವರ ಪಾಲಿಗೆ ಅತ್ಯುತ್ತಮವಾಗಿದೆ. ಮತ್ತು ಅವರೇನಾದರೂ ವಿಮುಖರಾಗುವುದಾದರೆ ಅಲ್ಲಾಹನು ಅವರಿಗೆ ಇಹಲೋಕದಲ್ಲೂ, ಪರಲೋಕದಲ್ಲೂ ವೇದನಾಜನಕವಾದ ಶಿಕ್ಷೆಯನ್ನು ನೀಡುವನು ಮತ್ತು ಇಡೀ ಭೂಮಿಯಲ್ಲಿ ಅವರಿಗೆ ಯಾವೊಬ್ಬ ಬೆಂಬಲಿಗನಾಗಲೀ, ಸಹಾಯಕನಾಗಲೀ ಇರಲಾರನು. info
التفاسير: