വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

പേജ് നമ്പർ:close

external-link copy
14 : 72

وَّاَنَّا مِنَّا الْمُسْلِمُوْنَ وَمِنَّا الْقٰسِطُوْنَ ؕ— فَمَنْ اَسْلَمَ فَاُولٰٓىِٕكَ تَحَرَّوْا رَشَدًا ۟

ನಮ್ಮ ಪೈಕಿ ಕೆಲವರು ವಿಧೇಯರಿದ್ದಾರೆ ಮತ್ತು ಕೆಲವರು ಅಕ್ರಮಿಗಳಿದ್ದಾರೆ ಇನ್ನು ಯಾರು ವಿಧೇಯರಾಗಿ ಬಿಟ್ಟರೋ ಅವರು ಸನ್ಮರ‍್ಗವನ್ನು ಪಡೆದರು. info
التفاسير:

external-link copy
15 : 72

وَاَمَّا الْقٰسِطُوْنَ فَكَانُوْا لِجَهَنَّمَ حَطَبًا ۟ۙ

ಮತ್ತು ಯಾರು ಅನ್ಯಾಯವೆಸಗಿದರೋ ಅವರು ನರಕಾಗ್ನಿಯ ಇಂಧನವಾಗಿ ಬಿಟ್ಟರು. info
التفاسير:

external-link copy
16 : 72

وَّاَنْ لَّوِ اسْتَقَامُوْا عَلَی الطَّرِیْقَةِ لَاَسْقَیْنٰهُمْ مَّآءً غَدَقًا ۟ۙ

(ಅಲ್ಲಾಹನು ಹೇಳಿದನು) ಅವರು ನೇರ ಮರ‍್ಗದಲ್ಲಿ ಸ್ಥಿರಚಿತ್ತರಾಗಿ ನಿಲ್ಲುತ್ತಿದ್ದರೆ ಖಂಡಿತ ನಾವು ಅವರಿಗೆ ಧಾರಾಳ ನೀರನ್ನು ಕುಡಿಸುತ್ತಿದ್ದೆವು. info
التفاسير:

external-link copy
17 : 72

لِّنَفْتِنَهُمْ فِیْهِ ؕ— وَمَنْ یُّعْرِضْ عَنْ ذِكْرِ رَبِّهٖ یَسْلُكْهُ عَذَابًا صَعَدًا ۟ۙ

ಇದೇಕೆಂದರೆ ನಾವು ಆ ಅನುಗ್ರಹದಲ್ಲಿ ಅವರನ್ನು ಪರೀಕ್ಷಿಸಲೆಂದಾಗಿದೆ. ಯಾರು ತನ್ನ ಪ್ರಭುವಿನ ಸ್ಮರಣೆಯಿಂದ ವಿಮುಖವಾಗುತ್ತಾನೋ ಅವನನ್ನು ಅಲ್ಲಾಹನು ಕಠಿಣ ಶಿಕ್ಷೆಗೆ ಗುರಿಪಡಿಸುವನು. info
التفاسير:

external-link copy
18 : 72

وَّاَنَّ الْمَسٰجِدَ لِلّٰهِ فَلَا تَدْعُوْا مَعَ اللّٰهِ اَحَدًا ۟ۙ

ಖಂಡಿತವಾಗಿಯೂ ಮಸೀದಿಗಳು ಕೇವಲ ಅಲ್ಲಾಹನದ್ದಾಗಿವೆ, ಆದ್ದರಿಂದ ನೀವು ಅಲ್ಲಾಹನೊಂದಿಗೆ ಯಾರನ್ನೂ ಕರೆದು ಪ್ರರ‍್ಥಿಸಬೇಡಿರಿ. info
التفاسير:

external-link copy
19 : 72

وَّاَنَّهٗ لَمَّا قَامَ عَبْدُ اللّٰهِ یَدْعُوْهُ كَادُوْا یَكُوْنُوْنَ عَلَیْهِ لِبَدًا ۟ؕ۠

ಖಂಡಿತವಾಗಿಯೂ ಅಲ್ಲಾಹನ ದಾಸರು (ಮುಹಮ್ಮದರು) ಅವನ ಆರಾಧನೆಗಾಗಿ ನಿಂತಾಗ ಅವರು ಪೈಗಂಬರರ ಮೇಲೆ ಮುಗಿಬೀಳಲು ಸಿದ್ಧರಾಗಿಬಿಟ್ಟರು. info
التفاسير:

external-link copy
20 : 72

قُلْ اِنَّمَاۤ اَدْعُوْا رَبِّیْ وَلَاۤ اُشْرِكُ بِهٖۤ اَحَدًا ۟

(ಓ ಪೈಗಂಬರರೇ) ಹೇಳಿರಿ; ನಾನು ನನ್ನ ಪ್ರಭುವನ್ನು ಮಾತ್ರ ಆರಾಧಿಸುತ್ತೇನೆ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡುವುದಿಲ್ಲ. info
التفاسير:

external-link copy
21 : 72

قُلْ اِنِّیْ لَاۤ اَمْلِكُ لَكُمْ ضَرًّا وَّلَا رَشَدًا ۟

ಹೇಳಿರಿ; ನಾನು ನಿಮಗೆ ಯಾವುದೇ ಹಾನಿಯನ್ನುಂಟು ಮಾಡುವ ಅಥವಾ ಲಾಭ ನೀಡುವ ಅಧಿಕಾರ ಹೊಂದಿಲ್ಲ. info
التفاسير:

external-link copy
22 : 72

قُلْ اِنِّیْ لَنْ یُّجِیْرَنِیْ مِنَ اللّٰهِ اَحَدٌ ۙ۬— وَّلَنْ اَجِدَ مِنْ دُوْنِهٖ مُلْتَحَدًا ۟ۙ

ಹೇಳಿರಿ; ನನ್ನನ್ನು ಅಲ್ಲಾಹನ ಯಾತನೆಯಿಂದ ಯಾರೂ ರಕ್ಷಿಸಲಾರರು ಮತ್ತು ಅವನ ಹೊರತು ಯಾವುದೇ ಅಭಯ ಸ್ಥಾನವನ್ನು ನಾನೆಂದಿಗೂ ಪಡೆಯಲಾರೆನು. info
التفاسير:

external-link copy
23 : 72

اِلَّا بَلٰغًا مِّنَ اللّٰهِ وَرِسٰلٰتِهٖ ؕ— وَمَنْ یَّعْصِ اللّٰهَ وَرَسُوْلَهٗ فَاِنَّ لَهٗ نَارَ جَهَنَّمَ خٰلِدِیْنَ فِیْهَاۤ اَبَدًا ۟ؕ

ಆದರೆ ನನ್ನ ರ‍್ತವ್ಯವು ಅಲ್ಲಾಹನ ಆದೇಶ ಮತ್ತು ಅವನ ಸಂದೇಶಗಳನ್ನು ತಲುಪಿಸುವುದಾಗಿದೆ. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಧಿಕ್ಕರಿಸುತ್ತಾರೋ ಅವರಿಗೆ ನರಕಾಗ್ನಿಯಿದೆ. ಅದರಲ್ಲಿ ಅವರು ಶಾಶ್ವತವಾಗಿರುವರು. info
التفاسير:

external-link copy
24 : 72

حَتّٰۤی اِذَا رَاَوْا مَا یُوْعَدُوْنَ فَسَیَعْلَمُوْنَ مَنْ اَضْعَفُ نَاصِرًا وَّاَقَلُّ عَدَدًا ۟

ಅವರು ತಮಗೆ ಎಚ್ಚರಿಕೆ ನೀಡಲಾಗುವುದನ್ನು ಕಣ್ಣಾರೆ ಕಂಡಾಗ ಯಾರ ಸಹಾಯಕನು ದರ‍್ಬಲನು ಮತ್ತು ಯಾರ ಸಂಖ್ಯೆಯು ಕಡಿಮೆ ಎಂಬುದನ್ನು ಅವರು ಗ್ರಹಿಸಿಕೊಳ್ಳುವರು. info
التفاسير:

external-link copy
25 : 72

قُلْ اِنْ اَدْرِیْۤ اَقَرِیْبٌ مَّا تُوْعَدُوْنَ اَمْ یَجْعَلُ لَهٗ رَبِّیْۤ اَمَدًا ۟

ಹೇಳಿರಿ; ನಿಮಗೆ ಎಚ್ಚರಿಕೆ ನೀಡಲಾಗುತ್ತಿರುವ ಸಂಗತಿಯು ಹತ್ತಿರದಲ್ಲಿದೆಯೋ ಅಥವಾ ನನ್ನ ಪ್ರಭು ಅದಕ್ಕೆ ದರ‍್ಘ ಅವಧಿಯನ್ನು ನಿಶ್ಚಯಿಸಿರುವನೋ ನನಗೆ ತಿಳಿದಿಲ್ಲ. info
التفاسير:

external-link copy
26 : 72

عٰلِمُ الْغَیْبِ فَلَا یُظْهِرُ عَلٰی غَیْبِهٖۤ اَحَدًا ۟ۙ

ಅವನು ಅಗೋಚರ ಜ್ಞಾನಿಯಾಗಿದ್ದಾನೆ ಅವನು ತನ್ನ ಅಗೋಚರ ಜ್ಞಾನವನ್ನು ಯಾರಿಗೂ ಪ್ರಕಟಗೊಳಿಸುವುದಿಲ್ಲ, info
التفاسير:

external-link copy
27 : 72

اِلَّا مَنِ ارْتَضٰی مِنْ رَّسُوْلٍ فَاِنَّهٗ یَسْلُكُ مِنْ بَیْنِ یَدَیْهِ وَمِنْ خَلْفِهٖ رَصَدًا ۟ۙ

ತಾನು ಮೆಚ್ಚಿಕೊಂಡ ಸಂದೇಶವಾಹಕರ ಹೊರತು. ಆಗ ಅವರ ಹಿಂದೆಯೂ ಮುಂದೆಯೂ ಅವನು ಕಾವಲುಗಾರರನ್ನು ನಿಶ್ಚಯಿಸಿಬಿಡುತ್ತಾನೆ. info
التفاسير:

external-link copy
28 : 72

لِّیَعْلَمَ اَنْ قَدْ اَبْلَغُوْا رِسٰلٰتِ رَبِّهِمْ وَاَحَاطَ بِمَا لَدَیْهِمْ وَاَحْصٰی كُلَّ شَیْءٍ عَدَدًا ۟۠

ಇದು ಅವರು ತಮ್ಮ ಪ್ರಭುವಿನ ಸಂದೇಶವನ್ನು ತಲುಪಿಸಿಕೊಟ್ಟಿರುವರು ಎಂಬುದನ್ನು ಅವನು ಅರಿಯುವ ಸಲುವಾಗಿದೆ. ಅಲ್ಲಾಹನು ಅವರ (ಸಂದೇಶವಾಹಕರ) ಸುತ್ತಲಿರುವ (ಸಕಲವನ್ನು) ಆವರಿಸಿದ್ದಾನೆ ಮತ್ತು ಅವನು ಸಕಲ ವಸ್ತುಗಳ ಎಣಿಕೆಯನ್ನು ದಾಖಲಿಸಿಟ್ಟಿದ್ದಾನೆ. info
التفاسير: