വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
94 : 6

وَلَقَدْ جِئْتُمُوْنَا فُرَادٰی كَمَا خَلَقْنٰكُمْ اَوَّلَ مَرَّةٍ وَّتَرَكْتُمْ مَّا خَوَّلْنٰكُمْ وَرَآءَ ظُهُوْرِكُمْ ۚ— وَمَا نَرٰی مَعَكُمْ شُفَعَآءَكُمُ الَّذِیْنَ زَعَمْتُمْ اَنَّهُمْ فِیْكُمْ شُرَكٰٓؤُا ؕ— لَقَدْ تَّقَطَّعَ بَیْنَكُمْ وَضَلَّ عَنْكُمْ مَّا كُنْتُمْ تَزْعُمُوْنَ ۟۠

(ಅಲ್ಲಾಹನು ಹೇಳುವನು) ನಾವು ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿರುವಂತೇ ನೀವು ನಮ್ಮ ಬಳಿಗೆ ಒಬ್ಬಂಟಿಯಾಗಿ ಬಂದಿರುವಿರಿ; ನಿಮಗೆ ನಾವು ನೀಡಿರುವುದನ್ನೆಲ್ಲಾ ನೀವು ನಿಮ್ಮ ಬೆನ್ನ ಹಿಂದೆಯೇ ಬಿಟ್ಟು ಬಂದಿರುವಿರಿ ಮತ್ತು ನೀವು ನಿಮ್ಮ ವಿಚಾರದಲ್ಲಿ ಸಹಭಾಗಿಗಳೆಂದು ವಾದಿಸುತ್ತಿದ್ದ ನಿಮ್ಮ ಶಿಫಾರಸ್ಸುಗಾರರನ್ನು ನಾವು ನಿಮ್ಮೊಂದಿಗೆ ಕಾಣುತ್ತಿಲ್ಲ. ವಾಸ್ತವದಲ್ಲಿ ನಿಮ್ಮ ನಡುವಿನ ಸಂಬAಧಗಳು ಮುರಿದು ಹೋಗಿವೆ ಮತ್ತು ನೀವು ವಾದಿಸುತ್ತಿದ್ದವುಗಳೆಲ್ಲವೂ ನಿಮ್ಮಿಂದ ಕಣ್ಮರೆಯಾಗಿ ಬಿಟ್ಟಿವೆ. info
التفاسير: