വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
70 : 6

وَذَرِ الَّذِیْنَ اتَّخَذُوْا دِیْنَهُمْ لَعِبًا وَّلَهْوًا وَّغَرَّتْهُمُ الْحَیٰوةُ الدُّنْیَا وَذَكِّرْ بِهٖۤ اَنْ تُبْسَلَ نَفْسٌ بِمَا كَسَبَتْ ۖۗ— لَیْسَ لَهَا مِنْ دُوْنِ اللّٰهِ وَلِیٌّ وَّلَا شَفِیْعٌ ۚ— وَاِنْ تَعْدِلْ كُلَّ عَدْلٍ لَّا یُؤْخَذْ مِنْهَا ؕ— اُولٰٓىِٕكَ الَّذِیْنَ اُبْسِلُوْا بِمَا كَسَبُوْا ۚ— لَهُمْ شَرَابٌ مِّنْ حَمِیْمٍ وَّعَذَابٌ اَلِیْمٌ بِمَا كَانُوْا یَكْفُرُوْنَ ۟۠

ಮತ್ತು ತಮ್ಮ ಧರ್ಮವನ್ನು ಆಟ ಮತ್ತು ವಿನೋದವನ್ನಾಗಿ ಮಾಡಿರುವವರನ್ನು ಹಾಗೂ ಐಹಿಕ ಜೀವನಕ್ಕೆ ಮೋಸ ಹೋದವರನ್ನು ನೀವು ಬಿಟ್ಟುಬಿಡಿರಿ. ಯಾವೊಬ್ಬ ವ್ಯಕ್ತಿಯು ತಾನು ಮಾಡಿ ಬಿಟ್ಟಿರುವುದರ ಫಲವಾಗಿ ನಾಶ ಕೋಪಕ್ಕೆ ತಳ್ಳಲ್ಪಡದಿರಲೆಂದು ನೀವು ಈ ಕುರ್‌ಆನಿನ ಮೂಲಕ ಸದುಪದೇಶ ಮಾಡುತ್ತಿರಿ. ಆಗ ಅವನಿಗೆ ಅಲ್ಲಾಹನ ಹೊರತು ಯಾವೊಬ್ಬ ಸಹಾಯಕನಾಗಲೀ, ಶಿಫಾರಸ್ಸುಗಾರನಾಗಲೀ ಇರಲಾರನು ಮತ್ತು ಅಂದು ಅವನು ಸಕಲ ವಿಧದ ಪ್ರಾಯಶ್ಚಿತ್ತವನ್ನು ನೀಡಿದರೂ ಅವನಿಂದ ಅದನ್ನು ಸ್ವೀಕರಿಸಲಾಗದು. ಸ್ವತಃ ತಾವು ಮಾಡಿಟ್ಟಿರುವುದರ ಫಲವಾಗಿ ನಾಶಕೋಪಕ್ಕೆ ತಳ್ಳಲ್ಪಡುವವರು ಇವರೇ ಆಗಿದ್ದಾರೆ. ಅವರಿಗೆ ನರಕದಲ್ಲಿ ಕುಡಿಯಲು ಕುದಿಯುವ ನೀರು ಇರುವುದು ಮತ್ತು ವೇದನಾಜನಕ ಶಿಕ್ಷೆಯಿರುವುದು. ಇದು ಅವರ ಸತ್ಯನಿಷೇಧದ ನಿಮಿತ್ತವಾಗಿದೆ. info
التفاسير: