വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
151 : 6

قُلْ تَعَالَوْا اَتْلُ مَا حَرَّمَ رَبُّكُمْ عَلَیْكُمْ اَلَّا تُشْرِكُوْا بِهٖ شَیْـًٔا وَّبِالْوَالِدَیْنِ اِحْسَانًا ۚ— وَلَا تَقْتُلُوْۤا اَوْلَادَكُمْ مِّنْ اِمْلَاقٍ ؕ— نَحْنُ نَرْزُقُكُمْ وَاِیَّاهُمْ ۚ— وَلَا تَقْرَبُوا الْفَوَاحِشَ مَا ظَهَرَ مِنْهَا وَمَا بَطَنَ ۚ— وَلَا تَقْتُلُوا النَّفْسَ الَّتِیْ حَرَّمَ اللّٰهُ اِلَّا بِالْحَقِّ ؕ— ذٰلِكُمْ وَصّٰىكُمْ بِهٖ لَعَلَّكُمْ تَعْقِلُوْنَ ۟

ಹೇಳಿರಿ ಬನ್ನಿರಿ ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದನ್ನು ನಾನು ನಿಮಗೆ ಓದಿ ತಿಳಿಸುತ್ತೇನೆ. ನೀವು ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಬಾರದು, ಮಾತಾಪಿತರೊಂದಿಗೆ ಸದ್ವರ್ತನೆ ತೋರಬೇಕು. ದಾರಿದ್ರö್ಯದಿಂದಾಗಿ ನಿಮ್ಮ ಮಕ್ಕಳನ್ನು ಕೊಲ್ಲಬಾರದು. ನಿಮಗೂ, ಅವರಿಗೂ ಆಹಾರ ನೀಡುವವರು ನಾವಾಗಿದ್ದೇವೆ ಮತ್ತು ಪ್ರತ್ಯಕ್ಷವಾದ, ಪರೋಕ್ಷವಾದ ನಿರ್ಲಜ್ಜೆಯ ಕೃತ್ಯಗಳ ಬಳಿ ಸುಳಿಯಬೇಡಿರಿ. ಅಲ್ಲಾಹನು ಕೊಲ್ಲುವುದನ್ನು ನಿಷಿದ್ಧಗೊಳಿಸಿರುವ ಜೀವವನ್ನು ನ್ಯಾಯಬದ್ಧವಾಗಿಯಲ್ಲದೇ ಕೊಲ್ಲಬೇಡಿರಿ. ಅವನು ನಿಮಗೆ ನೀವು ಅರಿತುಕೊಳ್ಳಲೆಂದು ಈ ಆದೇಶವನ್ನು ನೀಡಿದ್ದಾನೆ. info
التفاسير: