വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
16 : 48

قُلْ لِّلْمُخَلَّفِیْنَ مِنَ الْاَعْرَابِ سَتُدْعَوْنَ اِلٰی قَوْمٍ اُولِیْ بَاْسٍ شَدِیْدٍ تُقَاتِلُوْنَهُمْ اَوْ یُسْلِمُوْنَ ۚ— فَاِنْ تُطِیْعُوْا یُؤْتِكُمُ اللّٰهُ اَجْرًا حَسَنًا ۚ— وَاِنْ تَتَوَلَّوْا كَمَا تَوَلَّیْتُمْ مِّنْ قَبْلُ یُعَذِّبْكُمْ عَذَابًا اَلِیْمًا ۟

ಹಿಂದೆ ಉಳಿದುಬಿಟ್ಟ ಗ್ರಾಮೀಣ ಅರಬರೊಂದಿಗೆ ನೀವು ಹೇಳಿರಿ; ಸದ್ಯದಲ್ಲೇ ನಿಮ್ಮನ್ನು ಬಲಿಷ್ಠರಾದ ಒಂದು ಪರಾಕ್ರಮಿ ಜನಾಂಗದೆಡೆಗೆ ಕರೆಯಲಾಗುವುದು. ನೀವು ಅವರೊಂದಿಗೆ ಯುದ್ಧಮಾಡುವಿರಿ ಇಲ್ಲವೇ ಅವರು ಶರಣಾಗುವರು. ಇನ್ನು ನೀವು ಆಜ್ಞೆ ಪಾಲಿಸಿದರೆ ಅಲ್ಲಾಹನು ನಿಮಗೆ ಅತ್ಯುತ್ತಮವಾದ ಪ್ರತಿಫಲವನ್ನು ನೀಡುವನು ಮತ್ತು ನೀವು ಈ ಮೊದಲು ವಿಮುಖರಾದಂತೆ (ಪುನಃ) ವಿಮುಖರಾಗಿ ಬಿಟ್ಟರೆ ಅವನು ನಿಮಗೆ ವೇದನಾಜನಕ ಯಾತನೆಯನ್ನು ನೀಡುವನು. info
التفاسير:

external-link copy
17 : 48

لَیْسَ عَلَی الْاَعْمٰی حَرَجٌ وَّلَا عَلَی الْاَعْرَجِ حَرَجٌ وَّلَا عَلَی الْمَرِیْضِ حَرَجٌ ؕ— وَمَنْ یُّطِعِ اللّٰهَ وَرَسُوْلَهٗ یُدْخِلْهُ جَنّٰتٍ تَجْرِیْ مِنْ تَحْتِهَا الْاَنْهٰرُ ۚ— وَمَنْ یَّتَوَلَّ یُعَذِّبْهُ عَذَابًا اَلِیْمًا ۟۠

(ಸಮರಕ್ಕೆ ಹೊರಡದಿರಲು) ಕುರುಡನ ಮೇಲೆ ದೋಷವಿಲ್ಲ, ಕುಂಟನ ಮೇಲೆ ದೋಷವಿಲ್ಲ ಮತ್ತು ರೋಗಿಯ ಮೇಲೂ ದೋಷವಿಲ್ಲ. ಯಾರು ಅಲ್ಲಾಹನ ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಪಾಲಿಸುತ್ತಾನೋ ಅವನನ್ನು ಅಲ್ಲಾಹನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಮತ್ತು ಯಾರು ವಿಮುಖನಾಗುತ್ತಾನೋ ಅವನಿಗೆ ಅಲ್ಲಾಹನು ವೇದನಾಜನಕ ಯಾತನೆಯನ್ನು ಕೊಡುವನು. info
التفاسير:

external-link copy
18 : 48

لَقَدْ رَضِیَ اللّٰهُ عَنِ الْمُؤْمِنِیْنَ اِذْ یُبَایِعُوْنَكَ تَحْتَ الشَّجَرَةِ فَعَلِمَ مَا فِیْ قُلُوْبِهِمْ فَاَنْزَلَ السَّكِیْنَةَ عَلَیْهِمْ وَاَثَابَهُمْ فَتْحًا قَرِیْبًا ۟ۙ

ನಿಶ್ಚಯವಾಗಿಯೂ ಆ ವೃಕ್ಷದಡಿಯಲ್ಲಿ ಸತ್ಯವಿಶ್ವಾಸಿಗಳು ನಿಮ್ಮೊಂದಿಗೆ ವಿಧೇಯತೆಯ ಪ್ರಮಾಣ ಮಾಡುತ್ತಿದ್ದಂತಹ ಸಂದರ್ಭದಲ್ಲಿ ಅಲ್ಲಾಹನು ಸಂತುಷ್ಟನಾದನು. ಅವನು ಅವರ ಹೃದಯಗಳಲ್ಲಿರುವುದನ್ನು ಅರಿತನು ಮತ್ತು ಅವರ ಮೇಲೆ ಶಾಂತಿ ನೆಮ್ಮದಿಯನ್ನು ಇಳಿಸಿದನು ಹಾಗೂ ಅವರಿಗೆ ಅತಿ ಸಮೀಪದಲ್ಲಿರುವ (ಖೈಬರ್‌ನ) ವಿಜಯವೊಂದನ್ನು ಕರುಣಿಸಿದನು. info
التفاسير:

external-link copy
19 : 48

وَّمَغَانِمَ كَثِیْرَةً یَّاْخُذُوْنَهَا ؕ— وَكَانَ اللّٰهُ عَزِیْزًا حَكِیْمًا ۟

ಹೇರಳ ಯುದ್ಧಾರ್ಜಿತ ಸೊತ್ತುಗಳನ್ನು ಅವರು ಪಡೆಯುವರು ಮತ್ತು ಅಲ್ಲಾಹನು ಪ್ರತಾಪಶಾಲಿಯು, ಯುಕ್ತಿಪೂರ್ಣನು ಆಗಿದ್ದಾನೆ. info
التفاسير:

external-link copy
20 : 48

وَعَدَكُمُ اللّٰهُ مَغَانِمَ كَثِیْرَةً تَاْخُذُوْنَهَا فَعَجَّلَ لَكُمْ هٰذِهٖ وَكَفَّ اَیْدِیَ النَّاسِ عَنْكُمْ ۚ— وَلِتَكُوْنَ اٰیَةً لِّلْمُؤْمِنِیْنَ وَیَهْدِیَكُمْ صِرَاطًا مُّسْتَقِیْمًا ۟ۙ

ನೀವು ಪಡೆಯಲಿರುವ ಧಾರಾಳವಾದ ಯುದ್ಧಾರ್ಜಿತ ಸೊತ್ತುಗಳ ವಾಗ್ದಾನವನ್ನು ಅಲ್ಲಾಹನು ಮಾಡಿದ್ದಾನೆ; ಇದು (ಖೈಬರಿನ ವಿಜಯವನ್ನು) ಅವನು ನಿಮಗೆ ಶೀಘ್ರವೇ ದಯಪಾಲಿಸಿದನು ಮತ್ತು ಜನರ ಕೈಗಳು ನಿಮ್ಮ ವಿರುದ್ಧ ಏಳದಂತೆ ತಡೆದನು. ಇದು ಸತ್ಯವಿಶ್ವಾಸಿಗಳಿಗೆ ನಿದರ್ಶನವಾಗಲೆಂದೂ, ಅವನು ನಿಮ್ಮನ್ನು ಋಜುವಾದ ಮಾರ್ಗದಲ್ಲಿ ಮುನ್ನಡೆಸಲೆಂದಾಗಿದೆ. info
التفاسير:

external-link copy
21 : 48

وَّاُخْرٰی لَمْ تَقْدِرُوْا عَلَیْهَا قَدْ اَحَاطَ اللّٰهُ بِهَا ؕ— وَكَانَ اللّٰهُ عَلٰی كُلِّ شَیْءٍ قَدِیْرًا ۟

ಅವನು ನಿಮಗೆ ಇನ್ನೂ ಸಾಧಿಸಲು ಸಾಧ್ಯವಾಗದ ಇನ್ನೊಂದು ಯುದ್ಧಾರ್ಜಿತ ಸೊತ್ತಿನ ವಾಗ್ದಾನವನ್ನು ಮಾಡಿದ್ದಾನೆ. ಅಲ್ಲಾಹನು ಅದನ್ನು ಸುತ್ತುವರಿದಿದ್ದಾನೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
22 : 48

وَلَوْ قَاتَلَكُمُ الَّذِیْنَ كَفَرُوْا لَوَلَّوُا الْاَدْبَارَ ثُمَّ لَا یَجِدُوْنَ وَلِیًّا وَّلَا نَصِیْرًا ۟

ಸತ್ಯನಿಷೇಧಿಗಳು ನಿಮ್ಮೊಂದಿಗೆ ಯುದ್ಧ ಮಾಡಿರುತ್ತಿದ್ದರೆ ಖಂಡಿತ ಬೆನ್ನು ತಿರುಗಿಸಿ ಓಡುತ್ತಿದ್ದರು. ಆ ಬಳಿಕ ಅವರು ಯಾವ ರಕ್ಷಕ ಮಿತ್ರನನ್ನಾಗಲಿ, ಸಹಾಯಕನನ್ನಾಲೀ ಪಡೆಯುತ್ತಿರಲಿಲ್ಲ. info
التفاسير:

external-link copy
23 : 48

سُنَّةَ اللّٰهِ الَّتِیْ قَدْ خَلَتْ مِنْ قَبْلُ ۖۚ— وَلَنْ تَجِدَ لِسُنَّةِ اللّٰهِ تَبْدِیْلًا ۟

ಇದು ಮೊದಲಿನಿಂದಲೇ ಜಾರಿಯಲ್ಲಿರುವಂತಹ ಅಲ್ಲಾಹನ ಕ್ರಮವಾಗಿದೆ ಮತ್ತು ಅಲ್ಲಾಹನ ಕ್ರಮದಲ್ಲಿ ಯಾವ ಬದಲಾವಣೆಯನ್ನು ನೀವು ಕಾಣಲಾರಿರಿ. info
التفاسير: