വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
21 : 46

وَاذْكُرْ اَخَا عَادٍ اِذْ اَنْذَرَ قَوْمَهٗ بِالْاَحْقَافِ وَقَدْ خَلَتِ النُّذُرُ مِنْ بَیْنِ یَدَیْهِ وَمِنْ خَلْفِهٖۤ اَلَّا تَعْبُدُوْۤا اِلَّا اللّٰهَ ؕ— اِنِّیْۤ اَخَافُ عَلَیْكُمْ عَذَابَ یَوْمٍ عَظِیْمٍ ۟

(ಓ ಪೈಗಂಬರರೇ) ನೀವು ಆದ್ ಜನಾಂಗದ ಸಹೋದರ(ಹೂದ್‌ರನ್ನು) ಸ್ಮರಿಸಿರಿ. ಅವರು 'ಅಹ್‌ಕಾಫ್'ನಲ್ಲಿದ್ದ ತಮ್ಮ ಜನಾಂಗವನ್ನು ಎಚ್ಚರಿಸಿದ ಸಂದರ್ಭ ನಿಶ್ಚಯವಾಗಿಯು ಅವರಿಗಿಂತ ಮುಂಚೆಯು, ಅವರ ನಂತರವೂ ಮುನ್ನೆಚ್ಚರಿಕೆಗಾ ರರು ಗತಿಸಿದ್ದಾರೆ. ಅವರು ಹೇಳಿದರು; “ನೀವು ಅಲ್ಲಾಹನನ್ನು ಬಿಟ್ಟು ಇತರರನ್ನು ಆರಾಧಿಸಬೇಡಿರಿ. ನಿಸ್ಸಂದೇಹವಾಗಿಯೂ ನಾನು ನಿಮ್ಮ ಮೇಲೆ ಒಂದು ಮಹಾ ದಿನದ ಯಾತನೆಯನ್ನು ಭಯಪಡುತ್ತೇನೆ. info
التفاسير:

external-link copy
22 : 46

قَالُوْۤا اَجِئْتَنَا لِتَاْفِكَنَا عَنْ اٰلِهَتِنَا ۚ— فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟

ಜನರು ಹೇಳಿದರು; ನಮ್ಮ ಆರಾಧ್ಯರಿಂದ ನಮ್ಮನ್ನು ಅಗಲಿಸಲು ನೀನು ನಮ್ಮ ಬಳಿ ಬಂದಿರುವೆಯಾ ? ನೀನು ಸತ್ಯವಂತನಾಗಿದ್ದರೆ ನೀನು ನಮಗೆ ಎಚ್ಚರಿಕೆ ನೀಡುತ್ತಿರುವ ಆ ಶಿಕ್ಷೆಯನ್ನು ನಮ್ಮ ಮೇಲೆ ತಂದುಬಿಡು. info
التفاسير:

external-link copy
23 : 46

قَالَ اِنَّمَا الْعِلْمُ عِنْدَ اللّٰهِ ؗ— وَاُبَلِّغُكُمْ مَّاۤ اُرْسِلْتُ بِهٖ وَلٰكِنِّیْۤ اَرٰىكُمْ قَوْمًا تَجْهَلُوْنَ ۟

ಪೈಗಂಬರ್ ಹೂದ್ ಹೇಳಿದರು; ಅದರ ಜ್ಞಾನವು ಅಲ್ಲಾಹನ ಬಳಿ ಮಾತ್ರವಿದೆ. ನಾನು ನನಗೆ ಕೊಟ್ಟು ಕಳುಹಿಸಿರುವ ಸಂದೇಶವನ್ನೇ ನಿಮಗೆ ತಲುಪಿಸುತ್ತಿದ್ದೇನೆ. ಆದರೆ ನಾನು ನಿಮ್ಮನ್ನು ಅವಿವೇಕಿ ಜನಾಂಗವಾಗಿ ಕಾಣುತ್ತಿರುವೆನು. info
التفاسير:

external-link copy
24 : 46

فَلَمَّا رَاَوْهُ عَارِضًا مُّسْتَقْبِلَ اَوْدِیَتِهِمْ ۙ— قَالُوْا هٰذَا عَارِضٌ مُّمْطِرُنَا ؕ— بَلْ هُوَ مَا اسْتَعْجَلْتُمْ بِهٖ ؕ— رِیْحٌ فِیْهَا عَذَابٌ اَلِیْمٌ ۟ۙ

ಅನಂತರ ಅವರು ಶಿಕ್ಷೆಯನ್ನು ತಮ್ಮ ಕಣಿವೆಯೆಡೆಗೆ ಬರುತ್ತಿರುವಂತಹ ಒಂದು ಮೋಡವನ್ನಾಗಿ ಕಂಡಾಗ ಹೇಳಿದರು; ಈ ಮೋಡವು ನಮ್ಮ ಮೇಲೆ ಮಳೆಯನ್ನು ವರ್ಷಿಸಲಿದೆ. (ಇಲ್ಲ) ವಸ್ತುತಃ ಈ ಮೋಡವು ನೀವು ಆತುರಪಟ್ಟುಕೊಳ್ಳುತ್ತಿದ್ದಂತಹ ಶಿಕ್ಷೆ ಆಗಿದೆ. ಇದು ಬಿರುಗಾಳಿಯಾಗಿದ್ದು ಅದರಲ್ಲಿ ವೇದನಾಜನಕ ಯಾತನೆಯಿದೆ. info
التفاسير:

external-link copy
25 : 46

تُدَمِّرُ كُلَّ شَیْ بِاَمْرِ رَبِّهَا فَاَصْبَحُوْا لَا یُرٰۤی اِلَّا مَسٰكِنُهُمْ ؕ— كَذٰلِكَ نَجْزِی الْقَوْمَ الْمُجْرِمِیْنَ ۟

ಆ ಗಾಳಿಯು ತನ್ನ ಪ್ರಭುವಿನ ಅಪ್ಪಣೆಯೊಂದಿಗೆ ಪ್ರತಿಯೊಂದು ವಸ್ತುವನ್ನೂ ನಾಶಮಾಡುವುದು, ಕೊನೆಗೆ ಅವರ ವಸತಿಗಳ ಹೊರತು ಬೇರೇನೂ ಕಾಣಿಸದಂತಹ ಅವರ ಸ್ಥಿತಿಯಾಯಿತು, ಇದೇ ಪ್ರಕಾರ ನಾವು ಅಪರಾಧಿ ಜನರಿಗೆ ಶಿಕ್ಷೆಯನ್ನು ನೀಡುತ್ತೇವೆ. info
التفاسير:

external-link copy
26 : 46

وَلَقَدْ مَكَّنّٰهُمْ فِیْمَاۤ اِنْ مَّكَّنّٰكُمْ فِیْهِ وَجَعَلْنَا لَهُمْ سَمْعًا وَّاَبْصَارًا وَّاَفْـِٕدَةً ۖؗ— فَمَاۤ اَغْنٰی عَنْهُمْ سَمْعُهُمْ وَلَاۤ اَبْصَارُهُمْ وَلَاۤ اَفْـِٕدَتُهُمْ مِّنْ شَیْءٍ اِذْ كَانُوْا یَجْحَدُوْنَ بِاٰیٰتِ اللّٰهِ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟۠

ನಿಜವಾಗಿಯೂ ನಾವು ನಿಮಗೆ ನೀಡಿರÀದಂತಹ ಸಾಮರ್ಥ್ಯಗಳನ್ನು ನಾವು ಅವರಿಗೆ ನೀಡಿದ್ದೆವು ಮತ್ತುನಾವು ಅವರಿಗೆ ಕಿವಿಗಳನ್ನು, ಕಣ್ಣುಗಳನ್ನು ಮತ್ತು ಹೃದಯಗಳನ್ನು ನೀಡಿದ್ದೆವು. ಆದರೆ ಅವರ ಕಿವಿಗಳಾಗಲಿ, ಕಣ್ಣುಗಳಾಗಲಿ, ಅವರ ಹೃದಯಗಳಾಗಲಿ ಅವರಿಗೆ ಯಾವ ಪ್ರಯೋಜನವನ್ನೂ ನೀಡಲಿಲ್ಲ, ಏಕೆಂದರೆ ಅವರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಿದ್ದರು ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದ ವಸ್ತುವೇ ಅವರನ್ನು ಆವರಿಸಿಬಿಟ್ಟಿತು. info
التفاسير:

external-link copy
27 : 46

وَلَقَدْ اَهْلَكْنَا مَا حَوْلَكُمْ مِّنَ الْقُرٰی وَصَرَّفْنَا الْاٰیٰتِ لَعَلَّهُمْ یَرْجِعُوْنَ ۟

ನಿಶ್ಚಯವಾಗಿಯು ನಾವು ನಿಮ್ಮ ಸುತ್ತಮುತ್ತಲಿನ ನಾಡುಗಳನ್ನು ನಾಶಗೊಳಿಸಿರುತ್ತೇವೆ ಹಾಗು ಅವರು ಮರಳಲೆಂದು ನಾವು ವಿವಿಧ ಶೈಲಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಟ್ಟಿರುವೆವು. info
التفاسير:

external-link copy
28 : 46

فَلَوْلَا نَصَرَهُمُ الَّذِیْنَ اتَّخَذُوْا مِنْ دُوْنِ اللّٰهِ قُرْبَانًا اٰلِهَةً ؕ— بَلْ ضَلُّوْا عَنْهُمْ ۚ— وَذٰلِكَ اِفْكُهُمْ وَمَا كَانُوْا یَفْتَرُوْنَ ۟

ಆದರೆ ಅವರು ಅಲ್ಲಾಹನನ್ನು ಬಿಟ್ಟು ದೇವಸಾಮಿಪ್ಯದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದ, ಆರಾಧ್ಯರು ಅವರ ಸಹಾಯಕ್ಕೆ ಏಕೆ ಬರಲಿಲ್ಲ ? ಮಾತ್ರವಲ್ಲ ಅವರು ಅವರಿಂದ ಕಣ್ಮರೆಯಾಗಿಬಿಟ್ಟಿದ್ದರು. ವಾಸ್ತವದಲ್ಲಿ ಇದು ಅವರ ಮಿಥ್ಯ ಕಲ್ಪನೆ ಮತ್ತು ಸುಳ್ಳಾರೋಪವಾಗಿತ್ತು. info
التفاسير: