വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
48 : 39

وَبَدَا لَهُمْ سَیِّاٰتُ مَا كَسَبُوْا وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟

ಅವರ ಕೃತ್ಯಗಳ ದುಷ್ಟರಿಣಾಮಗಳು ಅವರಿಗೆ ಪ್ರಕಟವಾಗಲಿದೆ ಮತ್ತು ಅವರು ಪರಿಹಾಸ್ಯ ಮಾಡುತ್ತಿದ್ದುದೇ ಅವರನ್ನು ಸುತ್ತುವರಿದು ಬಿಡುವುದು. info
التفاسير:

external-link copy
49 : 39

فَاِذَا مَسَّ الْاِنْسَانَ ضُرٌّ دَعَانَا ؗ— ثُمَّ اِذَا خَوَّلْنٰهُ نِعْمَةً مِّنَّا ۙ— قَالَ اِنَّمَاۤ اُوْتِیْتُهٗ عَلٰی عِلْمٍ ؕ— بَلْ هِیَ فِتْنَةٌ وَّلٰكِنَّ اَكْثَرَهُمْ لَا یَعْلَمُوْنَ ۟

ಮನುಷ್ಯನಿಗೆ ಯಾವುದಾದರೂ ಸಂಕಷ್ಟ ಬಾಧಿಸಿದರೆ ಅವನು ನಮ್ಮನ್ನು ಪ್ರಾರ್ಥಿಸುತ್ತಾನೆ. ತರುವಾಯ ನಾವು ಅವನಿಗೆ ನಮ್ಮ ಕಡೆಯಿಂದ ಯಾವುದಾದರೂ ಅನುಗ್ರಹವನ್ನು ದಯಪಾಲಿಸಿದರೆ ಅವನು ಇದನ್ನು ನನಗೆ ನನ್ನಜ್ಞಾನದ ಆಧಾರದಲ್ಲಿ ಕೊಡಲಾಗಿದೆ ಎನ್ನುತ್ತಾನೆ ಅಲ್ಲ !ಇದು ಒಂದು ಪರೀಕ್ಷೆಯಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ. info
التفاسير:

external-link copy
50 : 39

قَدْ قَالَهَا الَّذِیْنَ مِنْ قَبْلِهِمْ فَمَاۤ اَغْنٰی عَنْهُمْ مَّا كَانُوْا یَكْسِبُوْنَ ۟

ಇವರಿಗಿಂತ ಮುಂಚಿನವರೂ ಹೀಗೆ ಹೇಳಿದ್ದರು. ಆದರೆ ಅವರು ಗಳಿಸಿದ್ದು ಅವರ ಯಾವ ಪ್ರಯೋಜನಕ್ಕೂ ಬರಲಿಲ್ಲ. info
التفاسير:

external-link copy
51 : 39

فَاَصَابَهُمْ سَیِّاٰتُ مَا كَسَبُوْا ؕ— وَالَّذِیْنَ ظَلَمُوْا مِنْ هٰۤؤُلَآءِ سَیُصِیْبُهُمْ سَیِّاٰتُ مَا كَسَبُوْا ۙ— وَمَا هُمْ بِمُعْجِزِیْنَ ۟

ಆದುದರಿಂದ ಅವರ ಕೃತ್ಯಗಳ ದುಷ್ಟರಿಣಾಮಗಳು ಅವರ ಮೇಲೆ ಎರಗಿದವು ಮತ್ತು ಅವರ ಪÉÊಕಿ ಅಪರಾಧಿಗಳಾಗಿರುವವರು ಶೀಘ್ರವೇ ಅವರ ಗಳಿಕೆಯ ದುಷ್ಪಲಕ್ಕೆ ಗುರಿಯಾಗಲಿರುವರು. ಮತ್ತು ಅವರು ನಮ್ಮನ್ನು (ಅಲ್ಲಾಹನನ್ನು) ಸೋಲಿಸುವವರಲ್ಲ. info
التفاسير:

external-link copy
52 : 39

اَوَلَمْ یَعْلَمُوْۤا اَنَّ اللّٰهَ یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّ فِیْ ذٰلِكَ لَاٰیٰتٍ لِّقَوْمٍ یُّؤْمِنُوْنَ ۟۠

ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಮತ್ತು ಪರಿಮಿತಗೊಳಿಸುತ್ತಾನೆ ಎಂಬುದು ಇವರಿಗೆ ಗೊತ್ತಿಲ್ಲವೇ? ಖಂಡಿತವಾಗಿಯು ಇದರಲ್ಲಿ ವಿಶ್ವಾಸಿ ಜನರಿಗೆ ನಿದರ್ಶನಗಳಿವೆ. info
التفاسير:

external-link copy
53 : 39

قُلْ یٰعِبَادِیَ الَّذِیْنَ اَسْرَفُوْا عَلٰۤی اَنْفُسِهِمْ لَا تَقْنَطُوْا مِنْ رَّحْمَةِ اللّٰهِ ؕ— اِنَّ اللّٰهَ یَغْفِرُ الذُّنُوْبَ جَمِیْعًا ؕ— اِنَّهٗ هُوَ الْغَفُوْرُ الرَّحِیْمُ ۟

ಹೇಳಿರಿ: ಸ್ವತಃ ತಮ್ಮ ಮೇಲೆಯೇ ಅನ್ಯಾಯ ಮಾಡಿದಂತ ಓ ನನ್ನದಾಸರೇ, ನೀವು ಅಲ್ಲಾಹನ ಕರುಣೆಯಿಂದ ನಿರಾಶರಾಗಬೇಡಿರಿ. ನಿಶ್ಚಯವಾಗಿಯು ಅಲ್ಲಾಹನು ಸಕಲ ಪಾಪಗಳನ್ನು ಕ್ಷಮಿಸುತ್ತಾನೆ. ಖಂಡಿತವಾಗಿಯು ಅವನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
54 : 39

وَاَنِیْبُوْۤا اِلٰی رَبِّكُمْ وَاَسْلِمُوْا لَهٗ مِنْ قَبْلِ اَنْ یَّاْتِیَكُمُ الْعَذَابُ ثُمَّ لَا تُنْصَرُوْنَ ۟

ನಿಮ್ಮ ಮೇಲೆ ಯಾತನೆಯು ಬಂದೆರಗಿದ ಬಳಿಕ ನಿಮಗೆ ಸಹಾಯ ನೀಡಲಾಗದ ಸ್ಥಿತಿ ಬರುವುದಕ್ಕೂ ಮುನ್ನ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿರಿ ಹಾಗೂ ಅವನ ಆಜ್ಞಾನುಸರಣೆ ಮಾಡಿರಿ. info
التفاسير:

external-link copy
55 : 39

وَاتَّبِعُوْۤا اَحْسَنَ مَاۤ اُنْزِلَ اِلَیْكُمْ مِّنْ رَّبِّكُمْ مِّنْ قَبْلِ اَنْ یَّاْتِیَكُمُ الْعَذَابُ بَغْتَةً وَّاَنْتُمْ لَا تَشْعُرُوْنَ ۟ۙ

ಮತ್ತÄ ನೀವು ಊಹಿಸಿರದಂತಹ ಸ್ಥಿತಿಯಲ್ಲಿ ಹಠಾತ್ತಾನೆ ಯಾತನೆಯು ಬಂದೆರಗುವ ಮುನ್ನ ನೀವು ನಿಮ್ಮ ಪ್ರಭುವಿನ ಕಡೆಯಿಂದ ನಿಮ್ಮಡೆಗೆ ಅವತೀರ್ಣಗೊಂಡ ಗ್ರಂಥದಿAದ ಅತ್ಯುತ್ತಮವಾದುದನ್ನು ಅನುಸರಿಸಿರಿ. info
التفاسير:

external-link copy
56 : 39

اَنْ تَقُوْلَ نَفْسٌ یّٰحَسْرَتٰی عَلٰی مَا فَرَّطْتُ فِیْ جَنْۢبِ اللّٰهِ وَاِنْ كُنْتُ لَمِنَ السّٰخِرِیْنَ ۟ۙ

ಅಯ್ಯೋ! ಅಲ್ಲಾಹನ ಅನುಸರಣೆಯಲ್ಲಿ ಪ್ರಮಾದವೆಸಗಿ ನಾನು ಗೇಲಿ ಮಾಡುವವರ ಸಾಲಿಗೆ ಸೇರಿದ್ದೇನಲ್ಲ ಎಂದು ಯಾವೊಬ್ಬ ವ್ಯಕ್ತಿಗೂ ಹೇಳುವಂತಾಗಬಾರದು. info
التفاسير: