വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
75 : 23

وَلَوْ رَحِمْنٰهُمْ وَكَشَفْنَا مَا بِهِمْ مِّنْ ضُرٍّ لَّلَجُّوْا فِیْ طُغْیَانِهِمْ یَعْمَهُوْنَ ۟

ಮತ್ತು ನಾವು ಅವರ ಮೇಲೆ ಕರುಣೆ ತೋರಿದರೆ ಹಾಗೂ ಅವರಿಗೆ ಬಾಧಿಸಿದ ಸಂಕಷ್ಟವನ್ನು ನೀಗಿಸಿದರೆ ಖಂಡಿತ ಅವರು ತಮ್ಮ ಅತಿಕ್ರಮದಲ್ಲಿ ಅಂಧರಾಗಿ ದಾರಿಗೆಡುವರು. info
التفاسير:

external-link copy
76 : 23

وَلَقَدْ اَخَذْنٰهُمْ بِالْعَذَابِ فَمَا اسْتَكَانُوْا لِرَبِّهِمْ وَمَا یَتَضَرَّعُوْنَ ۟

ನಿಶ್ಚಯವಾಗಿಯೂ ನಾವು ಅವರನ್ನು ಶಿಕ್ಷೆಯ ಮೂಲಕ ಹಿಡಿದು ಬಿಟ್ಟೆವು. ಆದರೂ ಅವರು ತಮ್ಮ ಪ್ರಭುವಿಗೆ ವಿಧೇಯರಾಗಲಿಲ್ಲ ಮತ್ತು ದೈನ್ಯತೆ ತೋರಲಿಲ್ಲ. info
التفاسير:

external-link copy
77 : 23

حَتّٰۤی اِذَا فَتَحْنَا عَلَیْهِمْ بَابًا ذَا عَذَابٍ شَدِیْدٍ اِذَا هُمْ فِیْهِ مُبْلِسُوْنَ ۟۠

ಕೊನೆಗೆ ನಾವು ಅವರ ಮೇಲೆ ಅತ್ಯುಗ್ರ ಯಾತನೆಯ ದ್ವಾರವನ್ನು ತೆರೆದಾಗ ಕೂಡಲೇ ಅವರು ಅದರಲ್ಲಿ ಹತಾಶರಾಗಿ ಬಿಡುತ್ತಾರೆ. info
التفاسير:

external-link copy
78 : 23

وَهُوَ الَّذِیْۤ اَنْشَاَ لَكُمُ السَّمْعَ وَالْاَبْصَارَ وَالْاَفْـِٕدَةَ ؕ— قَلِیْلًا مَّا تَشْكُرُوْنَ ۟

ಅವನೇ ನಿಮಗೆ ಕಿವಿಯನ್ನು, ಕಣ್ಣುಗಳನ್ನು, ಹೃದಯಗಳನ್ನು ಸೃಷ್ಟಿಸಿದನು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ಸಲ್ಲಿಸುತ್ತೀರಿ. info
التفاسير:

external-link copy
79 : 23

وَهُوَ الَّذِیْ ذَرَاَكُمْ فِی الْاَرْضِ وَاِلَیْهِ تُحْشَرُوْنَ ۟

ಅವನೇ ನಿಮ್ಮನ್ನು ಭೂಮಿಯಲ್ಲಿ ಸೃಷ್ಟಿಸಿ ಹಬ್ಬಿಸಿದನು ಮತ್ತು ಅವನೆಡೆಗೇ ನೀವು ಒಟ್ಟು ಗೂಡಿಸಲಾಗುವಿರಿ. info
التفاسير:

external-link copy
80 : 23

وَهُوَ الَّذِیْ یُحْیٖ وَیُمِیْتُ وَلَهُ اخْتِلَافُ الَّیْلِ وَالنَّهَارِ ؕ— اَفَلَا تَعْقِلُوْنَ ۟

ಅವನೇ ಜೀವನ ನೀಡುತ್ತಾನೆ ಮತ್ತು ಮರಣ ಕೊಡುತ್ತಾನೆ. ಮತ್ತು ರಾತ್ರಿ ಹಗಲಿನ ಬದಲಾವಣೆಯ ನಿಯಂತ್ರಣ ಅವನ ಅಧೀನದಲ್ಲಿದೆ. ನೀವು ವಿವೇಚಿಸುವುದಿಲ್ಲವೆ? info
التفاسير:

external-link copy
81 : 23

بَلْ قَالُوْا مِثْلَ مَا قَالَ الْاَوَّلُوْنَ ۟

ಆದರೆ, ಅವರ ಪೂರ್ವಜರು ಹೇಳಿದಂತೆಯೇ ಹೇಳುತ್ತಾರೆ. info
التفاسير:

external-link copy
82 : 23

قَالُوْۤا ءَاِذَا مِتْنَا وَكُنَّا تُرَابًا وَّعِظَامًا ءَاِنَّا لَمَبْعُوْثُوْنَ ۟

ನಾವು ಸತ್ತು ಮಣ್ಣಾಗಿ ಮತ್ತು ಎಲುಬುಗಳಾದ ಬಳಿಕವೂ ನಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾಗವುದೇ? ಎನ್ನತ್ತಾರೆ. info
التفاسير:

external-link copy
83 : 23

لَقَدْ وُعِدْنَا نَحْنُ وَاٰبَآؤُنَا هٰذَا مِنْ قَبْلُ اِنْ هٰذَاۤ اِلَّاۤ اَسَاطِیْرُ الْاَوَّلِیْنَ ۟

ಖಂಡಿತ ಇದಕ್ಕಿಂತ ಮೊದಲು ನಮ್ಮೊಂದಿಗೂ, ನಮ್ಮ ಪೂರ್ವಜರೊಂದಿಗೂ ಇಂತಹದೇ ವಾಗ್ದಾನ ಮಾಡಲಾಗುತ್ತಿತ್ತು. ಇದು ಪೂರ್ವಿಕರ ಕಟ್ಟು ಕಥೆಗಳಲ್ಲದೇ ಬೇರೇನೂ ಅಲ್ಲ. info
التفاسير:

external-link copy
84 : 23

قُلْ لِّمَنِ الْاَرْضُ وَمَنْ فِیْهَاۤ اِنْ كُنْتُمْ تَعْلَمُوْنَ ۟

(ಪೈಗಂಬರರೇ) ಕೇಳಿರಿ, ನೀವು ಬಲ್ಲವರಾಗಿದ್ದರೆ: ಭೂಮಿ ಮತ್ತು ಅದರಲ್ಲಿರುವವರ ಒಡೆಯನಾರು? info
التفاسير:

external-link copy
85 : 23

سَیَقُوْلُوْنَ لِلّٰهِ ؕ— قُلْ اَفَلَا تَذَكَّرُوْنَ ۟

ಅವರು ಉತ್ತರಿಸುವರು: ಅಲ್ಲಾಹನಾಗಿದ್ದಾನೆ. ಹೇಳಿರಿ: ಹಾಗಿದ್ದೂ ನೀವು ಉಪದೇಶ ಸ್ವೀಕರಿಸುವುದಿಲ್ಲವೇ? info
التفاسير:

external-link copy
86 : 23

قُلْ مَنْ رَّبُّ السَّمٰوٰتِ السَّبْعِ وَرَبُّ الْعَرْشِ الْعَظِیْمِ ۟

ಕೇಳಿರಿ: ಏಳು ಆಕಾಶಗಳ ಮತ್ತು ಸಿಂಹಾಸನದ ಪ್ರಭು ಯಾರು? info
التفاسير:

external-link copy
87 : 23

سَیَقُوْلُوْنَ لِلّٰهِ ؕ— قُلْ اَفَلَا تَتَّقُوْنَ ۟

ಅವರು ಉತ್ತರಿಸುವರು: ಅಲ್ಲಾಹನು. ಹೇಳಿರಿ: ಹಾಗಿದ್ದೂ ನೀವು ಭಯ ಪಡುವುದಿಲ್ಲವೇ? info
التفاسير:

external-link copy
88 : 23

قُلْ مَنْ بِیَدِهٖ مَلَكُوْتُ كُلِّ شَیْءٍ وَّهُوَ یُجِیْرُ وَلَا یُجَارُ عَلَیْهِ اِنْ كُنْتُمْ تَعْلَمُوْنَ ۟

ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ. info
التفاسير:

external-link copy
89 : 23

سَیَقُوْلُوْنَ لِلّٰهِ ؕ— قُلْ فَاَنّٰی تُسْحَرُوْنَ ۟

ಕೇಳಿರಿ: ಸರ್ವ ವಸ್ತುಗಳ ಅಧಿಪತ್ಯವು ಯಾರ ಕೈಯಲ್ಲಿದೆ? ಅವನು ಎಲ್ಲರಿಗೂ ಆಶ್ರಯ ನೀಡುತ್ತಾನೆ ಮತ್ತು ಅವನ ವಿರುದ್ಧ ಯಾರಿಗೂ ಆಶ್ರಯ ನೀಡಲಾಗದು. ನೀವು ಬಲ್ಲವರಾಗಿದ್ದರೆ ಹೇಳಿರಿ. info
التفاسير: