വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
47 : 22

وَیَسْتَعْجِلُوْنَكَ بِالْعَذَابِ وَلَنْ یُّخْلِفَ اللّٰهُ وَعْدَهٗ ؕ— وَاِنَّ یَوْمًا عِنْدَ رَبِّكَ كَاَلْفِ سَنَةٍ مِّمَّا تَعُدُّوْنَ ۟

ಅವರು ಯಾತನೆಗೆ ಆತುರಪಟ್ಟುಕೊಳ್ಳುತ್ತಿದ್ದಾರೆ. ಆದರೆ ಅಲ್ಲಾಹನು ತನ್ನ ವಾಗ್ದನವನ್ನೆಂದೂ ಉಲ್ಲಂಘಿಸುವುದಿಲ್ಲ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಬಳಿ ಒಂದು ದಿನವೆಂದರೆ ನೀವು ಎಣಿಸುವ ಒಂದು ಸಾವಿರ ವರ್ಷಗಳದ್ದಾಗಿರುತ್ತದೆ. info
التفاسير:

external-link copy
48 : 22

وَكَاَیِّنْ مِّنْ قَرْیَةٍ اَمْلَیْتُ لَهَا وَهِیَ ظَالِمَةٌ ثُمَّ اَخَذْتُهَا ۚ— وَاِلَیَّ الْمَصِیْرُ ۟۠

ಅದೆಷ್ಟೋ ಅಕ್ರಮಿ ನಾಡುಗಳಿಗೆ ನಾನು ಕಾಲಾವಕಾಶವನ್ನು ನೀಡಿದೆನು. ಅನಂತರ ನಾನು ಅವರನ್ನು ಹಿಡಿದುಬಿಟ್ಟೆನು ಮತ್ತು ನನ್ನೆಡೆಗೇ ಮರಳುವಿಕೆಯಿರುವುದು. info
التفاسير:

external-link copy
49 : 22

قُلْ یٰۤاَیُّهَا النَّاسُ اِنَّمَاۤ اَنَا لَكُمْ نَذِیْرٌ مُّبِیْنٌ ۟ۚ

(ಓ ಪೈಗಂಬರರೇ) ಹೇಳಿರಿ: ಓ ಜನರೇ, ನಾನು ನಿಮಗೆ ಬಹಿರಂಗವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ. info
التفاسير:

external-link copy
50 : 22

فَالَّذِیْنَ اٰمَنُوْا وَعَمِلُوا الصّٰلِحٰتِ لَهُمْ مَّغْفِرَةٌ وَّرِزْقٌ كَرِیْمٌ ۟

ಯಾರು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡಿರುವರೋ ಅವರಿಗೆ ಕ್ಷಮೆಯೂ, ಗೌರವಪೂರ್ಣ ಜೀವನಾಧಾರವು ಇರುವುದು. info
التفاسير:

external-link copy
51 : 22

وَالَّذِیْنَ سَعَوْا فِیْۤ اٰیٰتِنَا مُعٰجِزِیْنَ اُولٰٓىِٕكَ اَصْحٰبُ الْجَحِیْمِ ۟

ನಮ್ಮ ದೃಷ್ಟಾಂತಗಳನ್ನು ಸೋಲಿಸುವ ಪ್ರಯತ್ನದಲ್ಲಿರುವವರು ನರಕವಾಸಿಗಳಾಗಿರುವರು. info
التفاسير:

external-link copy
52 : 22

وَمَاۤ اَرْسَلْنَا مِنْ قَبْلِكَ مِنْ رَّسُوْلٍ وَّلَا نَبِیٍّ اِلَّاۤ اِذَا تَمَنّٰۤی اَلْقَی الشَّیْطٰنُ فِیْۤ اُمْنِیَّتِهٖ ۚ— فَیَنْسَخُ اللّٰهُ مَا یُلْقِی الشَّیْطٰنُ ثُمَّ یُحْكِمُ اللّٰهُ اٰیٰتِهٖ ؕ— وَاللّٰهُ عَلِیْمٌ حَكِیْمٌ ۟ۙ

ನಾವು ನಿಮಗಿಂತ ಮೊದಲು ಯಾವೊಬ್ಬ ಸಂದೇಶವಾಹಕನನ್ನಾಗಲಿ, ಪ್ರವಾದಿಯನ್ನಾಗಲೀ ಕಳುಹಿಸಿರುತ್ತೇವೆಯೋ ಅವನು ಏನೇ ಉದ್ದೇಶಿಸಿದರೂ ಅವನ ಉದ್ದೇಶ ಮಾರ್ಗದಲ್ಲಿ ಶೈತಾನನು ದುಷ್ಪೆçÃರಣೆಗಳನ್ನು ಹಾಕಿದನು. ಆದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ನೀಗಿಸುತ್ತಾನೆ. ಮತ್ತು ತನ್ನ ವಚನಗಳನ್ನು ಸದೃಢಗೊಳಿಸುತ್ತಾನೆ. ಅಲ್ಲಾಹನು ಸರ್ವಜ್ಞನು, ಯುಕ್ತಿಪೂರ್ಣನು ಆಗಿರುವನು. info
التفاسير:

external-link copy
53 : 22

لِّیَجْعَلَ مَا یُلْقِی الشَّیْطٰنُ فِتْنَةً لِّلَّذِیْنَ فِیْ قُلُوْبِهِمْ مَّرَضٌ وَّالْقَاسِیَةِ قُلُوْبُهُمْ ؕ— وَاِنَّ الظّٰلِمِیْنَ لَفِیْ شِقَاقٍ بَعِیْدٍ ۟ۙ

ಇದೇಕೆಂದರೆ ಅಲ್ಲಾಹನು ಶೈತಾನನ ದುಷ್ಪೆçÃರಣೆಗಳನ್ನು ಹೃದಯಗಳಲ್ಲಿ ರೋಗವಿರುವವರಿಗೂ ಮತ್ತು ಕಠಿಣ ಹೃದಯವಂತರಿಗೂ ಪರೀಕ್ಷಾ ಸಾಧನವನ್ನಾಗಿ ಮಾಡಲೆಂದಾಗಿದೆ ಮತ್ತು ನಿಸ್ಸಂದೇಹವಾಗಿಯೂ ಅಕ್ರಮಿಗಳು ವಿರೋಧದಲ್ಲಿ ಬಹುದೂರ ಸರಿದಿದ್ದಾರೆ. info
التفاسير:

external-link copy
54 : 22

وَّلِیَعْلَمَ الَّذِیْنَ اُوْتُوا الْعِلْمَ اَنَّهُ الْحَقُّ مِنْ رَّبِّكَ فَیُؤْمِنُوْا بِهٖ فَتُخْبِتَ لَهٗ قُلُوْبُهُمْ ؕ— وَاِنَّ اللّٰهَ لَهَادِ الَّذِیْنَ اٰمَنُوْۤا اِلٰی صِرَاطٍ مُّسْتَقِیْمٍ ۟

ಮತ್ತು ಜ್ಞಾನ ಪಡೆದವರು ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವೇ ಆಗಿದೆಯೆಂದು ದೃಢವಾಗಿ ತಿಳಿಯಲೆಂದಾಗಿದೆ. ಆ ಬಳಿಕ ಅವರು ಅದರಲ್ಲಿ ವಿಶ್ವಾಸವಿಡಲಿ ಮತ್ತು ಅವರ ಹೃದಯಗಳು ಅದಕ್ಕೆ ಶರಣಾಗಲಿ. ನಿಶ್ಚಯವಾಗಿಯು ಅಲ್ಲಾಹನು ಸತ್ಯವಿಶ್ವಾಸವಿರಿಸಿದವರಿಗೆ ಋಜುವಾದ ಮಾರ್ಗದೆಡೆಗೆ ಮುನ್ನಡೆಸುತ್ತಾನೆ. info
التفاسير:

external-link copy
55 : 22

وَلَا یَزَالُ الَّذِیْنَ كَفَرُوْا فِیْ مِرْیَةٍ مِّنْهُ حَتّٰی تَاْتِیَهُمُ السَّاعَةُ بَغْتَةً اَوْ یَاْتِیَهُمْ عَذَابُ یَوْمٍ عَقِیْمٍ ۟

ಸತ್ಯನಿಷೇಧಿಸಿದವರು ದಿವ್ಯವಾಣಿಯ ಕುರಿತು ಸದಾ ಸಂದೇಹದಲ್ಲೇ ಇರುವರು. ಕೊನೆಗೆ ಅವರ ಮೇಲೆ ಅಂತ್ಯ ಗಳಿಗೆಯು ಹಠಾತ್ತನೆ ಬಂದುಬಿಡುವುದು ಅಥವಾ ಅಶುಭದಿನದ ಯಾತನೆಯು ಅವರ ಬಳಿ ಬಂದು ಬಿಡುವುದು. info
التفاسير: