വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
40 : 20

اِذْ تَمْشِیْۤ اُخْتُكَ فَتَقُوْلُ هَلْ اَدُلُّكُمْ عَلٰی مَنْ یَّكْفُلُهٗ ؕ— فَرَجَعْنٰكَ اِلٰۤی اُمِّكَ كَیْ تَقَرَّ عَیْنُهَا وَلَا تَحْزَنَ ؕ۬— وَقَتَلْتَ نَفْسًا فَنَجَّیْنٰكَ مِنَ الْغَمِّ وَفَتَنّٰكَ فُتُوْنًا ۫۬— فَلَبِثْتَ سِنِیْنَ فِیْۤ اَهْلِ مَدْیَنَ ۙ۬— ثُمَّ جِئْتَ عَلٰی قَدَرٍ یّٰمُوْسٰی ۟

ನಿನ್ನ ಸಹೋದರಿಯು (ಅಪರಿಚಿತಳಾಗಿ) ನಡೆದು ಹೋಗಿ: (ಫಿರ್‌ಔನನ ಮನೆಯವರಿಗೆ) ಈ ಶಿಶುವನ್ನು ಅತ್ಯುತ್ತಮವಾಗಿ ಆರೈಕೆ ಮಾಡುವವರ ಕುರಿತು ನಾನು ನಿಮಗೆ ತಿಳಿಸಿಕೊಡಲೇ? ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಈ ಉಪಾಯದ ಮೂಲಕ ನಾವು ನಿಮ್ಮನ್ನು (ಅರೈಕೆಗಾಗಿ) ಪುನಃ ನಿಮ್ಮ ತಾಯಿಯೆಡೆಗೆ ಅವಳ ಕಣ್ಣು ತಣಿಸಲೆಂದೂ, ಅವಳು ವ್ಯಥೆಪಡದಿರಲೆಂದೂ ಮರಳಿಸಿದೆವು.ಮತ್ತು ನೀವು (ಫಿರ್‌ಔನಿನ ಜನಾಂಗದ) ವ್ಯಕ್ತಿಯೊಬ್ಬನನ್ನು ಕೊಂದಿದ್ದಾಗಲೂ ನಿಮ್ಮನ್ನು ಅ ಮನೋವ್ಯಥೆಯಿಂದ ಪಾರು ಮಾಡಿದೆವು. ಒಟ್ಟಿನಲ್ಲಿ ನಾವು ನಿಮ್ಮನ್ನು ಪರೀಕ್ಷೆಗೊಳಪಡಿಸಿದೆವು. ಹಾಗೆಯೇ ನೀವು ಹಲವು ವರ್ಷಗಳ ಕಾಲ ಮದ್‌ಯನ್ ಜನರ ನಡುವೆ ತಂಗಿದ್ದೀರಿ. ತರುವಾಯ ನೀವು ನಿಶ್ಚಿತ ಸಮಯದಲ್ಲೇ ಬಂದಿರುವಿರಿ. info
التفاسير: