വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
126 : 20

قَالَ كَذٰلِكَ اَتَتْكَ اٰیٰتُنَا فَنَسِیْتَهَا ۚ— وَكَذٰلِكَ الْیَوْمَ تُنْسٰی ۟

ಆಗ ಅಲ್ಲಾಹನು ಹೇಳುವನು: ಇದೇ ಪ್ರಕಾರ ನಮ್ಮ ನಿದರ್ಶನಗಳು ನಿನ್ನ ಬಳಿ ಬಂದಾಗ ಅವುಗಳನ್ನು ನೀನು ಮರೆತು ಬಿಟ್ಟೆ info
التفاسير:

external-link copy
127 : 20

وَكَذٰلِكَ نَجْزِیْ مَنْ اَسْرَفَ وَلَمْ یُؤْمِنْ بِاٰیٰتِ رَبِّهٖ ؕ— وَلَعَذَابُ الْاٰخِرَةِ اَشَدُّ وَاَبْقٰی ۟

ಇದೇ ಪ್ರಕಾರ ತನ್ನ ಪ್ರಭುವಿನ ದೃಷ್ಟಾಂತಗಳಲ್ಲಿ ವಿಶ್ವಾಸವಿರಿಸದವನಿಗೆ ನಾವು ಪ್ರತಿಫಲ ನೀಡುವೆವು ಮತ್ತು ನಿಸ್ಸಂಶಯವಾಗಿಯು ಪರಲೋಕದ ಯಾತನೆಯು ಅತ್ಯುಗ್ರವು, ಅತ್ಯಂತ ಶಾಶ್ವತವು ಆಗಿರುತ್ತದೆ. info
التفاسير:

external-link copy
128 : 20

اَفَلَمْ یَهْدِ لَهُمْ كَمْ اَهْلَكْنَا قَبْلَهُمْ مِّنَ الْقُرُوْنِ یَمْشُوْنَ فِیْ مَسٰكِنِهِمْ ؕ— اِنَّ فِیْ ذٰلِكَ لَاٰیٰتٍ لِّاُولِی النُّهٰی ۟۠

ನಾವು ಇವರಿಗಿಂತ ಮುಂಚೆ ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿದ್ದೇವೆ. ಮತ್ತು ಇವರು ಅವರ ನಾಡುಗಳಲ್ಲಿ ಸಂಚರಿಸುತ್ತಾರೆ. ಇದು ಅವರಿಗೆ ಸನ್ಮಾರ್ಗ ತೋರಲಿಲ್ಲವೇ?ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿಶಾಲಿಗಳಿಗೆ ಅನೇಕ ನಿದರ್ಶನಗಳಿವೆ. info
التفاسير:

external-link copy
129 : 20

وَلَوْلَا كَلِمَةٌ سَبَقَتْ مِنْ رَّبِّكَ لَكَانَ لِزَامًا وَّاَجَلٌ مُّسَمًّی ۟ؕ

(ಓ ಪೈಗಂಬರರೇ) ನಿಮ್ಮ ಪ್ರಭುವಿನಿಂದ ಮೊದಲೇ ನಿರ್ಧರಿತ ವಚನ ಮತ್ತು ನಿಶ್ಚಯಿಸಲಾದ ಕಾಲಾವಧಿ ಇಲ್ಲದಿರುತ್ತಿದ್ದರೆ ಆಗಲೇ (ಸತ್ಯನಿಷೇಧಿ ಖುರೈಶರ ಮೇಲೆ) ಯಾತನೆಯು ಎರಗಿಬಿಡುತ್ತಿತ್ತು. info
التفاسير:

external-link copy
130 : 20

فَاصْبِرْ عَلٰی مَا یَقُوْلُوْنَ وَسَبِّحْ بِحَمْدِ رَبِّكَ قَبْلَ طُلُوْعِ الشَّمْسِ وَقَبْلَ غُرُوْبِهَا ۚ— وَمِنْ اٰنَآئِ الَّیْلِ فَسَبِّحْ وَاَطْرَافَ النَّهَارِ لَعَلَّكَ تَرْضٰی ۟

ಅವರಾಡುವ ಮಾತುಗಳ ಬಗ್ಗೆ ಸಹನೆ ವಹಿಸಿರಿ ಮತ್ತು ಸೂರ್ಯೋದಯ ಹಾಗೂ ಸೂರ್ಯಾಸ್ತಮಯಕ್ಕೆ ಮೊದಲು ನಿಮ್ಮ ಪ್ರಭುವಿನ ಸ್ತುತಿಯೊಂದಿಗೆ ಪಾವಿತ್ರö್ಯವನ್ನು ಕೊಂಡಾಡಿರಿ.ರಾತ್ರಿಯ ವೇಳೆಗಳಲ್ಲಿಯು, ಹಗಲಿನ ಅಂಚುಗಳಲ್ಲಿಯು ಅವನ ಪರಿಶುದ್ಧತೆಯನ್ನು ಕೊಂಡಾಡಿರಿ. ನೀವು ಸಂತೃಪ್ತಿ ಪಡೆಯಬಹುದು. info
التفاسير:

external-link copy
131 : 20

وَلَا تَمُدَّنَّ عَیْنَیْكَ اِلٰی مَا مَتَّعْنَا بِهٖۤ اَزْوَاجًا مِّنْهُمْ زَهْرَةَ الْحَیٰوةِ الدُّنْیَا ۙ۬— لِنَفْتِنَهُمْ فِیْهِ ؕ— وَرِزْقُ رَبِّكَ خَیْرٌ وَّاَبْقٰی ۟

ನಾವು ಸತ್ಯ ನಿಷೇಧಿಗಳ ಪೈಕಿ ವಿವಿಧ ಜನಾಂಗಗಳಿಗೆ ನೀಡಿದ ಸುಖಭೋಗ ಮತ್ತು ಐಹಿಕ ಜೀವನದ ವೈಭವದೆಡೆಗೆ ನೀವು ಕಣ್ಣೆತ್ತೂ ನೋಡಬೇಡಿ. ಅವುಗಳನ್ನು ನಾವು ಪರೀಕ್ಷಿಸಲಿಕ್ಕಾಗಿ ಅವರಿಗೆ ಕೊಟ್ಟಿದ್ದೇವೆ. ನಿಮಗೆ ನಿಮ್ಮ ಪ್ರಭುವಿನಿಂದ ನೀಡಲಾದುದೇ ಉತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ. info
التفاسير:

external-link copy
132 : 20

وَاْمُرْ اَهْلَكَ بِالصَّلٰوةِ وَاصْطَبِرْ عَلَیْهَا ؕ— لَا نَسْـَٔلُكَ رِزْقًا ؕ— نَحْنُ نَرْزُقُكَ ؕ— وَالْعَاقِبَةُ لِلتَّقْوٰی ۟

ನಿಮ್ಮ ಮನೆಯವರಿಗೆ ನಮಾಝ್‌ನ ಆದೇಶ ನೀಡಿರಿ ಮತ್ತು ನೀವು ಸಹ ಅದರಲ್ಲಿ ಸ್ಥಿರಚಿತ್ತರಾಗಿರಿ. ನಾವು ನಿಮ್ಮಿಂದ ಜೀವನಾಧಾರವನ್ನು ಕೇಳುತ್ತಿಲ್ಲ. ಬದಲಾಗಿ ಸ್ವತಃ ನಾವೇ ನಿಮಗೆ ಜೀವನಾಧಾರ ನೀಡುತ್ತೇವೆ ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪ್ರತಿಫಲವಿರುವುದು. info
التفاسير:

external-link copy
133 : 20

وَقَالُوْا لَوْلَا یَاْتِیْنَا بِاٰیَةٍ مِّنْ رَّبِّهٖ ؕ— اَوَلَمْ تَاْتِهِمْ بَیِّنَةُ مَا فِی الصُّحُفِ الْاُوْلٰی ۟

ಈ ಪೈಗಂಬರ್ ತನ್ನ ಪ್ರಭುವಿನಿಂದ ನಮ್ಮಲ್ಲಿಗೆ ಯಾವುದೇ ದೃಷ್ಟಾಂತವನ್ನು ಏಕೆ ತರುವುದಿಲ್ಲ? ಎಂದು ಅವರು ಕೇಳುತ್ತಾರೆ. (ಅಲ್ಲಾಹನು ಹೇಳುತ್ತಾನೆ) ಅವರ ಬಳಿ ಹಿಂದಿನ ಗ್ರಂಥದಲ್ಲಿದ್ದAತಹ ಸುಸ್ಪಷ್ಟ ಪುರಾವೆಯು ತಲುಪಲಿಲ್ಲವೇ? info
التفاسير:

external-link copy
134 : 20

وَلَوْ اَنَّاۤ اَهْلَكْنٰهُمْ بِعَذَابٍ مِّنْ قَبْلِهٖ لَقَالُوْا رَبَّنَا لَوْلَاۤ اَرْسَلْتَ اِلَیْنَا رَسُوْلًا فَنَتَّبِعَ اٰیٰتِكَ مِنْ قَبْلِ اَنْ نَّذِلَّ وَنَخْزٰی ۟

ಮತ್ತು ನಾವೇನಾದರೂ ಈ (ಕುರ್‌ಆನನ್ನು ಅವತೀರ್ಣಗೊಳಿಸುವುದಕ್ಕಿಂತ) ಮುಂಚೆಯೇ ಅವರನ್ನು ಯಾತನೆಯ ಮೂಲಕ ನಾಶ ಮಾಡಿರುತ್ತಿದ್ದರೆ ಖಂಡಿತವಾಗಿಯೂ ಅವರು ಹೇಳುತ್ತಿದ್ದರು: ನಮ್ಮ ಪ್ರಭು ನೀನೇಕೆ ನಮ್ಮೆಡೆಗೆ ಒಬ್ಬ ಸಂದೇಶವಾಹಕನನ್ನು ಕಳುಹಿಸಿ ಕೊಡಲಿಲ್ಲ? ನಾವು ಅಪಮಾನಿತರೂ ನಿಂದ್ಯರೂ ಆಗುವ ಮೊದಲು ನಿನ್ನ ಸೂಕ್ತಿಗಳನ್ನು ಅನುಸರಿಸುತ್ತಿದ್ದೆವು. info
التفاسير:

external-link copy
135 : 20

قُلْ كُلٌّ مُّتَرَبِّصٌ فَتَرَبَّصُوْا ۚ— فَسَتَعْلَمُوْنَ مَنْ اَصْحٰبُ الصِّرَاطِ السَّوِیِّ وَمَنِ اهْتَدٰی ۟۠

ಹೇಳಿರಿ: ಪ್ರತಿಯೊಬ್ಬನೂ ಪರಿಣಾಮದ ನಿರೀಕ್ಷೆಯಲ್ಲಿರುವನು. ಇನ್ನು ನೀವೂ ನಿರೀಕ್ಷಿಸುತ್ತಿರಿ. ಯಾರು ಋಜು ಮಾರ್ಗದವರು ಮತ್ತು ಯಾರು ಸನ್ಮಾರ್ಗ ಪಡೆದವರೆಂದು ಸಧ್ಯವೇ ನೀವು ಅರಿತುಕೊಳ್ಳಲಿದ್ದೀರಿ. info
التفاسير: