വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
259 : 2

اَوْ كَالَّذِیْ مَرَّ عَلٰی قَرْیَةٍ وَّهِیَ خَاوِیَةٌ عَلٰی عُرُوْشِهَا ۚ— قَالَ اَنّٰی یُحْیٖ هٰذِهِ اللّٰهُ بَعْدَ مَوْتِهَا ۚ— فَاَمَاتَهُ اللّٰهُ مِائَةَ عَامٍ ثُمَّ بَعَثَهٗ ؕ— قَالَ كَمْ لَبِثْتَ ؕ— قَالَ لَبِثْتُ یَوْمًا اَوْ بَعْضَ یَوْمٍ ؕ— قَالَ بَلْ لَّبِثْتَ مِائَةَ عَامٍ فَانْظُرْ اِلٰی طَعَامِكَ وَشَرَابِكَ لَمْ یَتَسَنَّهْ ۚ— وَانْظُرْ اِلٰی حِمَارِكَ۫— وَلِنَجْعَلَكَ اٰیَةً لِّلنَّاسِ وَانْظُرْ اِلَی الْعِظَامِ كَیْفَ نُنْشِزُهَا ثُمَّ نَكْسُوْهَا لَحْمًا ؕ— فَلَمَّا تَبَیَّنَ لَهٗ ۙ— قَالَ اَعْلَمُ اَنَّ اللّٰهَ عَلٰی كُلِّ شَیْءٍ قَدِیْرٌ ۟

ಅಥವಾ ಛಾವಣಿಗಳೊಂದಿಗೆ ಕುಸಿದು ಬಿದ್ದಿದ್ದಂತಹ ನಾಡೊಂದನ್ನು ಹಾದು ಹೋಗುತ್ತಿದ್ದ ವ್ಯಕ್ತಿಯ ದೃಷ್ಟಾಂತವನ್ನು ನೀವು ನೋಡಲಿಲ್ಲವೇ? ಅವನು ಹೇಳಿದನು. ಇದರ ನಿರ್ಜೀವಾವಸ್ಥೆಯ ಬಳಿಕ ಅಲ್ಲಾಹನು ಇದನ್ನು ಹೇಗೆ ಜೀವಂತಗೊಳಿಸುವನು? ಆಗ ಅವನನ್ನು ಅಲ್ಲಾಹನು ನೂರು ವರ್ಷಗಳವರೆಗೆ ಮರಣಗೊಳಿಸಿದನು. ಅನಂತರ ಅವನನ್ನು ಎಬ್ಬಿಸಿ ಕೇಳಿದನು; ನಿನ್ನ ಮೇಲೆ ಎಷ್ಟು ಕಾಲ ಸರಿದಿದೆ? ಒಂದು ದಿನ ಅಥವಾ ದಿನದ ಸ್ವಲ್ಪ ಸಮಯ ಎಂದನು. ಅಲ್ಲಾಹನು ಹೇಳಿದನು; ಹಾಗಲ್ಲ! ವಸ್ತುತಃ ನೀನು ನೂರು ವರ್ಷಗಳ ಕಾಲ ಈ ಸ್ಥಿತಿಯಲಿದ್ದೆ ಇನ್ನು ನೀನು ನಿನ್ನ ಆಹಾರ ಪಾನೀಯದೆಡೆಗೆ ನೋಡು. ಒಂದಿಷ್ಟೂ ಹಾಳಾಗಿರುವುದಿಲ್ಲ. ಮತ್ತು ನಿನ್ನ ಕತ್ತೆಯೆಡೆಗೂ ನೋಡು(ಅದರ ಅಸ್ಥಿಪಂಜರವೂ ಶಿಥಿಲವಾಗಿ ಹೋಗಿದೆ). ನಾವು ನಿನ್ನನ್ನು ಜನರಿಗೆ ಒಂದು ನಿದರ್ಶನವನ್ನಾಗಿ ಮಾಡುತ್ತೇವೆ. ನೀನು ಎಲುಬುಗಳೆಡೆಗೆ ನೋಡು ನಾವು ಅವುಗಳನ್ನು ಹೇಗೆ ಸೃಷ್ಟಿಸುತ್ತೇವೆ ಅನಂತರ ಅವುಗಳಿಗೆ ಮಾಂಸವನ್ನು ಹೊದಿಸುತ್ತೇವೆಂದು. ಹಾಗೇಯೇ, ಅವನಿಗೆ ಎಲ್ಲವೂ ಸ್ಪಷ್ಟವಾದಾಗ ನಿಸ್ಸಂಶಯವಾಗಿಯು ಅಲ್ಲಾಹನು ಸಕಲ ಸಂಗತಿಗಳ ಮೇಲೆ ಸಾಮರ್ಥ್ಯವುಳ್ಳವನೆಂದು ನಾನು ಖಂಡಿತವಾಗಿ ಅರಿತಿದ್ದೇನೆ ಎಂದು ಹೇಳಿದನು. info
التفاسير: